ಇಡೀ ರಾತ್ರಿಯನ್ನು ತನ್ನ ಆಕರ್ಷಣೆಯಿಂದ ಆಳುವ ಹುಡುಗಿ ಮತ್ತು 'ಮಿಲಿಯನೇರ್ ಮೈಂಡ್‌ಸೆಟ್' ಹೊಂದಿರುವ ಹುಡುಗನ ಸುತ್ತ ಈ ಹಾಡಿನ ಕಥೆ ಸಾಗುತ್ತದೆ. ನಿಯಾನ್ ಲೈಟ್ಸ್, ಅಬ್ಬರದ ಸಂಗೀತ ಮತ್ತು ಮಧ್ಯರಾತ್ರಿಯ ಮಸ್ತಿಯಿಂದ ಕೂಡಿರುವ ಈ ಹಾಡು ಪಾರ್ಟಿ ಪ್ರಿಯರ ನೆಚ್ಚಿನ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ.

ಡಿಸೆಂಬರ್‌ ಎಂಡ್‌ಗೆ ಬರಲಿರೋ ಚಂದನ್ ಶೆಟ್ಟಿ!

ಗಾಯಕ, ಸಂಗೀತ ನಿರ್ದೇಶಕ, ನಟ ಹಾಗು ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿಯವರು (Chandan Shetty) ಮತ್ತೀಗ ಅಲರ್ಟ್ ಆಗಿದ್ದಾರೆ. ಕಾರಣ, ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಅವರು 'ನ್ಯೂ ಇಯರ್' ಸೆಲೆಬ್ರೇಶನ್‌ಗೆ 'ಪ್ರೋಗ್ರಾಂ' ಕೊಡ್ತಾನೇ ಇದಾರೆ. ಇದೊಂಥರಾ ಟ್ರೆಡಿಷನ್ ಎಂಬಂತಾಗಿದೆ ಎಂದರೆ ತಪ್ಪೇನಿಲ್ಲ. ಇದನ್ನು ಸ್ವತಃ ಚಂದನ್ ಶೆಟ್ಟಿಯವರೇ 'ಡಿಸೆಂಬರ್ ಟ್ರೆಡಿಷನ್' (December Tradition) ಅಂತ ಕರೆದಿದ್ದಾರೆ.

ಚಂದನ್ ಶೆಟ್ಟಿ ಪೋಸ್ಟ್

ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಂದನ್ ಶೆಟ್ಟಿಯವರು ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ಡಿಸೆಂಬರ್ ಅಂದ್ರೆ ಡ್ಯಾನ್ಸ್ ಧಮಾಕಾ! ಹೊಸ ವರ್ಷದ ಸಂಭ್ರಮಕ್ಕೆ ಬರಲಿದೆ 'ಮಿಡ್‌ನೈಟ್ ಪಾರ್ಟಿ'! ಕಳೆದ ಐದು ವರ್ಷಗಳಿಂದ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಅಭಿಮಾನಿಗಳಿಗೆ ಒಂದು ಭರ್ಜರಿ ಡ್ಯಾನ್ಸ್ ನಂಬರ್ ಸಿಗುವುದು ಖಚಿತ ಎನ್ನುವಂತಾಗಿದೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಯುತ್ತಿದ್ದು, ಹೊಸ ವರ್ಷದ ಸ್ವಾಗತಕ್ಕೆ 'ಮಿಡ್‌ನೈಟ್ ಪಾರ್ಟಿ' (MIDNIGHT PARTY) ಎಂಬ ಹೈ-ಎನರ್ಜಿ ಹಾಡು ಸಿದ್ಧವಾಗಿದೆ.

ಮ್ಯೂಸಿಕ್ ಮಾತ್ರವಲ್ಲ, ಇದೊಂದು ಪಕ್ಕಾ ಪಾರ್ಟಿ ವೈಬ್!

ಈ ಹಾಡು ಕೇವಲ ಮ್ಯೂಸಿಕ್ ಮಾತ್ರವಲ್ಲ, ಇದೊಂದು ಪಕ್ಕಾ ಪಾರ್ಟಿ ವೈಬ್! ಇಡೀ ರಾತ್ರಿಯನ್ನು ತನ್ನ ಆಕರ್ಷಣೆಯಿಂದ ಆಳುವ ಹುಡುಗಿ ಮತ್ತು 'ಮಿಲಿಯನೇರ್ ಮೈಂಡ್‌ಸೆಟ್' ಹೊಂದಿರುವ ಹುಡುಗನ ಸುತ್ತ ಈ ಹಾಡಿನ ಕಥೆ ಸಾಗುತ್ತದೆ. ನಿಯಾನ್ ಲೈಟ್ಸ್, ಅಬ್ಬರದ ಸಂಗೀತ ಮತ್ತು ಮಧ್ಯರಾತ್ರಿಯ ಮಸ್ತಿಯಿಂದ ಕೂಡಿರುವ ಈ ಹಾಡು ಪಾರ್ಟಿ ಪ್ರಿಯರ ನೆಚ್ಚಿನ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. "ಹೊಸ ವರ್ಷಕ್ಕೆ ಬೇರೇನೂ ಬೇಡ, ಬರಿ ಪಾರ್ಟಿ ಅಷ್ಟೇ!" ಎನ್ನುವ ಮಂತ್ರದೊಂದಿಗೆ ಈ ಸಾಂಗ್ ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಡಿಸೆಂಬರ್‌ನಲ್ಲಿ ನೀವು ಕೂಡ ಈ 'ಮಿಡ್‌ನೈಟ್ ಮ್ಯಾಡ್‌ನೆಸ್' ಅನುಭವಿಸಲು ಸಿದ್ಧರಾಗಿ!

View post on Instagram