ಆರು ತಿಂಗಳಿನಿಂದ ಶೂಟಿಂಗ್‌ನಲ್ಲಿ ಭಾಗಿಯಾಗದೇ ಇದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಇದೀಗ ಮಹೇಶ್‌ ಗೌಡ ನಿರ್ದೇಶನದ ‘ತ್ರಿಬಲ್‌ ರೈಡಿಂಗ್‌’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಹಂತದಲ್ಲಿ ಕ್ಯಾಮೆರಾ ಜತೆಗಿನ ಸಂಬಂಧದ ಬಗ್ಗೆ ವಿವರಿಸುತ್ತಾ, ‘ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟವರ. 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ, ತ್ರಿಬಲ್‌ ರೈಡಿಂಗ್‌ ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ’ ಎಂದಿದ್ದಾರೆ. ಮೇಘ ಶೆಟ್ಟಿಚಿತ್ರದ ನಾಯಕಿ. ರಾಮ್‌ ಗೋಪಾಲ್‌ ನಿರ್ಮಾಪಕ.

ಶಂಭೋ ಶಿವ ಶಂಕರ’ ಚಿತ್ರತಂಡ ಇದೀಗ ಮೊದಲ ಶೆಡ್ಯೂಲ್‌ ಶೂಟಿಂಗ್‌ ಪೂರ್ಣ ಮಾಡಿಕೊಂಡಿದೆ. ಕಿರುತೆರೆ ನಿರ್ದೇಶಕ ಶಂಕರ್‌ ಕೋನಮಾನಹಳ್ಳಿ ಮೊದಲ ಬಾರಿಗೆ ನಿರ್ದೇಶನ ಮಾಡಿರುತ್ತಿರುವ ಚಿತ್ರದಲ್ಲಿ ಅಭಯ್‌ ಪುನೀತ್‌, ರೋಹಿತ್‌, ರಕ್ಷಕ್‌ ಮೂವರು ನಾಯಕರು. ಸೋನಲ್‌ ಮೊಂತೆರೋ ನಾಯಕಿ. ಮುಖ್ಯ ಪಾತ್ರದಲ್ಲಿ ಜೋಗಿ ನಾಗರಾಜ್‌ ನಟಿಸಿದ್ದಾರೆ.

'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್

ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ‘ಚಡ್ಡಿ ದೋಸ್‌್ತ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಇದೀಗ ಪೂರ್ಣವಾಗಿ ಶೂಟಿಂಗ್‌ ಮತ್ತು ಡಬ್ಬಿಂಗ್‌ ಕಾರ್ಯಗಳನ್ನು ಮುಗಿಸಿಕೊಂಡಿದೆ. ಕೌಂಡಿನ್ಯ ಕಾದಂಬರಿಯನ್ನು ಆಧರಿತ ಸಿನಿಮಾ. ಆಸ್ಕರ್‌ ಕೃಷ್ಣ ನಿರ್ಮಾಣದ ಜತೆಗೆ, ಲೋಕೇಂದ್ರ ಸೂರ್ಯ ನಿರ್ದೇಶನದ ಜತೆಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಗೌರಿ ನಾಯರ್‌ ಚಿತ್ರದ ನಾಯಕಿ.

ನೈಜ ಘಟನೆ ಆಧರಿಸಿದ ಮತ್ತೊಂದು ಸಿನಿಮಾ ‘ಡಿಸೆಂಬರ್‌ 24’ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದೆ. ನಾಗರಾಜ್‌ ಎಂ ಜಿ ಗೌಡ ಚಿತ್ರದ ನಿರ್ದೇಶಕ. ಎ ದೇವು ಹಾಸನ್‌, ವಿ ಬೆಟ್ಟೇಗೌಡ ಚಿತ್ರದ ನಿರ್ಮಾಪಕರು. ಉಸಿರಾಟದ ಸಮಸ್ಯೆಯಿಂದ ಸಾವು ಕಾಣುವ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಘಟನೆಯನ್ನು ಮುಂದಿಟ್ಟುಕೊಂಡು ಅದಕ್ಕೆ ಸಿನಿಮಾ ರೂಪ ನೀಡಲಾಗಿದೆ. ಅಪ್ಪು ಬಡಿಗೇರ, ರವಿ ಕೆ ಆರ್‌ ಪೇಟೆ, ರಘು ಶೆಟ್ಟಿ, ಜಗದೀಶ್‌ ಹೆಚ್‌ ಜಿ ದೊಡ್ಡಿ, ಪೂಜಾ, ಜಿ.ಸಂಹಿತಾ ಅರಣ್ಯ, ಭೂಮಿಕಾ ರಮೇಶ್‌ ನಟಿಸುತ್ತಿದ್ದಾರೆ.

ಕೋಟಿಗೊಬ್ಬ 2 ರಿ-ರಿಲೀಸ್: 30ಕ್ಕೂ ಹೆಚ್ಚು ಮಾಲ್‌ಗಳಲ್ಲಿ ಪ್ರದರ್ಶನ

ಕುಡುಕ ಗಂಡಂದಿರು, ಮೇಕಪ್‌ ಪ್ರಿಯ ಹೆಂಡತಿಯರ ನಡುವೆ ಆಗುವ ಜಗಳ, ಹೊಂದಾಣಿಕೆಗಳನ್ನು ಕಾಮಿಡಿಯಾಗಿ ತೋರಿಸಿರುವ ‘ಅಮೃತಾಂಜನ್‌’ ವೆಬ್‌ ಸೀರಿಸ್‌ ಲಕ್ಷಾಂತರ ವೀಕ್ಷಕರನ್ನು ಪಡೆದು ದಾಖಲೆ ಬರೆದಿದೆ. ನಿರ್ದೇಶಕ ಜ್ಯೋತಿ ರಾವ್‌ ಮೋಹಿತ್‌ ಈ ವೆಬ್‌ಸೀರೀಸ್‌ ಅನ್ನು ಸೋಷಲ್‌ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿ ಇದನ್ನು ತಮಿಳು, ತೆಲುಗಿನಲ್ಲಿಯೂ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಕ್ರೌಡ್‌ ಫಂಡಿಂಗ್‌ಗಾಗಿ ಮೊರೆ ಹೋಗಿದ್ದ ತಂಡಕ್ಕೆ ಇದೀಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ದೇಶ ವಿದೇಶಗಳಿಂದಲೂ ಸಾಕಷ್ಟುಮಂದಿ ಕೈ ಜೋಡಿಸಿದ್ದಾರೆ. ಪಾಯಲ್‌ ಚೆಂಗಪ್ಪ, ಕಾರ್ತಿಕ್‌ ರೆಡ್ಡಿ, ಕೌರವ್‌ ಶೆಟ್ಟಿ, ಸ್ಫೂರ್ತಿ ರಮಿತಾ, ಶ್ರೀಭವ್ಯ, ಗಂಗಾಧರ್‌ ನಾಗತಿಹಳ್ಳಿ, ದರ್ಶನ್‌ ಶೆಟ್ಟಿ, ದಯಾನಂದ್‌ ಸಾಗರ್‌ ನಟನೆಯ ಈ ವೆಬ್‌ ಸಿರೀಸ್‌ಗೆ ಹೃತ್ವಿಕ್‌ ಮುರುಳೀಧರ್‌ ಬಿಜಿಎಂ ಮಾಡಿದ್ದರೆ, ಹರ್ಷಿತ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ.