ಬೆಂಗಳೂರು(ಜೂ. 03) ಕನ್ನಡಿಗರ  ಸ್ವಾಭಿಮಾನಕ್ಕೆ ಧಕ್ಕೆ ತಂದು ಕೆಂಗಣ್ಣಿಗೆ ಗುರಿಯಾಗಿದ್ದ ಗೂಗಲ್ ಕೊನೆಗೂ ಕ್ಷಮೆ ಕೇಳಿದೆ. ತನ್ನ ತಪ್ಪು ಒಪ್ಪಿಕೊಂಡಿದೆ.

ಕನ್ನಡವನ್ನು Ugliest language in India ಎಂದು ಕರೆದ ಗೂಗಲ್ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿತ್ತು. ಕಾನೂನು ಸಮರ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

ನಮ್ಮಿಂದ ತಪ್ಪು ಅರ್ಥ ಬಂದಿದ್ದರೆ ಕ್ಷಮೆ ಕೇಳುತ್ತಿದ್ದೇವೆ ಎಂದು ಗೂಗಲ್ ಟ್ವೀಟ್ ಮಾಡಿದೆ.  ಆಂಗ್ಲ ಮತ್ತು ಕನ್ನಡದಲ್ಲಿ ಎರಡು ಹೇಳಿಕೆ ನೀಡಿದೆ.  ಮಾಜಿ ಸಿಎಂ ಕುಮಾರಸ್ವಾಮಿ ಆದಿಯಾಗಿ   ನಟ-ನಟಿಯರು ಆಕ್ರೋಶ ಹೊರಹಾಕಿದ್ದರು. ಒಟ್ಟಿನಲ್ಲಿ ಜನಾಕ್ರೋಶದ ಪರಿಣಾಮ ಗೂಗಲ್ ಸದ್ಯಕ್ಕೆ ಒಂದು ಪಾಠ ಕಲಿತಿದೆ.

ಕನ್ನಡಿಗರ ಸ್ವಾಭಿಮಾನ ಪ್ರದರ್ಶನ

Ugliest language in Indiaಕ್ಕೆ ಗೂಗಲ್ ಕನ್ನಡ ಎಂಬ ಉತ್ತರ ನೀಡುತ್ತಿದ್ದುದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತವಾಗಿ ಗೂಗಲ್ ತನ್ನ ಎಡವಟ್ಟನ್ನು ತಿದ್ದಿಕೊಂಡಿತ್ತು. ಗೂಗಲ್ ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು.