ಅಜ್ಜ ಆಗ್ತಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಸೊಸೆ ರೇವತಿಗೆ 5 ತಿಂಗಳು!
ನಿಖಿಲ್ ಕುಮಾರಸ್ವಾಮಿ ಕುಟುಂಬದಲ್ಲಿ ಇಂದು ಡಬಲ್ ಸಂಭ್ರಮ. ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್.
ಕನ್ನಡ ಚಿತ್ರರಂಗದ ಯುವರಾಜ್ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಂದೆ-ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ. ಪತ್ನಿ ಹುಟ್ಟುಹಬ್ಬಕ್ಕೆ ನಿಖಿಲ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇದೇ ವೇಳೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸುವರ್ಣ ನ್ಯೂಸ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಖಚಿತಪಡಿಸಿದ್ದಾರೆ.
ನಿಖಿಲ್-ರೇವತಿ ಮದುವೆ ಮೆಹಂದಿ ಸಮಯದಲ್ಲಿ ಸೆರೆ ಹಿಡಿದ ಪೋಟೋ ಹಂಚಿಕೊಂಡ ಸ್ಯಾಂಡಲ್‌ವುಡ್ ಯುವರಾಜ, 'ಹ್ಯಾಪಿ ಬರ್ತಡೇ ಮೈ ಲವ್' ಎಂದು ಬರೆದುಕೊಂಡಿದ್ದಾರೆ. ನಿಖಿಲ್ ತಂದೆಯಾಗುತ್ತಿರುವ ವಿಚಾರ ತಿಳಿದು ಅಭಿಮಾನಿಗಳು ಕೂಡ ಶುಭಹಾರೈಸಿದ್ದಾರೆ.
ಮೊಮ್ಮಗ ನಿಖಿಲ್ ಕೃಷಿ ಕಾರ್ಯ ಮೆಚ್ಚಿ ಭೇಷ್ ಎಂದ ದೇವೇಗೌಡರು!
ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ, ಏಪ್ರಿಲ್ 17,2020ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.