Asianet Suvarna News Asianet Suvarna News

ಈಡೇರಲೇ ಇಲ್ಲ ಡಾ.ರಾಜ್‌ ಕೊನೆಯ ಆಸೆ! ಅಂತಿಮ ಕನಸು ಹೇಳಿದ್ದ ವಿಡಿಯೋ ವೈರಲ್‌- ಅದರಲ್ಲೇನಿದೆ?

ಕನ್ನಡ ನಾಡು ಕಂಡ ಅಪ್ರತಿಮ ನಟ ಡಾ.ರಾಜ್‌ಕುಮಾರ್‌ ಅವರಿಗೆ ಕೊನೆಯ ಆಸೆ ಒಂದಿತ್ತು. ಅದು ನೆರವೇರಲೇ ಇಲ್ಲ. ಅದರ ವಿಡಿಯೋ ವೈರಲ್‌ ಆಗಿದೆ. ಅದರಲ್ಲಿ ನಟ ಹೇಳಿದ್ದೇನು? 
 

Dr Rajkumars last wish to become agriculturist never fulfilled The old video gone viral suc
Author
First Published Aug 22, 2024, 5:18 PM IST | Last Updated Aug 22, 2024, 5:18 PM IST

ಕನ್ನಡ ನಾಡು ಕಂಡ ಅಪ್ರತಿಮ ನಟನೆಂದರೆ ಅದು ಡಾ.ರಾಜ್​ಕುಮಾರ್​. ಸುಮಾರು ಐದು ದಶಕಗಳವರೆಗೆ ಚಿತ್ರರಂಗ ಆಳುತ್ತಾ ಬದುಕಿನುದ್ದಕ್ಕೂ ಒಂದೇ ಒಂದು ಕಪ್ಪುಚುಕ್ಕೆಯನ್ನು ಇಟ್ಟುಕೊಳ್ಳದೇ ಮರೆಯಾದ ನಟ ಇವರು. ಕನ್ನಡಕ್ಕಾಗಿಯೇ ಜೀವನ ಮೀಸಲಿಟ್ಟು, ರಾಜಕೀಯಕ್ಕೆ ಪ್ರವೇಶಿಸಲು ಆಫರ್​ ಬಂದರೂ ತಿರಸ್ಕರಿಸುತ್ತಲೇ ಕೋಟ್ಯಂತರ ಕನ್ನಡಿಗರ ಕಣ್ಮಣಿಯಾಗಿದ್ದವರು ಡಾ.ರಾಜ್​ಕುಮಾರ್​. ಓದಿದ್ದು ನಾಲ್ಕನೇ ತರಗತಿಯಾದರೂ ಅತ್ಯದ್ಭುತ ಭಾಷಾ ಪ್ರೌಢಿಮೆ, ನಿರರ್ಗಳವಾಗಿ ಸಂಸ್ಕೃತ ಉಚ್ಚರಿಸುತ್ತಿದ್ದ ರೀತಿ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ತಮ್ಮ ಕಂಠಮಾಧುರ್ಯದಿಂದ ಅವರು ಮಾಡಿದ್ದ ಮೋಡಿ... ಬಹುಶಃ ಚಿತ್ರರಂಗದಲ್ಲಿ ಅಂಥ ಕಲಾವಿದ ಮತ್ತೊಬ್ಬ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಎತ್ತರಕ್ಕೆ ಏರಿದವರು ಅವರು.  ಅವರ ಚಿತ್ರದ ಹಾಡುಗಳು ಇಂದಿಗೂ ಎಲ್ಲರ ಬಾಯಿಯಲ್ಲಿಯೂ ನಲಿದಾಡುತ್ತದೆ, ಅವರ ಬಹುತೇಕ ಎಲ್ಲಾ ಸಿನಿಮಾಗಳ ಹಾಡುಗಳು ಎವರ್​ಗ್ರೀನ್ ಎಂದರೆ ಅದರ ತಾಕತ್ತು ಎಷ್ಟು ಎಂದು ಊಹಿಸಬಹುದು. ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್​ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.

ಆದರೆ ಇಂಥ ಅಪೂರ್ವ ನಟನ ಕೊನೆಯ ಆಸೆ ಕೊನೆಗೂ ಈಡೇರಿಲೇ ಇಲ್ಲ ಎನ್ನುವಂಥ ವಿಡಿಯೋ ಒಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಹೌದು! ಡಾ.ರಾಜ್‌ ಅವರು ಅದ್ಭುತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರಿಗೆ ಇದನ್ನು ಬಿಟ್ಟು ಇನ್ನೊಂದು ಆಸೆಯಿತ್ತು. ಆ ಆಸೆಯನ್ನು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅದು ನಮ್ಮ ಜೀವನದ ಕೊನೆಯ ಆಸೆ ಎಂದೂ ಅದರಲ್ಲಿ ಹೇಳಿದ್ದರು. ಆದರೆ ಅದು ಕೊನೆಗೂ ಈಡೇರಲೇ ಇಲ್ಲ. 

ಡಾ.ರಾಜ್​ ಎಂದರೆ ಮ್ಯಾಜಿಕ್​: ಅಮೆರಿಕ ವಿವಿಯ ಪದವಿ ಪ್ರದಾನ ಸಮಾರಂಭದಲ್ಲಿ ಮೇರುನಟನ ಗುಣಗಾನ ಮಾಡಿದ ವಿದ್ಯಾರ್ಥಿನಿ
 
ಈ ವಿಡಿಯೋದಲ್ಲಿ ಡಾ.ರಾಜ್‌ಕುಮಾರ್‌ ಅವರು ತಮಗೆ ಕೃಷಿ ಮಾಡಬೇಕು ಎನ್ನುವ ಆಸೆ ಇದೆ ಎಂದು ಹೇಳಿದ್ದರು. ಅಷ್ಟಕ್ಕೂ ನಟ, ಬಿಡುವು ಸಿಕ್ಕಾಗಲೆಲ್ಲಾ ಕೃಷಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಕೃಷಿಕನಾಗುವ ಹಂಬಲವಿತ್ತು. ಉಳುಮೆ ಮಾಡುವ ಆಸೆ ಇತ್ತು. ಆದರೆ ಅಷ್ಟರಲ್ಲಿಯೇ ವಿಧಿಲೀಲೆಯೇ ಬೇರೆಯಾಗಿ ಹೋಗಿತ್ತು. ನಟ ಎಲ್ಲರನ್ನೂ ಬಿಟ್ಟು ಹೋದರು. ಆದರೆ ತಾವು ಕೃಷಿಕನಾಗಬೇಕು ಎಂಬ ಅವರ ಆಸೆ ಆಸೆಯಾಗಿಯೇ ಉಳಿದುಬಿಟ್ಟಿತು. ಈ ವಿಡಿಯೋದಲ್ಲಿ ರಾಜ್‌ಕುಮಾರ್‌ ಅವರು, ತಾವು ಚಿಕ್ಕವರಿರುವಾಗಿನ ಕುರಿತು ಮಾತನಾಡಿದ್ದಾರೆ.  ‘ಬಾಲ್ಯದಲ್ಲಿ  ಮೂರ್ನಾಲ್ಕು   ಮೈಲಿ ಕಾಡಿಗೆ ಹೋಗುತ್ತಾ ಇದ್ದೆ. ಕುರಿ ಮರಿ, ಹಸುಗಳನ್ನು ಮೇಯಿಸುತ್ತಿದ್ದೆ. ಈ ರೀತಿ ಕಾಲ ಕಳೆದವನಾದ್ದಾರಿಂದ ನನಗೆ ನನ್ನ ವೃತ್ತಿ ಬಿಟ್ಟು ತೃಪ್ತಿ ಕೊಡೋ ಕೆಲಸ ಎಂದರೆ ಅದು ಕೃಷಿ ಎಂದು ಹೇಳುವುದನ್ನು ಕೇಳಬಹುದು. 

ಈ ವಿಡಿಯೋದಲ್ಲಿ ರಾಜ್‌ ಅವರು, ‘ನನ್ನ ಕೊನೆಯ ಆಸೆ ಭೂಮಿಯಲ್ಲಿ ಕೆಲಸ ಮಾಡಬೇಕು, ಕೃಷಿಕನಾಗಬೇಕು ಎಂಬುದಾಗಿದೆ. ಚಿಕ್ಕ ವಯಸ್ಸಿನಿಂದಲೇ ಈ ಆಸೆ  ಬೇರೂರಿಬಿಟ್ಟಿದೆ ಎಂದಿದ್ದರು. ಆದರೆ ನರಹಂತಕ ವೀರಪ್ಪನ್‌ನಿಂದ ಅಪಹರಣಕ್ಕೆ ಒಳಗಾಗಿ,  ಆಮೇಲೆ ಡಾ.ರಾಜ್‌ ಇಹಲೋಕವನ್ನೇ ತ್ಯಜಿಸಿಬಿಟ್ಟರು. ಚಿತ್ರರಂಗದಲ್ಲಿ ಕೊನೆಯವರೆಗೂ ಬಿಜಿಯಾಗಿದ್ದ ನಟನಿಗೆ ಕೃಷಿ ಮಾಡುವ ಅವಕಾಶ ದೊರಕಲೇ ಇಲ್ಲ. ಈ ಆಸೆ ಅವರ ಜೊತೆಯೇ ಮಣ್ಣಾಗಿರುವುದು ಮಾತ್ರ ದುರದೃಷ್ಟವೇ ಸರಿ.  

ಅಪ್ಪು ಸರ್​ ಸಾಯೋ ಎರಡು ದಿನ ಮುಂಚೆ ನನಗೆ ಮೆಸೇಜ್​ ಕಳಿಸಿದ್ರು... ನಟ ಪ್ರಥಮ್ ಹೇಳಿದ್ದೇನು?
 

Latest Videos
Follow Us:
Download App:
  • android
  • ios