ಹೊಸ ಹುಡುಗರಿಗೆ ಸಪೋರ್ಟ್ ಮಾಡಬೇಕು, ಇಂಡಸ್ಟ್ರಿ ಬೆಳೀಬೇಕು: ಶಿವರಾಜ್‌ಕುಮಾರ್
ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಶಿವರಾಜ್‌ಕುಮಾರ್ ಬೆಂಬಲ. ಸೂಪರ್ ಹಿಟ್ ಆಗುತ್ತಿರುವ ಸಿನಿಮಾ ಹೇಗಿದೆ?
ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡವನ್ನು ಶಿವರಾಜ್ ಕುಮಾರ್ ಅಭಿನಂದಿಸಿದ್ದಾರೆ. ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, ಮಗಳು ನಿವೇದಿತಾ ಜೊತೆಗೆ ಚಿತ್ರಮಂದಿರದಲ್ಲಿ ಈ ಸಿನಿಮಾ ವೀಕ್ಷಿಸಿದ ಶಿವಣ್ಣ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಬಳಿಕ ತಮ್ಮ ನಿವಾಸಕ್ಕೆ ಚಿತ್ರತಂಡವನ್ನು ಆಹ್ವಾನಿಸಿ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದರು.
‘ಸಿನಿಮಾ ಚೆನ್ನಾಗಿದ್ದರೆ ನೈತಿಕ ಬೆಂಬಲ ನೀಡುವುದಕ್ಕಿಂತಲೂ ಹೆಚ್ಚಾಗಿ ಚಿತ್ರವನ್ನು ನಾವು ನೋಡಿ ಸಾಥ್ ನೀಡಬಹುದು. ಚಿತ್ರ ಇಂಟರೆಸ್ಟಿಂಗ್ ಅನಿಸಿತು. ಜನ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದು ಈ ಸಿನಿಮಾ ನೋಡಿ ಸಪೋರ್ಟ್ ಮಾಡಿದ್ದು ಖುಷಿ ಹೆಚ್ಚಿಸಿತು. ಹೊಸಬರ ಒಂದೊಳ್ಳೆ ಪ್ರಯತ್ನಕ್ಕೆ ಇಡೀ ಸ್ಯಾಂಡಲ್‌ವುಡ್ ಸಾಥ್ ಕೊಟ್ಟಿದೆ. ಇಂಡಸ್ಟ್ರಿ ಅಂದರೆ ಒಂದು ಫ್ಯಾಮಿಲಿ. ಕುಟುಂಬ ಅಂದಾಗ ಯಾರದ್ದೇ ಸಿನಿಮಾವಾಗಲಿ ಪ್ರೋತ್ಸಾಹ ಮಾಡಬೇಕು’ ಎಂದರು.
ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್
ರಮ್ಯಾ ವಿವಾದದ ಬಗ್ಗೆಯೂ ಮಾತನಾಡಿದ ಶಿವಣ್ಣ, ‘ಯಾರ ಬಗ್ಗೆಯೂ ಕಮೆಂಟ್ ಮಾಡುವುದು ಬೇಡ. ಕೊನೆಗೂ ಮುಖ್ಯವಾಗೋದು ಸಿನಿಮಾದ ಗೆಲುವು. ಒಳ್ಳೆ ಮನಸ್ಸಿನಿಂದ ಚಿತ್ರ ಮಾಡಿದರೆ ಅದಕ್ಕೆ ಯಾವುದೇ ತಡೆ ಬರಲ್ಲ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆ. ಅಭಿಮಾನಿ ದೇವರುಗಳು ಒಳ್ಳೆ ಸಿನಿಮಾಗೆ ಕೈಬಿಡಲ್ಲ ಎಂಬುದನ್ನು ಅವರವರು ತಿಳಿದುಕೊಳ್ಳಬೇಕು. ಯಾಕೆ ಹೀಗಾಯ್ತು ಅನ್ನೋದು ಗೊತ್ತಾಗ್ತಿಲ್ಲ. ನಮ್ಮ ಇಂಡಸ್ಟ್ರಿ ಬೆಳೀಬೇಕು ಅಷ್ಟೆ. ಹೊಸಬರು ಬಂದಾಗ ಎಲ್ಲರೂ ಸಪೋರ್ಟ್ ಮಾಡಬೇಕು. ಆ ವಿಚಾರವನ್ನು ಈಗ ದೊಡ್ಡದು ಮಾಡುವುದು ಬೇಡ’ ಎಂದರು.
ಹಾಸ್ಟಲ್ ಹುಡುಗರಿಗೆ ಜಯ; ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿದ ಕೋರ್ಟ್, ನಾಳೆ ರಿಲೀಸ್!
ಗೀತಾ ಶಿವರಾಜ್ ಕುಮಾರ್ ಶುಭ ಹಾರೈಸಿದರು. ರಕ್ಷಿತ್ ಶೆಟ್ಟಿ ಪರವಃ ಬ್ಯಾನರ್‌ನಡಿ ಈ ಚಿತ್ರವನ್ನು ಅರ್ಪಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವರುಣ್ ಗೌಡ ಹಾಗೂ ಪ್ರಜ್ವಲ್ ನಿರ್ಮಿಸಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ.