ಒಮ್ಮೆ ಅಣ್ಣಾವ್ರು ಅಂಬರೀಶ್ ಮತ್ತು ಸುಮಲತಾ ಅವರನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಅವರಿಗೆ ಪಾರ್ವತಮ್ಮನವರು ಹೇಳಿದಂತೆ, ಅವರೇ ಹೋಗಿ ಅಂಬರೀಶ್ ಮತ್ತು ಸುಮಲತಾ ಅವರನ್ನು ಕರೆದುಕೊಂಡು ಅಣ್ಣಾವ್ರ ಮನೆಗೆ ಬಂದರು. ಆಗ ಆಗಿದ್ದೇನು? ಈ ಸ್ಟೋರಿ ನೋಡಿ..
'ಏ ಸುಮ್ನಿರಯ್ಯ ನೀನು..' ಎಂದು ಪಾರ್ವತಮ್ಮ ಅಂಬರೀಶ್‌ಗೆ ಗದರಿದ್ದೇಕೆ?
ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರಾದ ವರನಟ ಡಾ. ರಾಜ್‌ಕುಮಾರ್ (Dr Rajkumar) ಮತ್ತು ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ನಡುವಿನ ಬಾಂಧವ್ಯದ ಬಗ್ಗೆ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ವಿಡಿಯೋದಲ್ಲಿ ಸ್ವಾರಸ್ಯಕರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಏನಾಗಿತ್ತು?
ಒಮ್ಮೆ ಅಣ್ಣಾವ್ರು ಅಂಬರೀಶ್ ಮತ್ತು ಸುಮಲತಾ ಅವರನ್ನು ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಅವರಿಗೆ ಅಮ್ಮ (ಪಾರ್ವತಮ್ಮನವರು) ಹೇಳಿದಂತೆ, ಅವರೇ ಹೋಗಿ ಅಂಬರೀಶ್ ಮತ್ತು ಸುಮಲತಾ ಅವರನ್ನು ಕರೆದುಕೊಂಡು ಅಣ್ಣಾವ್ರ ಮನೆಗೆ ಬಂದರು. ಮನೆಯಲ್ಲಿ ಮೊಮ್ಮಕ್ಕಳಿಂದ ಹಿಡಿದು ದೊಡ್ಡ ಸೊಸೆ ಗೀತಮ್ಮನವರೆಗೂ ಇಡೀ ರಾಜ್ ಕುಟುಂಬವೇ ಅತಿಥಿಗಳಿಗಾಗಿ ಕಾಯುತ್ತಿತ್ತು.
ಆಹಾ ನಿಮ್ಮ ಸಾಂಗ್ ನೋಡಿದೆ ನಾನು
ಸ್ವತಃ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮನವರು ಬಾಗಿಲಲ್ಲಿ ನಿಂತು ಅಂಬರೀಶ್ ದಂಪತಿಯನ್ನು ಸ್ವಾಗತಿಸಿದರು. ಆಗ ಅಂಬರೀಶ್ ಅವರು ಅಣ್ಣಾವ್ರನ್ನು ನೋಡಿದ ತಕ್ಷಣ ತಮ್ಮದೇ ಶೈಲಿಯಲ್ಲಿ, "ಅಣ್ಣ ಬಾಸ್.. ಆಹಾ ನಿಮ್ಮ ಸಾಂಗ್ ನೋಡಿದೆ ನಾನು.. ಏನ್ ಬಾಸ್ ಎಲ್ಲರೂ ಸಾಂಗ್ ನೋಡಿ ಅಟ್ರಾಕ್ಟ್ ಆಗ್ತಾರೆ, ಆದ್ರೆ ನಾನು ನಿಮ್ಮ ಕೈ ನೋಡಿದೆ ಬಾಸ್.. ಹೀರೋಯಿನ್ ಎಲ್ಲಿ ಹಿಡಿತೀರಾ ನೀವು.." ಎಂದು ತಮಾಷೆ ಮಾಡಿದರು.
ಯಲಾ ಮಾರ್ಜಾಲ..
ಅಂಬರೀಶ್ ಅವರ ಈ ಮಾತನ್ನು ಕೇಳಿದ ತಕ್ಷಣ ಡಾ. ರಾಜ್‌ಕುಮಾರ್ ಅವರ ಮುಖ ಪೂರ್ತಿ ಕೆಂಪಗಾಗಿ ಹೋಯಿತಂತೆ. ತಕ್ಷಣ ಪಾರ್ವತಮ್ಮನವರು ಅಂಬರೀಶ್ ಅವರನ್ನು "ಏ ಸುಮ್ನಿರಯ್ಯ ನೀನು.. ಸುಮ್ನಿರು.." ಎಂದು ಗದರಿದರು. ಆಗ ಅಣ್ಣಾವ್ರು ಕೋಪ ಮಿಶ್ರಿತ ಪ್ರೀತಿಯಿಂದ ಅಂಬರೀಶ್ ಅವರನ್ನು "ಯಲಾ ಮಾರ್ಜಾಲ.." (ಬೆಕ್ಕು/ಕಪಟಿ ಎಂಬರ್ಥದಲ್ಲಿ ಬರುವ ಪದ) ಎಂದು ಬೈದರಂತೆ.
ಅಂಬರೀಶ್ ಅವರ ತರ್ಲೆ ಸ್ವಭಾವ ಮತ್ತು ಅಣ್ಣಾವ್ರ ಮುಗ್ಧತೆಗೆ ಈ ಘಟನೆ ಸಾಕ್ಷಿಯಂತಿದೆ. ಎಷ್ಟೇ ದೊಡ್ಡವರಾದರೂ ಅಂಬರೀಶ್ ಅವರು ಅಣ್ಣಾವ್ರ ಮುಂದೆ ಮಕ್ಕಳಂತೆ ತಮಾಷೆ ಮಾಡುತ್ತಿದ್ದರು ಹಾಗೂ ಅಣ್ಣಾವ್ರು ಕೂಡ ಅಷ್ಟೇ ಹಕ್ಕಿನಿಂದ ಅವರನ್ನು ಬೈಯುತ್ತಿದ್ದರು ಎಂಬುದನ್ನು ರಾಕ್‌ಲೈನ್ ವೆಂಕಟೇಶ್ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದನ್ನು 'ವಿವಿಧ ವಿಸ್ಮಯ' ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.


