ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದು, ಮಾನವೀಯತೆ, ನವಭಾರತಿ ಸೇರಿದಂತೆ 14 ಚಿತ್ರ ನಿರ್ದೇಶಿಸಿದ್ದ ಗಣೇಶ್‌ ಇದರ ನಿರ್ದೇಶಕರು. ಅವರು ಚಿತ್ರ ಬಿಡುಗಡೆಯ ಭಾಗವಾಗಿ ಮಾಧ್ಯಮಗಳ ಮುಂದೆ ಬಂದಿದ್ದರು.

ಈ ವೇಳೆ ಮಾತನಾಡುತ್ತಾ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ಚಿತ್ರಕ್ಕಾಗಿ ಸಬ್ಸಿಡಿ ನಿರೀಕ್ಷೆ ಮಾಡಿದ್ದೆ. ಆದರೆ, ಸಿಗಲಿಲ್ಲ. ಪ್ರಶಸ್ತಿಯೂ ಬರಲಿಲ್ಲ. ಅಧಿಕಾರದಲ್ಲಿರುವವರು ತಮಗೆ ಬೇಕಾದಂತೆ ಸಬ್ಸಿಡಿ ಮಾನದಂಡಗಳನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಕಷ್ಟವಾದರೂ ಸರಿಯೇ ಈ ಸಿನಿಮಾವನ್ನು ಬಿಡುಗಡೆ ಮಾಡಲೇಬೇಕೆಂದು ಈಗ ಬಂದಿದ್ದೇನೆ’ ಎಂದು ಚಿತ್ರ ವಿಳಂಬಕ್ಕೆ ಕಾರಣ ಹೇಳಿದರು.

ಓಟಿಟಿ ಹಿಂದೆ ಅಂಬಾನಿಯ 5ಜಿ ನೆಟ್‌ವರ್ಕ್‌ ಸ್ಕ್ಯಾಮ್‌ ಇದೆ; ರಾಬರ್ಟ್‌ ಬರ್ತಿದ್ದಾನೆ!

‘ಇದು ಮಕ್ಕಳ ಸಿನಿಮಾ. ಮಕ್ಕಳ ಕಳ್ಳ ಸಾಗಣೆ, ಮಕ್ಕಳ ದುರ್ಬಳಕೆ ವಿಚಾರಗಳ ಸುತ್ತ ಕತೆ ಸಾಗುತ್ತದೆ. ಬೆಂಗಳೂರು, ಕೊಲ್ಕತ್ತದಲ್ಲೆಲ್ಲ ಶೂಟಿಂಗ್‌ ನಡೆಸಲಾಗಿದೆ. ಬಾಲ ನಟಿ ಮೇಷ್ನವಿ ಮುಖ್ಯ ಪಾತ್ರಧಾರಿ’ ಎಂದರು.

ಗಣೇಶ್‌ ಇದೀಗ ‘ಪ್ರೀತ್ಸು’ ಚಿತ್ರ ನಿರ್ದೇಶಿಸುತ್ತಿದ್ದು, ಅದು ಚಿತ್ರೀಕರಣ ಮುಗಿಸಿ ಸೆನ್ಸಾರ್‌ ಹಂತಕ್ಕೆ ಬಂದಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.