Dr Rajkumar Statue ರಾಜ್ ಕುಮಾರ್ ಕಂಚಿನ ಪುತ್ಥಳಿ ಕದ್ದ ಅಪ್ರಾಪ್ತರು!
- ಲುಂಬಿನಿ ಗಾರ್ಡನ್‌ಲ್ಲಿದ್ದ ರಾಜ್ ಕುಮಾರ್ ಕಂಚಿನ ಪುತ್ಥಳಿ
- ಇಬ್ಬರು ಶಂಕಿತ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ
- ಕಂಚಿನ ಪುತ್ಥಳಿ ಪತ್ತೆಹಚ್ಚಿದ ಪೊಲೀಸರು
ಬೆಂಗಳೂರು(ಫೆ.07): ರಾಜ್ ಕುಮಾರ್(dr rajkumar) ಅವರ ಕಂಚಿನ ಪುತ್ಥಳಿ(Statue) ಕಳವು ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ಅಮೃತಹಳ್ಳಿ ಪೊಲೀಸರು(Police) ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.
ಅರಣ್ಯ ವೀಕ್ಷಕ ಸಿ.ಕೆ.ರಾಜು ಅವರು ಜ.24ರಂದು ಬೆಳಗ್ಗೆ 9ರ ಸುಮಾರಿಗೆ ಕರ್ತವ್ಯ ನಿಮಿತ್ತ ಲುಂಬಿನಿ ಗಾರ್ಡನ್‌ಗೆ(lumbini garden) ಬಂದಿದ್ದಾಗ ಅಲ್ಲಿನ ಡಾ ರಾಜ್‌ಕುಮಾರ್ ಪುತ್ಥಳಿ ಇಲ್ಲದಿರುವುದು ತಿಳಿದು ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಜ.25ರಂದು ಅರಣ್ಯ ಇಲಾಖೆಯ ಹೆಣ್ಣೂರು ವಿಭಾಗದ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಎಂ.ಎಸ್.ಯೋಗೇಶ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಇದೀಗ ಇಬ್ಬರು ಶಂಕಿತ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
Puneeth Rajkumar Inspiration : ಪುನೀತ್ ಹೆಸರಿನಲ್ಲಿ ಉಚಿತ ಗ್ರಂಥಾಲಯ ತೆರೆದ ಯಾದಗಿರಿ ಪೊಲೀಸ್
ಶಂಕಿತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಂಚಿನ ಪುತ್ಥಳಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕೆ ಪುತ್ಥಳಿ ಕಳವು ಮಾಡಲಾಗಿತ್ತು. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಾ.ರಾಜ್ ಪುತ್ಥಳಿ ಪಕ್ಕದಲ್ಲೇ ಅಪ್ಪು ಪ್ರತಿಮೆ: ರಾಘಣ್ಣ
ಡಾ. ರಾಜ್‌ಕುಮಾರ್ ಅವರ ಸಮಾಧಿಯ ಬಳಿ ರಾಜ್ ಪುತ್ಥಳಿ ಪಕ್ಕದಲ್ಲೇ ಪುನೀತ್ ರಾಜ್‌ಕುಮಾರ್(Puneeth Rajkumar) ಅವರ ಪುತ್ಥಳಿ ನಿರ್ಮಿಸಲಾಗುವುದು ಎಂದು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ತಯಾರಿ ವೀಕ್ಷಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
Puneeth Rajkumar Statue: ಮನೆಯ ಅಂಗಳದಲ್ಲಿ ಅಪ್ಪು ಪುತ್ಥಳಿ ಸ್ಥಾಪಿಸಿದ ರೈತ ದಂಪತಿ
‘ಅಪ್ಪು ಪುತ್ಥಳಿ ಅನಾವರಣಕ್ಕೆ ಇನ್ನೂ ದಿನ ನಿಗದಿಯಾಗಿಲ್ಲ. ಕುಟುಂಬ ವರ್ಗ, ಗಣ್ಯರ ಸಮಯ ನೋಡಿಕೊಂಡು ದಿನಾಂಕ ನಿಗದಿಪಡಿಸಲಾಗುವುದು. ಅಪ್ಪಾಜಿ ಅವರ ಸಮಾಧಿಯ ಪಕ್ಕದಲ್ಲೇ ಅಪ್ಪು ಪುತ್ಥಳಿ ನಿರ್ಮಿಸಲಾಗುವುದು. ಪುತ್ಥಳಿ ಅನಾವರಣ ಯಾವಾಗ ಆಗುತ್ತೆ, ಎಷ್ಟುಬೇಗ ಆಗುತ್ತೆ ಅನ್ನೋದಕ್ಕಿಂತ, ಎಷ್ಟುಚೆನ್ನಾಗಿ ಆಗುತ್ತೆ ಅನ್ನೋದೇ ಮುಖ್ಯ. ಪ್ರತಿಮೆಯನ್ನು ಚೆನ್ನಾಗಿ ಮಾಡಿದ್ದಾರೆ. ಇನ್ನಷ್ಟೇ ಅಂತಿಮ ಸ್ಪರ್ಶ ನೀಡಬೇಕಿದೆ’ ಎಂದರು. ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ ನೇತೃತ್ವದಲ್ಲಿ ಪುನೀತ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ.
ಪುನಿತ್ ಪುತ್ಥಳಿ ಸ್ಥಾಪನೆಗೆ ಅನುಮತಿ ಕೋರಿ ಮನವಿ
ಇತ್ತೀಚೆಗೆ ಆಗಲಿದ ಯುವ ನಟ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿ ಸ್ಥಾಪನೆಗೆ ಜಿಲ್ಲಾ ಕೇಂದ್ರದಲ್ಲಿ ಸ್ಥಳಾವಕಾಶ ಮಾಡಿಕೊಡುವಂತೆ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಜಿಲ್ಲಾಧಿಕಾರಿಗಳಿಗೆ, ನಗರಸಭೆ ಅಧ್ಯಕ್ಷರಿಗೆ, ಆಯುಕ್ತರಿಗೆ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ನಗರದ ಎಂಜಿ ರಸ್ತೆಯ ಅಂಭಭಾವನಿ ಹೋಟೆಲ್ ಸಮೀಪ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಈಗಾಗಲೇ ರಾಜ್ಯದ ಹಲವಡೆಗಳಲ್ಲಿ ಪುನೀತ್ ರವರ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಪುನೀತ್ ತಮ್ಮ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ನಟ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್‌ಗೆ ಅನೇಕ ಪ್ರಶಸ್ತಿ ಗೌರವಗಳನ್ನು ಕೊಟ್ಟು ಗೌರವಿಸಿದೆ. ಆದ್ದರಿಂದ ಜಿಲ್ಲಾ ಕೇಂದ್ರದ ಜನ ಮಾನಸದಲ್ಲಿ ಪುನೀತ್ ಕುಮಾರ್ ಶಾಶ್ವತವಾಗಿ ಉಳಿಯುವಂತೆ ಮಾಡಲು ಅಂಭಭಾವನಿ ಹೋಟೆಲ್ ಸಮೀಪ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡುವಂತೆ ಕೆಪಿಸಿಸಿ ಸದಸ್ಯ ವಿನಯ್ ಮನವಿ ಮಾಡಿದ್ದಾರೆ.
ಡಾ. ರಾಜ್ ಪುತ್ಥಳಿ ಸ್ಥಾಪನೆಗೆ ಮನವಿ
ಗದಗ ಬೆಟಗೇರಿ ಅವಳಿ ನಗರದಲ್ಲಿ ಯಾವುದಾದರೂ ವೃತ್ತದಲ್ಲಿ ಕನ್ನಡ ವರನಟ ಡಾ. ರಾಜಕುಮಾರ ಅವರ ಪುತ್ಥಳಿ ಸ್ಥಾಪನೆ ಹಾಗೂ ಮುಖ್ಯರಸ್ತೆಗೆ ಅವರ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ ಹಾಗೂ ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಗದಗ ಜಿಲ್ಲಾ ಘಟಕದಿಂದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. 4 ತಿಂಗಳ ಹಿಂದೆ ಸಲ್ಲಿಸಿರುವ ಮನವಿಗೆ ಪೌರಾಯುಕ್ತರು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.