Asianet Suvarna News Asianet Suvarna News

ನಾನ್ಯಾಕೆ 'ರಾಗಿಣಿ ರೂಂ'ಗೆ ಹೋಗ್ಲಿ ಎಂದ್ಬಿಟ್ರು ಉಪೇಂದ್ರ; ಬಿದ್ದು ಬಿದ್ದು ನಕ್ಕ ಶಿವರಾಜ್‌ಕುಮಾರ್!

ಒಂಥರಾ 'ರ‍್ಯಾಪಿಡ್ ಫೈರ್' ಅಂತಲೂ ಹೇಳಬಹುದು. ಶಿವಣ್ಣ ಕೇಳುವ ಪ್ರಶ್ನೆಗೆ ಉತ್ತರವಾಗಿ ಆಯಾ ನಟರಿಗೆ ಸಂಬಂಧಪಟ್ಟಂತೆ ಹೇಳಬೇಕು ಎಂಬುದು ಕಾನ್ಸೆಪ್ಟ್‌. ಅದರಂತೆ ಕರುನಾಡ ಚಕ್ರವರ್ತಿ ಶಿವಣ್ಣ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರಶ್ನೆ ಕೇಳುತ್ತಾರೆ, ಉಪೇಂದ್ರ ಉತ್ತರಿಸುತ್ತಾರೆ.

Why should I go to Ragini Room asks Upendra to Shiva Rajkumar video goes viral srb
Author
First Published Feb 9, 2024, 5:37 PM IST

ನಟ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಮಾತುಕತೆಯ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಿವಣ್ಣ ಅವರು ಉಪೇಂದ್ರ  ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದನ್ನು ಒಂಥರಾ 'ರ‍್ಯಾಪಿಡ್ ಫೈರ್' ಅಂತಲೂ ಹೇಳಬಹುದು. ಶಿವಣ್ಣ ಕೇಳುವ ಪ್ರಶ್ನೆಗೆ ಉತ್ತರವಾಗಿ ಆಯಾ ನಟರಿಗೆ ಸಂಬಂಧಪಟ್ಟಂತೆ ಹೇಳಬೇಕು ಎಂಬುದು ಕಾನ್ಸೆಪ್ಟ್‌.

ಅದರಂತೆ ಕರುನಾಡ ಚಕ್ರವರ್ತಿ ಶಿವಣ್ಣ (Shiva Rajkumar) ಅವರು ರಿಯಲ್ ಸ್ಟಾರ್ ಉಪೇಂದ್ರ (Upendra) ಅವರಿಗೆ ಪ್ರಶ್ನೆ ಕೇಳುತ್ತಾರೆ, ಉಪೇಂದ್ರ ಉತ್ತರಿಸುತ್ತಾರೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ.. ಅದೇನೆಂದು ನೋಡಿ, ಎಂಜಾಯ್ ಮಾಡಿ!. ನಟ ಶಿವಣ್ಣ 'ನಾನು ಕೆಲವು ನಟನಟಿಯರ ಹೆಸರು ಹೇಳುತ್ತೇನೆ, ಅವರ ರೂಮಿಗೆ ನೀವು ಹೋದಾಗ ನಿಮಗೆ ಅಲ್ಲಿ ಏನು ಸಿಗುತ್ತದೆ ಎಂದು ಹೇಳಬೇಕು' ಎಂದು ಉಪೇಂದ್ರ ಅವರಿಗೆ ತಿಳಿಸುತ್ತಾರೆ. ಅದಕ್ಕೊಪ್ಪಿದ ಉಪೇಂದ್ರ ಅವರಿಗೆ ಶಿವಣ್ಣ 'ಅಪ್ಪು ಎನ್ನಲು ಉಪೇಂದ್ರ ಸ್ಪೆಕ್ಟ್ ಎನ್ನವರು.

ವಿಷ್ಣುವರ್ಧನ್‌-ಭಾರತಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ; ಎರಡೂ ಹೆಣ್ಣು ಮಕ್ಕಳೇ ಯಾಕೆ..!?

ದರ್ಶನ್ ಎನ್ನಲು ಜಿಮ್ ಇಕ್ಯೂಪ್‌ಮೆಂಟ್ ಎನ್ನವರು. ಬಳಿಕ ಶಿವಣ್ಣ 'ಸುದೀಪ್' ಎನ್ನಲು ಉಪೇಂದ್ರ 'ಟರ್ಬನ್' ಎನ್ನುವರು. ಆಮೇಲೇನು ನೋಡಿದರೆ, ಶಿವಣ್ಣ 'ರಾಗಿಣಿ' ಎನ್ನಲು ಉಪೇಂದ್ರ ಉತ್ತರಕ್ಕಾಗಿ ತಡಬಡಾಯಿಸುವರು. ಗೊತ್ತಿದ್ದೂ ಹೇಳಲಾಗದ ಉಪೇಂದ್ರ ಸ್ಥಿತಿಯನ್ನು ನೋಡಿ ಅಲ್ಲಿದ್ದ ಎಲ್ಲರೂ ನಗುವರು. ಉಪೇಂದ್ರ ಪಕ್ಕದಲ್ಲಿದ್ದವರು 'ಗೊತ್ತಿದೆ, ಹೇಳಲಾಗುತ್ತಿಲ್ಲ' ಎಂದು ನಗಲು ಹುಶಾರಾದ ನಟ ಉಪೇಂದ್ರ ತಮ್ಮ 'ಬುದ್ದಿವಂತ' ಖ್ಯಾತಿಗೆ ಸರಿಯಾಗಿ 'ಈಗ ನಾನೇ ನಿಮಗೊಂದು ಪ್ರಶ್ನೆ ಕೇಳಬೇಕು. ಫಸ್ಟ್‌ ಆಫ್ ಆಲ್‌ ನಾನ್ಯಾಕೆ ರಾಗಿಣಿ ರೂಮ್‌ಗೆ ಹೋಗಲಿ' ಎಂದು ಕೇಳಿ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸುತ್ತಾರೆ.

ಒತ್ತಾಯಕ್ಕೆ ಮಣಿದು ಮದುವೆ, ದಿನಂಪ್ರತಿ ಜಗಳ; ಡಿವೋರ್ಸ್ ಬಳಿಕ ಏನ್ ಮಾಡ್ತಿದಾರೆ ನಟಿ ರೂಪಿಣಿ..?!

ಕೇವಲ ತಮಾಷೆಯೇ ಉದ್ದೇಶವಾಗಿದ್ದ ಆ ವಿಡಿಯೋ ಅಲ್ಲಿಗೇ ಮುಗಿಯುತ್ತದೆ. ಈ ವೀಡಿಯೋ ನೋಡಿದ ನೆಟ್ಟಿಗರು ಉಪೇಂದ್ರ ಬುದ್ಧಿವಂತಿಕೆಗೆ ತಲೆದೂಗಿದ್ದಾರೆ. ನಟ ಶಿವಣ್ಣ ಹಾಗು ಉಪ್ಪಿ ಅವರಿಬ್ಬರ ಸ್ನೇಹ ಹಾಗೂ ಮಾತುಕತೆ ಮೆಚ್ಚಿ 'ಸೆಲ್ಯೂಟ್' ಎಂದಿದ್ದಾರೆ. ಅವರಿಬ್ಬರ ಮಾತುಕತೆಗೆ ಸಂಬಂಧಪಟ್ಟು ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಉಪೇಂದ್ರ ಅವರನ್ನು ಸಿಕ್ಕಿಹಾಕಿಕೊಳ್ಳುವಂತೆ ಮಾಡಲು ಶಿವಣ್ಣ ಅದೆಷ್ಟು ಪ್ರಯತ್ನ ಪಟ್ಟರೂ ಬುದ್ದಿವಂತ ಉಪೇಂದ್ರ ತಮಾಷೆ ಮಾಡಿಕೊಂಡೇ ಅದರಿಂದ ಪಾರಾಗುತ್ತಾರೆ. 

ಎಂಥಾ ನಟಿಗೆ ಅದೆಂಥಾ ಸ್ಥಿತಿ ಬಂತು; ಕೆಲಸವೇ ದೇವರು ಎಂದಿದ್ದ ಸಮಂತಾಗೆ ಕೆಲಸವನ್ನೇ ಮಾಡಲಾಗುತ್ತಿಲ್ಲ!

Follow Us:
Download App:
  • android
  • ios