‘ಶಿವಾಜಿ ಸುರತ್ಕಲ್‌ 2’ಗೆ ಹಿರಿಯ ದಕ್ಷಿಣ ಭಾರತೀಯ ನಟ ಎಂ ನಾಸರ್‌ ಅವರ ಎಂಟ್ರಿಯಾಗಿದೆ. ಅವರು ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ತಂದೆ, ನಿವೃತ್ತ ಐಜಿ ವಿಜಯೇಂದ್ರ ಸುರತ್ಕಲ್‌ ಪಾತ್ರ ನಿರ್ವಹಿಸಲಿದ್ದಾರೆ. 

‘ಶಿವಾಜಿ ಸುರತ್ಕಲ್‌ 2’ಗೆ (Shivaji Surathkal 2) ಹಿರಿಯ ದಕ್ಷಿಣ ಭಾರತೀಯ ನಟ ಎಂ ನಾಸರ್‌ (Nasser M) ಅವರ ಎಂಟ್ರಿಯಾಗಿದೆ. ಅವರು ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ತಂದೆ, ನಿವೃತ್ತ ಐಜಿ ವಿಜಯೇಂದ್ರ ಸುರತ್ಕಲ್‌ ಪಾತ್ರ ನಿರ್ವಹಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಆಕಾಶ್‌ ಶ್ರೀವತ್ಸ (Akash Srivatsa), ‘ರಮೇಶ್‌ ಅರವಿಂದ್‌ ಹಾಗೂ ನಾಸರ್‌ ಇಬ್ಬರೂ ಹಿರಿಯ ನಿರ್ದೇಶಕ ಕೆ ಬಾಲಚಂದರ್‌ (K.Balachander) ಗರಡಿಯಲ್ಲಿ ಬೆಳೆದವರು. ಕಳೆದ 25 ವರ್ಷಗಳಿಂದ ಸ್ನೇಹಿತರು. ಅವರಿಬ್ಬರೂ ಮೊದಲ ಬಾರಿ ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. 

ನಾಸರ್‌ ಅವರ ಪಾತ್ರ ‘ಶಿವಾಜಿ ಸುರತ್ಕಲ್‌ 1’ನಲ್ಲಿ ಇರಲಿಲ್ಲ. ಜೊತೆಗೆ ಅಲ್ಲಿ ಗಂಡ ಹೆಂಡತಿಯ ಸಮಸ್ಯೆ ಮುಖ್ಯವಾಗಿತ್ತು. ಆದರೆ ಇಲ್ಲಿ ಪರಸ್ಪರ ಮಾತು ಬಿಟ್ಟಿರುವ ತಂದೆ ಮಗನ ವಿಚಾರ ಮುಖ್ಯವಾಗಲಿದೆ. ಈ ಭಾಗದ ಕಥೆ ನೈಜ ಜೀವನಕ್ಕೆ ಹತ್ತಿರವಾಗಿದೆ. ಮೂರು ಲುಕ್‌ಗಳಲ್ಲಿ ನಾಸರ್‌ ಅವರು ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ. ಈಗಾಗಲೇ ಚಿತ್ರ 10 ದಿನಗಳ ಶೂಟಿಂಗ್‌ ಮುಗಿಸಿದ್ದು ಇನ್ನೂ ನಲವತ್ತು ದಿನಗಳ ಚಿತ್ರೀಕರಣ ಬಾಕಿ ಇದೆ. 

ಶಿವಾಜಿ ಸುರತ್ಕಲ್‌ ಭಾಗ 3 ಕೂಡ ಬರಬಹುದು: ಆಕಾಶ್‌ ಶ್ರೀವತ್ಸ

 'ಶಿವಾಜಿ ಸುರತ್ಕಲ್ 2' ಚಿತ್ರದಲ್ಲೂ ರಮೇಶ್‌ ಅರವಿಂದ್‌ ಅವರೊಂದಿಗೆ ರಾಧಿಕಾ ನಾರಾಯಣ್‌ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್​ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್ (Meghana Gaonkar)​ ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ 'ಮಗಳು ಜಾನಕಿ' ಧಾರಾವಾಹಿ ನಟ ರಾಕೇಶ್ ಮಯ್ಯ (Rakesh Mayya) ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.

ಈ ಚಿತ್ರದಲ್ಲಿ ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ (Vinayak Joshi) ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆಯಂತೆ. ನಕುಲ್ ಭಯಂಕರ್ (Nakul Bhayankar) ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಹಿಂದೆ 'ಕನ್ನಡ್ ಗೊತ್ತಿಲ್ಲ' , 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಶುರುವಾಗಲಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. 'ಶಿವಾಜಿ ಸುರತ್ಕಲ್​ 2' ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ.

Ramesh Aravind: ಸರಳವಾಗಿ ನಡೆದ 'ಶಿವಾಜಿ ಸುರತ್ಕಲ್ 2' ಚಿತ್ರದ ಮುಹೂರ್ತ

ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ (Akash Srivatsa) ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. 'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್​ಗೆ 'ದಿ ಕೇಸ್​ ಆಫ್​ ರಣಗಿರಿ ರಹಸ್ಯ' (The Case of Ranagiri Rahasya) ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ 'ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ' (The Mysterious Case of Mayavi) ಎಂಬ ಟ್ಯಾಗ್​ಲೈನ್​ ಇದೆ. ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ.