ಕನ್ನಡ ಸಿನಿಮಾ ಫ್ರೆಂಚ್‌ ಬಿರಿಯಾನಿ ಟ್ರೈಲರ್ ಸದ್ಯ ಸಿನಿಪ್ರಿಯರನ್ನು ಹುಚ್ಚೆಬ್ಬಿಸಿದೆ. ಗುರುವಾರ ಸಿನಿಮಾ ಟ್ರೈಲರ್ ಬಿಡುಗಡೆಯಾಗಿತ್ತು. ಇದಾಗಿ 24 ಗಂಟೆಯೊಳಗೆ 2.8 ಮಿಲಿಯನ್‌ಗಿಂತಲೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಇದು ಕನ್ನಡ ಸಿನಿಮಾ ವಿಚಾರದಲ್ಲಿ ಭಾರೀ ನಿರೀಕ್ಷೆ ತಂದು ಕೊಟ್ಟಿದೆ.

ಫ್ರೆಂಚ್ ಬಿರಿಯಾನಿ ಕಾಮಿಡಿ ಸಿನಿಮಾ ಆಗಿದ್ದು, ಇಬ್ಬರು ಪ್ರಯಾಣಿಕರ ಬೆಂಗಳೂರಿನ ಕಡೆಗಿರುವ ಯಾತ್ರೆಯೇ ಇದರ ಕಥೆ. ಈ ಸಿನಿಮಾ ಅಮೆಜಾನ್ ಫ್ರೈಂನಲ್ಲಿ ಜುಲೈ 24ರಂದು ತೆರೆ ಕಾಣಲಿದೆ.

'777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಜತೆ ಡ್ಯಾನಿಶ್‌ ಸೇಠ್‌!

ಪನ್ನಗ ಭರಣ ನಿರ್ದೇಶನದ ಫ್ರೆಂಚ್‌ ಬಿರಿಯಾನಿ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ಎ ತಲ್ವಾರ್ ನಿರ್ಮಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಸೆಟ್ಟೇರಿದೆ. ಈ ಕಾಮಿಡಿ ಡ್ರಾಮಾದಲ್ಲಿ ಕಾಮೆಡಿಯನ್ ಡ್ಯಾನಿಶ್ ಸೇಠ್ ಬೆಂಗಳೂರಿನ ಒಬ್ಬ ಆಟೋ ಡ್ರೈವರ್ ಅಸ್ಗಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.