ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ 2’ ಚಿತ್ರವನ್ನು ಅ.23ರಂದು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವನ್ನು ಮೈಸೂರು ಟಾಕೀಸ್‌ ಮೂಲಕ ಜಾಕ್‌ ಮಂಜು ಅವರೇ ಬಿಡುಗಡೆ ಮಾಡುತ್ತಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ 30ಕ್ಕೂ ಹೆಚ್ಚು ಮಾಲ್‌ಗಳಲ್ಲಿ ‘ಕೋಟಿಗೊಬ್ಬ 2’ ತೆರೆ ಮೇಲೆ ಬರುತ್ತಿದೆ. ಇನ್ನೂ ಸಿಂಗಲ್‌ ಸ್ಕ್ರೀನ್‌ ಸೇರಿದಂತೆ ಮತ್ತಷ್ಟುಚಿತ್ರಮಂದಿರಗಳು ಜತೆ ಆಗಲಿವೆ. ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ 2’ ಸಿನಿಮಾ ತೆರೆಗೆ ಬರುತ್ತಿದೆ.

ಹೋರಾಟ ಗೆದ್ದು ಬಂದ ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್

ಹೊಸಬರ ಚಿತ್ರಗಳೇ ಮರು ಬಿಡುಗಡೆ ಆಗುತ್ತಿವೆ ಎಂದುಕೊಳ್ಳುತ್ತಿದ್ದವರು ಈಗ ಸ್ಟಾರ್‌ ನಟನ ಚಿತ್ರ ಕೂಡ ಮತ್ತೊಮ್ಮೆ ತೆರೆ ಮೇಲೆ ನೋಡುವ ಭಾಗ್ಯ ಪ್ರೇಕ್ಷಕರಿಗೆ ದೊರೆಯುತ್ತಿದೆ.

ಕೆಎಸ್‌ ರವಿಕುಮಾರ್‌ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ 2016ರಲ್ಲಿ ಬಿಡುಗಡೆ ಆಗಿತ್ತು. ಈಗ ಇದೇ ನಿರ್ಮಾಪಕರು ಶಿವ ಕಾರ್ತಿಕ್‌ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಚಿತ್ರವನ್ನು ನಿರ್ಮಿಸಿದ್ದು, ಅದು ಬಿಡುಗಡೆಯ ಹಂತಕ್ಕೆ ಬಂದಿದೆ.