Asianet Suvarna News Asianet Suvarna News

'ಚಿರು, ನಿನ್ನ ಹಾಗೆ ನಮ್ಮ ಮಗುವನ್ನು ಬೆಳೆಸ್ತೀನಿ' ಮೇಘನಾ ಭಾವುಕ ಮಾತು, ವಿಡಿಯೋ ವೈರಲ್

ಚಿರುಗೆ ಮೇಘನಾ ಪ್ರಾಮಿಸ್‌ | ವಿಡಿಯೋ ವೈರಲ್ | ಮೇಘನಾ ಭಾವುಕ ಮಾತುಗಳು

Meghana raj emotional video goes viral as she did a promise to chiru sarja dpl
Author
Bangalore, First Published Oct 20, 2020, 9:44 AM IST

ತಾಯ್ತನದ ಹೊಸ್ತಿಲಲ್ಲಿರುವ ಮೇಘನಾ ರಾಜ್‌ ಭಾವನಾತ್ಮಕ ವೀಡಿಯೋವೊಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷದ ಈ ವೀಡಿಯೋದಲ್ಲಿ, ತನ್ನ ಬಾಲ್ಯ, ವಿವಾಹದ ಆಲ್ಬಂ ತಿರುವುತ್ತಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಆಲ್ಬಂ ನೋಡಿ ಮಾತನಾಡಿದ ಮೇಘನಾ, ‘ಆಲ್ಬಂನ ಒಂದೊಂದು ಫೋಟೋವೂ ನನ್ನ ಬಾಲ್ಯವನ್ನು ನೆನಪಿಸುತ್ತದೆ. ಚಿರುವಿನ ಜೊತೆಗೆ ಕಳೆದ ಕ್ಷಣಗಳನ್ನೂ. ನನ್ನ ಪ್ರೀತಿಯ ಚಿರು, ಬದುಕಿನ ಸಂತಸದ ಕ್ಷಣಗಳನ್ನು ನಿನ್ನ ಜೊತೆಗೆ ಕಳೆದಿದ್ದೇನೆ. ಆ ಕ್ಷಣಗಳೇ ನಿತ್ಯ ಬದುಕಿಗೆ ಸ್ಫೂರ್ತಿ ತುಂಬುತ್ತದೆ ಎಂದಿದ್ದಾರೆ.

ಮೇಘನಾ ರಾಜ್‌ಗೆ ಸರ್ಪ್ರೈಸ್‌ ಬೇಬಿ ಶವರ್ ಮಾಡಿಸಿದ ಧ್ರುವ; ಫೋಟೋ ನೋಡಿ!

ನೀನಿದ್ದಾಗ ಏನೂ ಕೊರತೆಯಿಲ್ಲದಂತೆ ನೋಡಿಕೊಂಡಿದ್ದಿ. ಆ ನೆನಪುಗಳೇ ನನಗೀಗ ಬದುಕಾಗಿದೆ. ನಿನ್ನ ದೈವಿಕ ಆಶೀರ್ವಾದದೊಂದಿಗೆ ಈಗ ನನ್ನ ತಾಯ್ತನದ ಜರ್ನಿ ಸಾಗುತ್ತಿದೆ. ಈ ಹೊತ್ತಲ್ಲಿ ನಿನಗೆ ನಾನೊಂದು ಪ್ರಾಮಿಸ್‌ ಮಾಡುತ್ತೇನೆ ಎಂದಿದ್ದಾರೆ.

 
 
 
 
 
 
 
 
 
 
 
 
 

Thank you @charismomic and @bipin.veena for your overwhelming message. I am truly touched by your commitment to improve motherhood experiences & delighted to be an extremely satisfied recipient of your unique offerings at the same time. Thank you again for being extremely understanding and also a means of a support system by understanding my situation and reaching out to me to make this journey a special and memorable one! Credits: Direction: @thahseennazer Dop: sunil_karthi Music:sandeep Sugunan @thesoundconcept Producer: @midhun_jayakrishnan Production: @janairmodelsandproductions Makeup : @shalinismakeupprofile Hairstylist: @makeover_by_raghu_nagaraj_n #motherhood #momtobe #newmom #maternityfashion #maternityindia #mom #pregnancy #preggers #instamoment #fashionbloggers #pregnancy_lifestyle #pregnantwithstyle #pregnantbellybump #chiranjeevisarjafans #chirusarja #meghanarajsarja #juniorchiru

A post shared by Meghana Raj Sarja (@megsraj) on Oct 18, 2020 at 11:31pm PDT

ನಮ್ಮ ಮಗುವನ್ನು ಮಾನವೀಯ ವ್ಯಕ್ತಿಯಾಗಿ ಬೆಳೆಸುತ್ತೇನೆ, ನಿನ್ನ ಹಾಗೆಯೇ. ಮತ್ತೆ ಹೊಸ ಬದುಕಿಗೆ ಹೊಸ ಕನಸಿನೊಂದಿಗೆ ಮುಂದಡಿ ಇಡುತ್ತೇನೆ’ ಎನ್ನುವ ವೀಡಿಯೋ ಈಗ ವೈರಲ್‌ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಈ ವೀಡಿಯೋ ನೋಡಿ ಮೇಘನಾಗೆ ಶುಭ ಹಾರೈಸಿದ್ದಾರೆ.

Follow Us:
Download App:
  • android
  • ios