ಎಲ್ಲಿ ನೋಡಿದ್ದರೂ ದೇವ್ಲೆ ದೇವ್ಲೆ ಹಾಡಿನ ಹವಾ ಜೋರು. ಗಣೇಶ್, ದಿಗಂತ್ ಪವನ್ ಕಾಂಬಿನೇಷನ್‌ಗೆ ಎಲ್ಲರೂ ಫಿದಾ...
ಗಣೇಶ್ ನಟನೆಯ ‘ಗಾಳಿಪಟ 2’ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ‘ದೇವ್ಲೆ ದೇವ್ಲೆ’ ಎಂದು ಸಾಗುವ ಈ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಈ ಹಿನ್ನೆಲೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಹಾಡನ್ನು ನೋಡಬಹುದು. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಹಾಡು ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಮೂಡಿ ಬಂದಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ಕೋವಿಡ್ ಸಮಯದಲ್ಲೂ ದೂರದ ದೇಶಕ್ಕೆ ಹೋದರೂ ಆರೋಗ್ಯವಾಗಿ ಹಿಂತಿರುಗಿದ್ದಕ್ಕೆ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದು ನಟ ಗಣೇಶ್ ಅವರು. ಮೊದಲು ಈ ಹಾಡಿನ ಸಾಹಿತ್ಯ ಕೇಳಿ ಗಣೇಶ್ ಅವರಿಗೆ ಬೇರೆ ರೀತಿ ಕೇಳಿಸಿತಂತೆ. ಎರಡನೇ ಸಲ ಹಾಡು ಕೇಳಿದ ಮೇಲೆ ಇಷ್ಟವಾಯಿತಂತೆ. ಜನ ಕೂಡ ದೇವ್ಲೆ ದೇವ್ಲೆ ಹಾಡನ್ನು ಒಪ್ಪಿಕೊಂಡಿದ್ದನ್ನು ನಟ ಗಣೇಶ್ ಖುಷಿಯಿಂದ ಹೇಳಿಕೊಂಡರು.
![]()
‘ಈ ಹಾಡು ದೇವ್ರೆ ದೇರ್ವೆ ಎಂದು ಬರೆದು ಮೊದಲು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಇದು ಮಾಮೂಲಿ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಎಂದರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ್ ಕಾರ ಹಾಕಿ ಅಂದೆ. ಆಗ ದೇವ್ಲೆ ದೇವ್ಲೆ ಹಾಡು ಮೂಡಿತು. ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ, ವಿಜಯ… ಪ್ರಕಾಶ್, ಅರ್ಜುನ್ ಜನ್ಯ ಕಾಂಬಿನೇಶನ್‌ನಲ್ಲಿ ಸಾಕಷ್ಟುಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೋನ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಈ ಹಾಡನ್ನು ದೂರದ ಕಜಕಿಸ್ತಾನದಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗಿದ್ದು ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರ ಸಹಕಾರದಿಂದ. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು’ ಎಂದು ಮೊದಲು ಹಾಡಿನ ಕುರಿತು ಮಾಹಿತಿ ನೀಡಿದ್ದು ನಿರ್ದೇಶಕ ಯೋಗರಾಜ್ ಭಟ್ ಅವರು.
ಗಾಳಿಪಟ 2 ಶೂಟಿಂಗ್‌ನಲ್ಲಿ 90ರ ದಶಕಕ್ಕೆ ಹೋಗಿದ್ದೆ: ಗಣೇಶ್
ಹಾಡಿನ ಬಿಡುಗಡೆ ಸಂಭ್ರಮಕ್ಕೆ ಗಾಯಕ ವಿಜಯ್ ಪ್ರಕಾಶ್ ಅವರೂ ಬಂದಿದ್ದರು. ‘ಯೋಗರಾಜ್ ಭಟ್, ಗಣೇಶ್ ಹಾಗೂ ನನ್ನ ಕಾಂಬಿನೇಶನ್ ಪಯಣ ಗಾಳಿಪಟ ಚಿತ್ರದಿಂದ ಶುರುವಾಗಿ ಈಗ ಗಾಳಿಪಟ 2 ವರೆಗೂ ಬಂದಿದೆ. ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟಅಂದುಕೊಂಡೆ. ಅಭ್ಯಾಸ ಮಾಡಿದೆ. ಅರ್ಧ ಗಂಟೆಯಲ್ಲಿ ದೇವ್ಲೆ ದೇವ್ಲೆ ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟುಗೀತೆಗಳು ಜನಪ್ರಿಯವಾಗಿದೆ’ ಎಂದರು ಗಾಯಕ ವಿಜಯ… ಪ್ರಕಾಶ್. ಈ ಹಾಡಿನ ಚಿತ್ರೀಕರಣಕ್ಕೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನ ಹತ್ತಿದ ಅನುಭವವನ್ನು ನಿರ್ಮಾಪಕ ರಮೇಶ್ ರೆಡ್ಡಿ ಅವರು ಹೇಳಿಕೊಂಡರೆ, ಹಾಡು ಎಷ್ಟುಮಜಾ ಕೊಡುತ್ತದೆ ಎಂದು ಅರ್ಜುನ್ ಜನ್ಯ ಹೇಳಿದರು. ನಟ ಪವನ್ ಕುಮಾರ್, ನಟಿಯರಾದ ಶರ್ಮಿಳಾ ಮಾಂಡ್ರೆ, ಸುಧಾ ಬೆಳವಾಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಆನಂದ್ ಆಡಿಯೋ ಶ್ಯಾಮ… ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ ಮಾತನಾಡಿದರು.

