ಸಿನಿಮಾ ನಿರ್ಮಾಪಕರು, ಕಲಾವಿದರು ಸೇರಿದಂತೆ, ಚಿತ್ರರಂಗ ಹಾಗೂ ಸಿನಿಪ್ರಿಯ ಪ್ರೇಕ್ಷಕರು ತುಂಬಾ ತಲೆ ಕೆಡಿಸಿಕೊಂಡಿದ್ದರು. ಆಗ ಆ ಸಂಗತಿ ಡಾ ರಾಜ್‌ಕುಮಾರ್ ಗಮನಕ್ಕೂ ಬಂದಿತ್ತು. ಆಗ ಮೇರುನಟ ಈ ಬಗ್ಗೆ..


ಡಾ ರಾಜ್‌ಕುಮಾರ್ (Dr Rajkumar) ಅಂದು ಹೇಳಿದ್ದ ಅದೊಂದು ಮಾತು ಇಂದಿಗೂ ಕೂಡ ಪ್ರಸ್ತುತ ಎನ್ನಿಸುತ್ತಿದೆ. ಹೌದೋ ಅಲ್ಲವೋ ಎಂದು ನೀವೇ ಹೇಳಿ.. ಹಾಗಿದ್ರೆ ಅದಕ್ಕಿಂತ ಮೊದಲು ವಿಷಯ ಏನು ಎಂದು ನೀವು ತಿಳಿದಿರಬೇಕಲ್ಲ! ಹೌದು, ಅದು ತುಂಬಾ ಮುಖ್ಯ, ಅದರಲ್ಲೂ ಡಾ ರಾಜ್‌ಕುಮಾರ್ ಅವರು ಅಂದು ಅದೇನು ಹೇಳಿದ್ದರು ಎಂಬುದು ತುಂಬಾ ಮುಖ್ಯವಾದ ಸಂಗತಿ. ಅದೇನೆಂದು ಮುಂದೆ ನೋಡಿ.. 

ಅಂದು ಟಿವಿ ಕಾಲ ಆಗಷ್ಟೇ ಶುರುವಾಗಿತ್ತು. ದೂರದರ್ಶನ (Dooradarshana) ಬಂದಿತ್ತು, ಹಾಗೂ ಅದೊಂದೇ ಇತ್ತು. ಅದರಲ್ಲಿ ವಾರಕ್ಕೊಂದು ಕನ್ನಡ ಸಿನಿಮಾ ಪ್ರಸಾರ ಆಗುತ್ತಿತ್ತು. ಸಾಮಾನ್ಯವಾಗಿ ಹಳೆಯ ಸಿನಿಮಾಗಳೇ ಪ್ರಸಾರ ಆಗುತ್ತಿದ್ದವು. ಆಗ ಅದೊಂದು ಹುಯಿಲು ಎದ್ದಿಬಿಟ್ಟಿತು. ಅದೇನಂದ್ರೆ, ಈ ಟಿವಿ, ದೂರದರ್ಶನ ಬಂದು ಸಿನಿಮಾವನ್ನು ನುಂಗಿ ಹಾಕ್ತಿದೆ. ಸಿನಿಮಾ ನೋಡಲು ಇನ್ಮುಂದೆ ಜನರು ಬರೋದಿಲ್ಲ. ಕಾರಣ, ಹೇಗೂ ಟಿವಿನಲ್ಲೇ ಸಿನಿಮಾ ಬರುತ್ತಲ್ಲಾ..

ಪುನೀತ್ & ಅಣ್ಣಾವ್ರ ಬಗ್ಗೆ ನಟ ರಮೇಶ್ ಭಟ್ ಮಾತು.. ನಾನು 'ನತದೃಷ್ಟ' ಅಂದಿದ್ದೇಕೆ?

ಈ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಕಲಾವಿದರು ಸೇರಿದಂತೆ, ಚಿತ್ರರಂಗ ಹಾಗೂ ಸಿನಿಪ್ರಿಯ ಪ್ರೇಕ್ಷಕರು ತುಂಬಾ ತಲೆ ಕೆಡಿಸಿಕೊಂಡಿದ್ದರು. ಆಗ ಆ ಸಂಗತಿ ಡಾ ರಾಜ್‌ಕುಮಾರ್ ಗಮನಕ್ಕೂ ಬಂದಿತ್ತು. ಆಗ ಕನ್ನಡದ ಅಸ್ಮಿತೆ, ಮೇರುನಟ ಈ ಬಗ್ಗೆ ಅದೇನೋ ಹೇಳಿದ್ದರು. ಆಗ ಹಲವರು ಅವರ ಮಾತಿನಿಂದ ಸಮಾಧಾನ ಹೊಂದಿದ್ದರು. ಜೊತೆಗೆ, ಮುಂದೆ ಕೂಡ ಇಂದಿಗೂ ಕನ್ನಡ ಚಿತ್ರರಂಗ ದಿನದಿನಕ್ಕೂ ವಿಶಾಲವಾಗಿ ಹಬ್ಬುತ್ತಲೇ ಇದೆ. ಹಾಗಿದ್ರೆ ಕನ್ನಡದ ವರನಟ ಹೇಳಿದ್ದು ಏನು..? ನೋಡಿ.. 

'ಕರ್ನಾಟಕದ ಬೆಂಗಳೂರು ಮಹಾನಗರ ಎಲ್ಲಾ ಭಾಷೆಗಳಿಗೂ ತವರುಮನೆಯಾಗಿದೆ. ನಮ್ಮ ಸಂಸ್ಕ್ರತಿ ನಮ್ಮ ಸ್ವಂತ ಭಾಷೆ ಎಲ್ಲವನ್ನೂ ಎಲ್ಲಿ ಬಿಟ್ಟುಬಿಡುತ್ತೇವೆಯೋ ಅನ್ನೋ ಭಯ ಕೂಡ ಒಮ್ಮೊಮ್ಮೆ ಕಾಡುತ್ತೆ.. ಅಂದ್ರೆ ಆ ಪರಭಾಷೆಗಳಿಂದ ತೊಂದ್ರೆ ಆಗುತ್ತೆ ಅಂತ ಅಲ್ಲ.. ಹಿಂದಿನಿಂದಲೂ ಹಾಗೇ ಬೆಳೆದು ಬಂದಿರೋದು.. ಅದಕ್ಕೆ ಬೇರೆ ಮಾರ್ಗವಿಲ್ಲ. ಆದರೆ, ಬೇರೆ ಮಾರ್ಗವಿಲ್ಲ ಅಂತ ಸುಮ್ನೆ ಕೂರೋದಕ್ಕೂ ಆಗಲ್ಲ, ಪ್ರಯತ್ನ ಪಡಲೇಬೇಕು. 

ಪುನೀತ್‌ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?

ನಾವು ಆ ಬಗ್ಗೆ ಸ್ವಲ್ಪ ಪ್ರಯತ್ನಪಟ್ಟು ಸುಧಾರಿಸಿಕೊಳ್ಳಬೇಕು.. ನಮ್ಮ ಕನ್ನಡ ಚಿತ್ರರಂಗ ಕೂಡ ವಿಶಾಲವಾಗಿ ಬೆಳೆದಿದೆ. ಇದರ ನಡುವೆ ದೂರದರ್ಶನ ಬಹಳಷ್ಟು ಪ್ರಭಾವ ಬೀರಿದ್ದರಿಂದ ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಹೇಳ್ತಾ ಇದಾರೆ. ಆದರೆ, ಹಾಗೇ ಆಗೋದಕ್ಕೆ ಸಾಧ್ಯವಿಲ್ಲ. ಏಕೆಂದರೆ, ದೂರದರ್ಶನ ಬಂದಮೇಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡುತ್ತಿವೆ. ಏನಿದ್ದರೂ ದೊಡ್ಡ ಸ್ಕ್ರೀನಿನಲ್ಲಿ ನೋಡವಷ್ಟು ಮಜಾ ಟಿವಿಯಲ್ಲಿ ನೋಡುವಾಗ ಸಿಗೋದು ಬಹಳ ಕಷ್ಟ..!' ಎಂದಿದ್ದರು ಡಾ ರಾಜ್‌ಕುಮಾರ್!