ನಟಿ ರಚಿತಾ ರಾಮ್ ಮದುವೆಗಾಗಿ ಕಾಯ್ತಿರೋ ಫ್ಯಾನ್ಸ್, ಇದೀಗ ನಟಿ ಖುಷಿಯಿಂದ ಡ್ಯಾನ್ಸ್ ಮಾಡಿದ್ರೂ ಅದೇ ವಿಚಾರ ಎಳೆದುತಂದಿದ್ದಾರೆ. ಅವರು ಹೇಳಿದ್ದೇನು?
ಡಲ್‌ವುಡ್ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿಯರಲ್ಲಿ ಒಬ್ಬರು. 2013ರಲ್ಲಿ ತೆರೆಕಂಡ 'ಬುಲ್‌ಬುಲ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ರಚಿತಾ ಕೈಯಲ್ಲಿ ಈಗ ಅನೇಕ ಚಿತ್ರಗಳಿವೆ. ಪ್ರಥಮ ಚಿತ್ರ ಬುಲ್ಬುಲ್ನಲ್ಲಿಯೇ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ನಟನೆಯಿಂದ ಮನ ಗೆದ್ದ ಬೆಡಗಿ ಈಕೆ. ಇದರ ಯಶಸ್ಸಿನ ಬೆನ್ನಲ್ಲೇ ಅಂಬರೀಶ್, `ದಿಲ್ ರಂಗೀಲಾ', `ರನ್ನ', `ರಥಾವರ', `ಚಕ್ರವ್ಯೂಹ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಖ್ಯಾತ ಚಿತ್ರನಟರ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯಾಗಿರೋ ರಚಿತಾ ಅವರಿಗೆ ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿದೆ.
ಇಂತಿಪ್ಪ ರಚಿತಾ ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಆ್ಯಕ್ಟೀವ್ ಆಗಿದ್ದು, ಆಗ್ಗಾಗ್ಗೆ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಟ್ರೋಲ್ಗೆ ಒಳಗಾದರೆ, ಹಲವಾರು ಬಾರಿ ಫ್ಯಾನ್ಸ್ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಾರೆ ಕೆಲ ದಿನಗಳ ಹಿಂದೆ ಮಳೆಯ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ತಮಗೆ ಮಳೆ ಎಂದರೆ ಬಹಳ ಖುಷಿ ಎಂದು ಬರೆದುಕೊಂಡಿದ್ದ ನಟಿ, ಮಳೆ ಹನಿಯನ್ನ ಎಂಜಾಯ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಹೊರಗಡೆ ತುಂತುರು ಮಳೆ ಸುರಿಯತ್ತಿದ್ದಾಗ ಅದಕ್ಕೆ ಕೈಯೊಡ್ಡಿ ನಿಂತಿದ್ದ ಅವರು, ಮಳೆಯಲ್ಲಿ ನೆನೆಯಲು ಹೋಗಿ ಹೆದರಿ ವಾಪಸ್ ಓಡಿ ಬಂದು ಸಕತ್ ಟ್ರೋಲ್ ಆಗಿದ್ದರು. ಅದಾದ ಬಳಿಕ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಕಾರಿನಲ್ಲಿ ಹೋಗುವಾಗ, ಆಕಸ್ಮಿಕವಾಗಿ ಅವರ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿತ್ತು. ನಂತರ ಅವರನ್ನು ಮನೆಗೆ ಕರೆದು ನಾನು ಬೇಕಂತಲೇ ತಪ್ಪು ಮಾಡಿಲ್ಲ. ಮನಸಾರೆ ನನ್ನ ಕಡೆಯಿಂದ ಮತ್ತು ನಮ್ಮ ಕಾರಿನ ಡ್ರೈವರ್ ಕಡೆಯಿಂದ ಕ್ಷಮೆ ಕೇಳುತ್ತೇನೆ ಅಣ್ಣ ಎಂದು ಕಾರ್ಮಿಕರಿಗೆ ತಿಳಿಸಿ ಗ್ರೇಟ್ ನಟಿ ಎನಿಸಿಕೊಂಡಿದ್ದರು.
ಮಳೆ ಅಂದ್ರೆ ಇಷ್ಟ ಎಂದ ರಚಿತಾ, ಹನಿ ಬಿದ್ರೆ ಯಾಕ್ ಓಡ್ತೀರಾ, ಹುಷಾರು ಶೀತವಾಗುತ್ತೆಂದ ಫ್ಯಾನ್ಸ್
ಇಂತಿಪ್ಪ ನಟಿ, ಈಗ ತುಂಬಾ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ. ತುಂಬಾ ಖುಷಿಯಾದಾಗ ಕೆಲವೊಮ್ಮೆ ಹುಚ್ಚೆದ್ದು ಕುಣಿಯುವುದು ಇದೆ. ಅದೇ ರೀತಿ ರಚಿತಾ ರಾಮ್ ಡ್ಯಾನ್ಸ್ ಮಾಡಿದ್ದಾರೆ. 1969ರಲ್ಲಿ ಬಿಡುಗಡೆಯಾದ ಮುಕುಂದ ಚಂದ್ರ ಚಿತ್ರದ ಹಾಡಾಗಿರುವ ನಾ ನಿನಗೆ, ನೀನೆನಗೆ ಜೇನಾಗುವಾ… ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ, ಹಣ್ಣಾಗುವ, ಪ್ರತಿರೂಪಿ ಭಗವತಿಗೆ ಮುಡಿಪಾಗುವ... ಹಾಡಿನ ಕ್ಯಾಪ್ಷನ್ ಕೊಟ್ಟು Whats happening Whats happening ಎನ್ನೋ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರೇನೋ ಚೆನ್ನಾಗಿಯೇ ಡ್ಯಾನ್ಸ್ ಮಾಡಿದ್ದಾರೆ. ಆದರೆ ಟ್ರೋಲಿಗರು ಬಿಡಬೇಕಲ್ಲ? ಕೆಲವರು ಅಲ್ಲೇ ಕಬ್ಬಿಣ ಇದೆ, ಹಿಡಿದುಕೋ ಸರಿಯಾಗತ್ತೆ ಎಂದರೆ, ಇನ್ನು ಕೆಲವರು ಮದ್ವೆಯಾಗು, ಹುಚ್ಚೆಲ್ಲಾ ಹೋಗುತ್ತೆ ಅಂದಿದ್ದಾರೆ. ಈ ಡ್ಯಾನ್ಸ್ ಮೆಚ್ಚಿ ಸಹಸ್ರಾರು ಮಂದಿ ಹಾರ್ಟ್ ಇಮೋಜಿ ಶೇರ್ ಮಾಡಿಕೊಂಡಿದ್ದರೆ, ಇನ್ನು ಕೆಲವರು ನಟಿಯನ್ನು ಮನಸಾರೆ ಹೊಗಳಿದ್ದಾರೆ.
ಅಷ್ಟಕ್ಕೂ, ರಚಿತಾ ರಾಮ್ ಅದ್ಯಾವಾಗ ಮದುವೆಯ ಬಗ್ಗೆ ಸಿಹಿ ಸುದ್ದಿ ಕೊಡುತ್ತಾರೆ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಮದುವೆ 2019ರಲ್ಲಿ ಹಸೆಮಣೆ ಏರಿದ್ದರು. ಆದರೆ ರಚಿತಾ ಮಾತ್ರ ಮದುವೆಯ ಬಗ್ಗೆ ಹೇಳದೇ ಇರುವುದು ಫ್ಯಾನ್ಸ್ಗೆ ನಿರಾಸೆಯಾಗಿದೆ. ಮದುವೆ ಅನ್ನೋದು ಸುಂದರವಾದ ಕ್ಷಣ ನನಗೆ. ಮದುವೆ ಯಾವಾಗ ಆಗುತ್ತೀನಿ ಎಂದು ನನಗೆ ಗೊತ್ತಿಲ್ಲ. ಮದುವೆಯಾಗುವ (marriage) ಪ್ಲ್ಯಾನ್ ಮಾಡಿಲ್ಲ. ಮದುವೆ ಆಗ್ತೀನಿ ಅನ್ನೋ ವಿಚಾರವನ್ನ ಖುಷಿಯಾಗಿ ಹಂಚಿಕೊಳ್ತೀನಿ. ದೇವಸ್ಥಾನದಲ್ಲಿ ಮದುವೆಯಾಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆಯಾಗಬೇಕು. ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ ಎಂದಿದ್ದರು ನಟಿ. ಆದರೆ ಇದುವರೆಗೂ ಮದುವೆಯ ವಿಷಯ ಎತ್ತುತ್ತಿಲ್ಲ.
ಲಾಲ್‌ಬಾಗ್ ಕಾರ್ಮಿಕನ ಕ್ಷಮೆ ಕೇಳಿ, ದೊಡ್ಡಗುಣ ಪ್ರದರ್ಶಿಸಿದ ನಟಿ ರಚಿತಾ ರಾಮ್
