ಮಾಚ್‌ರ್‍ 11ಕ್ಕೆ ರಾಬರ್ಟ್‌

ಮಾಚ್‌ರ್‍ ತಿಂಗಳಲ್ಲೇ ರಾಬರ್ಟ್‌ ಬಿಡುಗಡೆಗೆ ಪ್ಲಾನ್‌ ಮಾಡಿಕೊಂಡಿದ್ದೇವೆ. ಅಂದರೆ ಮಾ.11ರಂದು ನಮ್ಮ ಸಿನಿಮಾ ತೆರೆ ಮೇಲೆ ಮೂಡಬೇಕು ಎಂಬುದು ಎಲ್ಲರ ಆಸೆ. ಚಿತ್ರಕ್ಕೆ ಎಲ್ಲ ರೀತಿಯ ಕೆಲಸಗಳು ಮುಗಿದಿವೆ. ತೆಲುಗಿನಲ್ಲಿ ಡಬ್ಬಿಂಗ್‌ ಕೂಡ ಮುಗಿದಿದೆ. ಜ.26ರ ಗಣರಾಜ್ಯೋತ್ಸವ ಪ್ರಯುಕ್ತ ‘ರಾಬರ್ಟ್‌’ ತೆಲುಗು ವರ್ಷನ್‌ ಪ್ರಚಾರ ಆರಂಭಗೊಳ್ಳುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಒಂದು ತಿಂಗಳು ಮುನ್ನವೇ ಬರ್ತಡೇ ಆಚರಣೆ ಬಗ್ಗೆ ನೋಟಿಸ್‌ ಕೊಟ್ಟ ನಟ ದರ್ಶನ್; ಏನ್ಹೇಳಿದ್ದಾರೆ? 

ಥಿಯೇಟರ್‌ನಲ್ಲೇ ದರ್ಶನವಾಗಲಿದೆ

ಯಾವ ಕಾರಣಕ್ಕೂ ನಾವು ನಮ್ಮ ಚಿತ್ರವನ್ನು ಓಟಿಟಿಗೆ ಕೊಡಲ್ಲ. ನಿರ್ಮಾಪಕರು ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡುತ್ತಾರೆ. ನಾವು ಪ್ರಾಣ ಒತ್ತೆ ಇಟ್ಟು ಸಿನಿಮಾ ಮಾಡಿರುತ್ತೇವೆ. ಅಪಾಯಕಾರಿ ಸನ್ನಿವೇಶಗಳು, ಸಾಹಸ ದೃಶ್ಯಗಳಲ್ಲಿ ನಟಿಸುವಾಗ ನಮಗೆ ಏನಾಗುತ್ತದೆ ಎನ್ನುವುದಕ್ಕಿಂತ ಈ ದೃಶ್ಯಕ್ಕೆ ಪ್ರೇಕ್ಷಕರು ಎಷ್ಟುಚಪ್ಪಾಳೆ ತಟ್ಟುತ್ತಾರೆ, ಈ ದೃಶ್ಯ ಪ್ರೇಕ್ಷಕರಿಗೆ ಎಷ್ಟುಮನರಂಜನೆ ನೀಡುತ್ತದೆ ಎಂಬುದನ್ನು ಮಾತ್ರ ಯೋಚನೆ ಮಾಡುತ್ತೇವೆ. ನಮ್ಮ ಇಂಥ ಶ್ರಮವನ್ನು ಒಟಿಟಿ ಹೆಸರಿನಲ್ಲಿ ಮೊಬೈಲ್‌ನಲ್ಲಿ ನೋಡಿದರೆ ಏನು ಖುಷಿ ಸಿಗುತ್ತದೆ ಹೇಳಿ. ಯಾವುದೇ ಸಿನಿಮಾವನ್ನು ಬೆಳ್ಳಿಪರದೆ ಮೇಲೆಯೇ ನೋಡಬೇಕು.ಈಗ ಶೇ.50ರಷ್ಟುಮಾತ್ರ ಸೀಟು ಭರ್ತಿಗೆ ಅವಕಾಶ ಇದೆ. 50 ಅಲ್ಲ, ಶೇ.25ರಷ್ಟುಇದ್ದರೂ ನಾವು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇವೆ.

"

ಒಟಿಟಿ ಎಂಬ 5ಜಿ ಸ್ಕಾ್ಯಮ್‌

ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡದೆ ಇರುವುದರ ಹಿಂದೆ ಅಂಬಾನಿಯ 5ಜಿ ಸ್ಕಾ್ಯಮ್‌ ಇದೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಯಾಕೆಂದರೆ ಮಾಲ್‌ಗಳು, ಮಾರುಕಟ್ಟೆ, ಅಂಗಡಿ, ಕಲ್ಯಾಣ ಮಂಟಪಗಳು, ಶಾಲಾ-ಕಾಲೇಜುಗಳು ತೆರೆದಿವೆ. ಎಲ್ಲ ಕಡೆ ಜನ ಸೇರುತ್ತಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಮಾತ್ರ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ನೀಡುತ್ತಿಲ್ಲ. ಅಂಬಾನಿ 5ಜಿ ನೆಟ್‌ವರ್ಕ್ ಲಾಂಚ್‌ ಮಾಡುತ್ತಿದ್ದಾರೆ. ಅವರ 5ಜಿ ನೆಟ್‌ವರ್ಕ್ ಚಾಲ್ತಿಯಲ್ಲಿರಬೇಕು ಎಂದರೆ ಎಲ್ಲರೂ ಮೊಬೈಲ್‌ಗೆ ಅಡಿಕ್ಟ್ ಆಗಬೇಕು. 5ಜಿ ಓಡಬೇಕು ಎಂದರೆ ಓಟಿಟಿಯಲ್ಲಿ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಓಟಿಟಿಗಳ ಮಾರುಕಟ್ಟೆಕುಸಿಯುತ್ತದೆ. ಹಾಗಾಗಿ ಅಂಬಾನಿ ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸುತ್ತಿರಬಹುದು.

ಶೇ.25 ವೀಕ್ಷಕರಿಗೆ ಅವಕಾಶವಿದ್ದರೂ, ಥಿಯೇಟರ್‌ನಲ್ಲೇ ಚಿತ್ರ ರಿಲೀಸ್‌; '5G ದೊಡ್ಡ ಸ್ಕ್ಯಾಮ್' 

ಅದ್ದೂರಿ ಹುಟ್ಟುಹಬ್ಬ ಇಲ್ಲ

ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿಲ್ಲ. ಅಭಿಮಾನಿಗಳು ಕೂಡ ಇದಕ್ಕೆ ಸಹಕಾರ ನೀಡಬೇಕು. ಕೊರೋನಾ ಕಾರಣಕ್ಕೆ ಎಲ್ಲೂ ಗುಂಪಾಗಿ ಸೇರುವುದು ಬೇಡ. ಯಾರ ಪರಿಸ್ಥಿತಿಯೂ ಈಗ ಸರಿ ಇಲ್ಲ. ಪ್ರತಿ ವರ್ಷ ನೀವು ಹಣ ಮತ್ತು ಸಮಯ ಖರ್ಚು ಮಾಡಿ ನನ್ನ ನೋಡಲು ಬರುತ್ತಿದ್ದಿರಿ. ಈ ಬಾರಿ ಹಾಗೆ ಬರುವುದು ಬೇಡ. ನಿಮ್ಮ ಕುಟುಂಬ ಮತ್ತು ನಿಮ್ಮ ಆರೋಗ್ಯ ನಿಮಗೆ ಮುಖ್ಯ. ಅದನ್ನು ನೋಡಿಕೊಳ್ಳಿ. ನೀವು ಇದ್ದಲ್ಲಿಯೇ ನನಗೆ ಹಾರೈಸಿ. ಫೆ.15 ರಿಂದ 18ವರೆಗೂ ನಾನು ಊರಿನಲ್ಲಿ ಇರುವುದಿಲ್ಲ. ಎಲ್ಲವೂ ಮುಗಿದ ಮೇಲೆ ನಾನೇ ಅಭಿಮಾನಿ ಸಂಘಗಳ ಮೂಲಕ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ.