ಸೂಪರ್ ಹಿಟ್ 'ಹನುಮಾನ್' ಸಿನಿಮಾ ಮಾಡಿದ್ದೇಕೆ; ಭಾರೀ ಸೀಕ್ರೆಟ್‌ ಬಿಚ್ಚಿಟ್ಟ ತೇಜಾ ಸಜ್ಜಾ!

ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ 'ಮಿರಾಯ್' ಎಂಬ ಟೈಟಲ್ ಇಡಲಾಗಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ. 

Telugu actor Teja Sajja reveals the secret about Hanuman movie production srb

ಸದ್ಯ ತೆಲುಗು ಚಿತ್ರರಂಗದಲ್ಲಿ ಹನುಮಾನ್‌ ಹವಾ ಜೋರಾಗಿದೆ. ಟಾಲಿವುಡ್ ಸಿನಿಪ್ರೇಕ್ಷಕರು 'ಹನುಮಾನ್' ನಟ ತೇಜಾ ಸಜ್ಜುಗೆ ಫುಲ್ ಫಿದಾ ಆಗಿದ್ದಾರೆ. ಬ್ಲಾಕ್‌ಬಸ್ಟರ್ ಹಿಟ್ ದಾಖಲಿಸಿರುವ ಹನುಮಾನ್, ನಟ ತೇಜಾ ಸಜ್ಜು ಅವರಿಗೆ ಖ್ಯಾತಿ ಕೊಟ್ಟು ಹೇರಳವಾದ ಅವಕಾಶಗಳ ಬಾಗಿಲು ತೆರೆದಿದೆ. ಈಗ ತೇಜಾ ಸಜ್ಜು ಅವರು ಹೊಸ ಸಿನಿಮಾ ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ. ಇಂಥ ಹೊತ್ತಲ್ಲಿ ಅವರು ತಮ್ಮ ನಟನೆಯ ಹನುಮಾನ್ ಸಿನಿಮಾ ಹೇಗೆ, ಯಾವ ಉದ್ದೇಶಕ್ಕೆ ತೆರೆಗೆ ಬಂತು ಎಂಬ ಸತ್ಯ ಹೇಳಿದ್ದಾರೆ.

ಈ ಬಗ್ಗೆ ನಟ ತೇಜಾ ಸಜ್ಜು 'ಹನುಮಾನ್ ಸಿನಿಮಾ ಆಗಿದ್ದು ಚಿಕ್ಕ ಮಕ್ಕಳಿಗೋಸ್ಕರ. ಇಂದಿನ ಮಕ್ಕಳು ಸೂಪರ್ ಹೀರೋ ಕಾನ್ಸೆಪ್ಟ್ ಇರುವ ಕಾರ್ಟೂನ್ ಸಿನಿಮಾಗಳನ್ನು, ವೀಡಿಯೋಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ. ಆಂಜನೇಯ ಅಂದರೆ ಹನುಮ, ಹನುಮಾನ್ ಮಕ್ಕಳಿಗೆ ಅತ್ಯಂತ ಅಚ್ಚುಮೆಚ್ಚಿನ ದೈವ. ಹೀಗಾಗಿ ಹನುಮಾನ್ ಸೂಪರ್ ಮ್ಯಾನ್ ಆಧಾರಿತ ಸಿನಿಮಾ ಕೊಡುವ ಉದ್ದೇಶದಿಂದ ಸಿದ್ಧವಾಗಿದ್ದು ಈ ಹನುಮಾನ್ ಸಿನಿಮಾ. 

ಕೋವಿಡ್ ಬಳಿಕ ಭಾಷೆ ಬ್ಯಾರಿಕೇಡ್ ಕಿತ್ತೆಸೆದು ನಟಿಸಿದೆ; ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ಯಾಕೆ?

ನಾವು ಅಂದುಕೊಂಡಂತೆ, ಹನುಮಾನ್ ಸಿನಿಮಾವನ್ನು ಮಕ್ಕಳು ತುಂಬಾ ಇಷ್ಟಪಟ್ಟು ನೋಡಿದ್ದಾರೆ. ಮಕ್ಕಳೊಂದಿಗೆ ಬಂದ ಪೋಷಕರು, ಹಿರಿಯರು ಕೂಡ ನಮ್ಮ ಸಿನಿಮಾವನ್ನು ಇಷ್ಟಪಟ್ಟು ಹೊಗಳಿದ್ದಾರೆ. ಹೀಗಾಗಿ ಈ ಸಿನಿಮಾ ಮಾಡಿದ್ದ ಉದ್ದೇಶವನ್ನು ಈಡೇರಿಸಿದೆ ಎಂದು ಧಾರಾಳವಾಗಿ ಹೇಳಬಹುದು' ಎಂದಿದ್ದಾರೆ ನಟ ತೇಜಾ ಸಜ್ಜಾ.

'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್‌ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!

ಹನುಮಾನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಾರ್ತಿಕೇಯ, ಕಾರ್ತಿಕೇಯ-2 , ಧಮಾಕ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ ತೇಜ್ ಸಜ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಇಂದು ಅನಾವರಣಗೊಂಡಿದೆ.

ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಹನುಮಾನ್ ನಲ್ಲಿ ಸೂಪರ್ ಹೀರೋ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ 'ಮಿರಾಯ್' ಎಂಬ ಟೈಟಲ್ ಇಡಲಾಗಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ. 

ವಿಷ್ಣು ಸೇನೆ ಬಗ್ಗೆ ಅಂದು ಹರಡಿತ್ತು ಕುಹಕದ ಮಾತು, ನಟ ವಿಷ್ಣುವರ್ಧನ್ ಏನಂದಿದ್ರು?

ಮಿರಾಯ್ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ದ್ವಾರಕೀಶ್‌ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್‌ಗೆ ಯಾಕೆ ಕಳಿಸಿದ್ರು?

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್ ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿರುವ 'ಮಿರಾಯ್' ಸಿನಿಮಾವನ್ನು 18 ಏಪ್ರಿಲ್ 2025ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Latest Videos
Follow Us:
Download App:
  • android
  • ios