Asianet Suvarna News Asianet Suvarna News

Ramesh Aravind: ಸರಳವಾಗಿ ನಡೆದ 'ಶಿವಾಜಿ ಸುರತ್ಕಲ್ 2' ಚಿತ್ರದ ಮುಹೂರ್ತ

ಆಕಾಶ್‌ ಶ್ರೀವತ್ಸ ನಿರ್ದೇಶನದ ರಮೇಶ್​ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2 ಚಿತ್ರದ ಮುಹೂರ್ತ ಮಲ್ಲೇಶ್ವರಂನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ಕಲಾವಿದರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

shivaji surathkal 2 starring ramesh aravind flagged off with a muhurtha gvd
Author
Bangalore, First Published Nov 25, 2021, 5:29 PM IST
  • Facebook
  • Twitter
  • Whatsapp

ರಮೇಶ್​ ಅರವಿಂದ್ (Ramesh Aravind) ಅಭಿನಯದ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರವನ್ನು ತೆರೆಗೆ ತರುವುದಾಗಿ ಇತ್ತಿಚೆಗಷ್ಟೇ ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಚಿತ್ರದ ಮುಹೂರ್ತ ಮಲ್ಲೇಶ್ವರಂನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ಕಲಾವಿದರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೊಸಬರು ಕೂಡ ಈ ಸಿನಿಮಾ ತಂಡ ಸೇರಿಕೊಂಡಿದ್ದಾರೆ. 'ಶಿವಾಜಿ ಸುರತ್ಕಲ್' (Shivaji Surathkal) ಸಿನಿಮಾ 2020 ರಲ್ಲಿ ಬಿಡುಗಡೆಯಾಗಿ ಸಿನಿಮಂದಿಯಿಂದ  ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ರಮೇಶ್ ಈ ಚಿತ್ರದಲ್ಲಿ ಡಿಟೆಕ್ಟಿವ್ (Detective) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಇದೀಗ ಮುಂದುವರಿದ ಭಾಗವಾಗಿ 'ಶಿವಾಜಿ ಸುರತ್ಕಲ್ 2' ಚಿತ್ರದಲ್ಲೂ ರಮೇಶ್‌ ಅರವಿಂದ್‌ ಅವರೊಂದಿಗೆ ರಾಧಿಕಾ ನಾರಾಯಣ್‌ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್​ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್ (Meghana Gaonkar)​ ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ 'ಮಗಳು ಜಾನಕಿ' ಧಾರಾವಾಹಿ ನಟ ರಾಕೇಶ್ ಮಯ್ಯ (Rakesh Mayya) ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.

'ಶಿವಾಜಿ ಸುರತ್ಕಲ್‌'ಗೆ ಕಾಪ್ ಆಗಿ ಎಂಟ್ರಿ ಕೊಟ್ಟ ಮೇಘನಾ

ಈ ಚಿತ್ರದಲ್ಲಿ ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ (Vinayak Joshi) ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆಯಂತೆ. ನಕುಲ್ ಭಯಂಕರ್ (Nakul Bhayankar) ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಹಿಂದೆ 'ಕನ್ನಡ್ ಗೊತ್ತಿಲ್ಲ' , 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಶುರುವಾಗಲಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. 'ಶಿವಾಜಿ ಸುರತ್ಕಲ್​ 2' ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ.

shivaji surathkal 2 starring ramesh aravind flagged off with a muhurtha gvd

ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ (Akash Srivatsa) ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. 'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್​ಗೆ 'ದಿ ಕೇಸ್​ ಆಫ್​ ರಣಗಿರಿ ರಹಸ್ಯ' (The Case of Ranagiri Rahasya) ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ 'ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ' (The Mysterious Case of Mayavi) ಎಂಬ ಟ್ಯಾಗ್​ಲೈನ್​ ಇದೆ. ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ. 

ಶಿವಾಜಿ ಸುರತ್ಕಲ್‌ ಭಾಗ 3 ಕೂಡ ಬರಬಹುದು: ಆಕಾಶ್‌ ಶ್ರೀವತ್ಸ

ಇನ್ನು ರಮೇಶ್ ಅರವಿಂದ್ ನಟಿಸಿ, ನಿರ್ದೇಶನ ಮಾಡಿರುವ ಸೈಬರ್‌ ಕ್ರೈಮ್‌ ಆಧಾರಿತ '100' ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರಿಯರಿಂದ ಒಳ್ಳೆಯ ಮೆಚ್ಚುಗೆಯನ್ನು ಪಡೆದಿದೆ. ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ರಮೇಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಚಿತಾ ರಾಮ್‌, ಪೂರ್ಣಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ (Shalini Rajneesh),ಸಿಐಡಿ ಅಧಿಕಾರಿಗಳು, ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ (Infosys Sudha Murthy) '100' ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

Follow Us:
Download App:
  • android
  • ios