Asianet Suvarna News Asianet Suvarna News

ದೊಡ್ಮನೆ ಕುಡಿಯ 'ಸರಳ ಪ್ರೇಮಕ್ಕೆ' ಆಶೀರ್ವದಿಸಲು ಬಸ್ ತಗೊಂಡು ಬಂದ್ರಲ್ಲ ಕರುನಾಡ ಫ್ಯಾನ್ಸ್!

ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿ ರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಚಿತ್ರ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖುಷಿಪಟ್ಟರು. ವಿನಯ್, ಸುನಿ ಹಾಗೂ ಇಡೀ ತಂಡದ ಶ್ರಮಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Fans comes by bus to watch vinay rajkumar movie ondu sarala premakathe srb
Author
First Published Feb 10, 2024, 12:55 PM IST

ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಹಾಗೂ ಸಿಂಪಲ್ ಸುನಿ ಜೋಡಿಯ ಒಂದು ಸರಳ ಪ್ರೇಮಕಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಎಲ್ಲೆಡೆಯಿಂದ‌ ಮೆಚ್ಚುಗೆ ಸಿಗುತ್ತಿದೆ. ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್ ರಾಜ್‌ಕುಮಾರ್ (Vinay Rajkumar),ನಾಯಕಿಯಾರದ ಸ್ವಾತಿಷ್ಠ,‌ ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರಿಗೆ ಕನೆಕ್ಟ್ ಆಗುತ್ತಿದೆ. 

ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಪಡೆದುಕೊಳ್ಳುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾದ ಕ್ರೇಜ್ ನಿಧಾನವಾಗಿ ಗಾಂಧಿನಗರವನ್ನು ಆವರಿಸಿಕೊಳ್ಳುತ್ತಿದೆ. ಹಿತಾನುಭವ, ಮನರಂಜನೆಯ ರಸದೌತಣ ನೀಡುತ್ತಿರುವ ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ಜನ ಬಸ್ ನಲ್ಲಿ ಒರಿಯನ್ ಮಾಲ್ ಗೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಎಂದು ಹಾಡು ಹೇಳಿ ಸರಳ ಪ್ರೇಮಕಥೆ ಜೈಕಾರ ಹಾಕಿದ್ದಾರೆ. ಇದಪ್ಪ ದೊಡ್ಮನೆ ಕುಡಿ ಸಿನಿಮಾ ಕ್ರೇಜ್ ಎನ್ನುತ್ತಿದೆ ಗಾಂಧಿನಗರ.

ಸರಳ ಪ್ರೇಮಕಥೆ ಮೆಚ್ಚಿದ ಧ್ರುವ ಸರ್ಜಾ:-

ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿ ರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಚಿತ್ರ ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖುಷಿಪಟ್ಟರು. ವಿನಯ್, ಸುನಿ ಹಾಗೂ ಇಡೀ ತಂಡದ ಶ್ರಮಕ್ಕೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. 'ಒಂದು ಸರಳ ಪ್ರೇಮಕಥೆ' ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನಾನ್ಯಾಕೆ 'ರಾಗಿಣಿ ರೂಂ'ಗೆ ಹೋಗ್ಲಿ ಎಂದ್ಬಿಟ್ರು ಉಪೇಂದ್ರ; ಬಿದ್ದು ಬಿದ್ದು ನಕ್ಕ ಶಿವರಾಜ್‌ಕುಮಾರ್!

ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು‌ ಜನ ಕೊಂಡಾಡುತ್ತಿದ್ದಾರೆ. ಈ ಚಿತ್ರವು ಡಾ ರಾಜ್‌ಕುಮಾರ್ ಮೊಮ್ಮಗ ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಡುವ ಎಲ್ಲಾ ಲಕ್ಷಣವಿದೆ ಎಂದು ಸ್ಯಾಂಡಲ್‌ವುಡ್ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. 

'ಶಾಖಾಹಾರಿ'ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ; ಸದ್ಯದಲ್ಲೇ 'ಮಲೆನಾಡ ಥ್ರಿಲ್ಲರ್' ದರ್ಬಾರ್..!

Follow Us:
Download App:
  • android
  • ios