Asianet Suvarna News Asianet Suvarna News

ರಾಗಿಣಿ ಹಾಟ್​ ಫೋಟೋಶೂಟ್​​: ಬಿಕಿನಿಯಲ್ಲೇ ನೀವ್​ ಚೆಂದ, ಚೆಡ್ಡಿ ಬಿಟ್ಬಿಡಿ ಅನ್ನೋದಾ ಫ್ಯಾನ್ಸ್​?

ಸ್ಯಾಂಡಲ್​ವುಡ್​ ಬೆಡಗಿ ರಾಗಿಣಿ ದ್ವಿವೇದಿ ಅವರು ಬಿಸಿ ಬಿಸಿ ಬಿಕಿನಿ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಶೇರ್​ ಮಾಡಿದ್ರೆ, ಇವರ ಫ್ಯಾನ್ಸ್​ ಬಿಕಿನಿಯಲ್ಲೇ ನೀವ್​ ಚೆಂದ ಅನ್ನೋದಾ? 
 

Ragini Dwivedi cute photoshoot  Her fans wants to  see her in bikini suc
Author
First Published Oct 3, 2023, 12:25 PM IST

 ಸ್ಯಾಂಡಲ್‌ವುಡ್  ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ (Fitness) ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ. ರಾಗಿಣಿ ದ್ವಿವೇದಿ ಈಚೆಗಷ್ಟೆ ಜೀರೋ ಫಿಗರ್​ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದರು. ಇವರು ಆಗಾಗ ಫ್ಯಾಷನ್ ಶೋದಲ್ಲೂ ಭಾಗಿ ಆಗುತ್ತಾರೆ. ಶೋ ಟಾಪರ್ ಆಗಿಯೂ ಹೊಳೆಯುತ್ತಾರೆ.  ಇವರು ಬಿಕಿನಿ ಡ್ರೆಸ್​ನಲ್ಲಿ ಆಗಾಗ್ಗೆ ಫೋಟೋಶೂಟ್​ ಮಾಡಿಸಿಕೊಳ್ಳುವುದು ಉಂಟು. ಅಂಥ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತದೆ. 

ಇವುಗಳ ನಡುವೆಯೇ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿಯೂ (Social Media) ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಬ್ಯೂಟಿ ಟಿಪ್ಸ್​ ಕೊಡುತ್ತಿರುತ್ತಾರೆ. ತಾವು ಕೂಡ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಶೇರ್​ ಮಾಡುತ್ತಿರುತ್ತಾರೆ. ಇದೀಗ ನಟಿ ಕ್ಯೂಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದಕ್ಕೆ ನೂರಾರು ಮಂದಿ ಕ್ಯೂಟ್​ ಎಂದು ಕಮೆಂಟ್​  ಮಾಡಿದ್ದಾರೆ. ಹಾರ್ಟ್​ ಎಮೋಜಿ ಹಾಕಿದ್ದಾರೆ. ಆದರೆ ಇನ್ನು ಕೆಲವರು ನಿಮಗೆ ಈ ಡ್ರೆಸ್​ ಸ್ಯೂಟ್​ ಆಗಲ್ಲ, ನೀವು ಬಿಕಿನಿಯಲ್ಲಿಯೇ ಚೆಂದ. ಹಾಕ್ಕೊಂಡಿರೋ ಡ್ರೆಸ್​ ತೆಗೆದುಬಿಡಿ ಅಂತ ನಟಿಯ ಕಾಲೆಳೆದಿದ್ದಾರೆ. ಇನ್ನು ಕೆಲವರು ಈ ಚಡ್ಡಿ-ಗಿಡ್ಡಿ ನಿಮ್ಗೆ ಆಗಿ ಬರಲ್ಲ. ಬಿಕಿನಿಯಲ್ಲಿಯೇ ಚೆನ್ನಾಗಿ ಕಾಣಿಸ್ತೀರಾ ಅಂತಲೂ ಹೇಳಿದ್ದಾರೆ. ಬಿಕಿನಿ ಡ್ರೆಸ್​ ಹಾಕಿಕೊಂಡು ಫೋಟೋಶೂಟ್​ ಮಾಡಿಸಿದಾಗಲೂ ಟ್ರೋಲ್​  ಮಾಡುವ ನೆಟ್ಟಿಗರು, ಇದೀಗ ಇಂಥ ಡ್ರೆಸ್​ ಹಾಕಿಕೊಂಡರೂ ಬಿಕಿನಿಯಲ್ಲಿ ನೋಡೋದೇ ಚೆಂದ ಅನ್ನುತ್ತಿದ್ದಾರೆ!

3 ನಿಮಿಷ ಐಸ್ ನೀರಲ್ಲಿ ಮುಖವಿರಿಸಿ; ನಟಿ ರಾಗಿಣಿ ದ್ವಿವೇದಿ ಕೊಟ್ಟ ಬ್ಯೂಟಿ ಟಿಪ್ಸ್​ ಏನು?

ಅಂದಹಾಗೆ ರಾಗಿಣಿ ಅವರ ಸಿನಿ ಪಯಣದ (Cine Journe) ಕುರಿತು ಹೇಳುವುದಾದರೆ, 2009 ರಲ್ಲಿ `ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಈಕೆ, ಕನ್ನಡ ಮಾತ್ರವಲ್ಲದೇ,  ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ರಾಗಿಣಿ ಅವರು ಹುಟ್ಟಿದ್ದು  ಬೆಂಗಳೂರಿನಲ್ಲಿ ಆದರೂ ಅವರದ್ದು ಪಂಜಾಬಿ ಕುಟುಂಬ. ತಂದೆ ಸೈನ್ಯದ ಜನರಲ್ ಆಗಿದ್ದರು. 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದವರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಪರ್ಧೆ ಗೆದ್ದವರು. ಹಲವಾರು ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಇವರಿಗೆ ಹೆಸರು ತಂದುಕೊಟ್ಟಿತು.  ಶಿವ ರಾಜ್​ಕುಮಾರ್​ ಜೊತೆ ನಟಿಸಿದ `ಶಿವ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾಗಿರುವ ರಾಗಿಣಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ಎಂದೂ ಗುರುತಿಸಿಕೊಂಡಿದ್ದಾರೆ. ಹೀಗೆ 15 ವರ್ಷಗಳ ಸಿನಿ ಜರ್ನಿಯಲ್ಲಿ 40 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

ಅವರ ಈ ಸ್ಮಾರ್ಟ್​ನೆಸ್​ನಿಂದಾಗಿಯೇ ಇವರಿಗೆ ಬಾಲಿವುಡ್​ನಲ್ಲಿಯೂ ಆಫರ್​ ಬಂದಿದೆ. ಕನ್ನಡ ಚಿತ್ರರಂಗದ ಹಾಟ್‌ ಆಂಡ್ ಕ್ಯೂಟ್ ಎನಿಸಿಕೊಂಡಿರುವ  ರಾಗಿಣಿ ದ್ವೀವೇದಿ ಬಾಲಿವುಡ್ ಅಂಗಳಕ್ಕೂ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಹಿಂದಿ ಸಿನಿಮಾವೊಂದಕ್ಕೆ ಸಹಿ ಮಾಡಿ ಚಿತ್ರಿಕರಣ ಆರಂಭಿಸಿದ್ದಾರೆ. ರಾಗಿಣಿ ಸಹಿ ಮಾಡಿರುವ ಹಿಂದಿ ಚಿತ್ರದ ಹೆಸರು ವಾಲ್ಕೇರ್ ಹೌಸ್‌ ಎಂದು.  ಈಗಾಗಲೇ ಲಂಡನ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್‌ ಮುಗಿದಿದೆ. ಇದು ಹಾರರ್‌ ಸಿನಿಮಾ.

ವ್ಹಾ ವ್ಹಾ ಮೈಸೂರು ದೋಸೆಯೇ... ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿಡಿಯೋ ವೈರಲ್​

Follow Us:
Download App:
  • android
  • ios