ವಿಷ್ಣುವರ್ಧನ್ 'ಮುತ್ತಿನಹಾರ' ಬಿಡುಗಡೆ ವೇಳೆ ಪತ್ರಿಕೆಗೆ ಪತ್ರ ಬರೆದಿದ್ದ ಡಾ ರಾಜ್‌ಕುಮಾರ್!
ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಇಬ್ಬರನ್ನೂ ಕನ್ನಡದ ಮೇರ ನಟರು ಎಂದು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ಅವರಿಬ್ಬರು ಬಂದ ಕಾಲಘಟ್ಟ ಬೇರೆಬೇರೆ. ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರಿಗಿಂತ 20 ವರ್ಷ ಚಿಕ್ಕವರು. ಅವರಿಬ್ಬರ ಮಧ್ಯೆ..

ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಇನ್ನೊಬ್ಬರು ಮೇರು ನಟ ಡಾ ವಿಷ್ಣುವರ್ಧನ್ (Dr Vishnuvardhan) ಅವರಿಗಿಂತ 20 ವರ್ಷ ದೊಡ್ಡವರಾಗಿದ್ದರು. ಆದರೆ, ಅವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಆದರೆ, ಅವರಿಬ್ಬರ ಅಭಿಮಾನಿಗಳು ಸಿನಿಮಾದ ಪಾತ್ರಗಳ ಸೆಂಟಿಮೆಂಟ್ ಹಾಗೂ ಎಮೋಶನ್ ಮೂಲಕ ಕಿತ್ತಾಡುತ್ತಿದ್ದರು. ಟೈಮ್ ಸಿಕ್ಕಾಗಲೆಲ್ಲಾ ಡಾ ರಾಜ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ತಮ್ಮತಮ್ಮ ಅಭಿಮಾನಿಗಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದರೂ ಅದು ಸಾಧ್ಯವೇ ಆಗುತ್ತಿರಲಿಲ್ಲ.
ನಟ ವಿಷ್ಣುವರ್ಧನ್ ಬಗ್ಗೆ ಡಾ ರಾಜ್‌ಕುಮಾರ್ ಅವರಿಗೆ ಅಪಾರ ಗೌರವ ಇತ್ತು. ನಟ ವಿಷ್ಣು ಅವರಿಗೂ ಅಷ್ಟೇ, ಅವರು ಡಾ ರಾಜ್ ಅವರನ್ನು ಅಣ್ಣನಂತೆ ನೋಡುತ್ತಿದ್ದರು. ಹಲವಾರು ಸಂದರ್ಶನಗಳಲ್ಲಿ ಅದನ್ನು ಸ್ವತಃ ನಟ ವಿಷ್ಣುವರ್ಧನ್ ಹೇಳಿದ್ದಾರೆ. ಆದರೆ, ಅವರಿಬ್ಬರ ಅಭಿಮಾನಿಗಳ ಮಧ್ಯೆ ಸದಾ ಕಿತ್ತಾಟ ಇದ್ದೇ ಇರುತ್ತಿತ್ತು. ಈ ಮೇರು ನಟರಿಬ್ಬರು ಪರಸ್ಪರ ಗೌರವ-ಪ್ರೀತಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಅವರ ಅಭಿಮಾನಿಗಳು ಯಾವತ್ತೂ ಅರ್ಥ ಮಾಡಿಕೊಳ್ಳಲೇ ಇಲ್ಲ ಅಂತಾರೆ ಆಗಿನ ಕಾಲದಲ್ಲಿ ಅದನ್ನು ಕಣ್ಣಾರೆ ನೋಡಿದ್ದ ಅದೆಷ್ಟೋ ಹಿರಿಯರು.
ಡಾ ರಾಜ್ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ಗೆ ಬೆಂಕಿ ಹಚ್ಚಿದ್ಯಾರು? ಡಾನ್‌ಗೆ ಚಾಡಿ ಹೇಳಿದ್ದು ಯಾರು?
ನಟ ವಿಷ್ಣುವರ್ಧನ್ ಅವರ 125ನೇ ಸಿನಿಮಾ ಬಿಡುಗಡೆ ಆದಾಗ ಡಾ ರಾಜ್‌ಕುಮಾರ್ ಅವರು ಪತ್ರಿಕೆಯ ಮೂಲಕ ಶುಭ ಕೋರಿದ್ದರು. ಆಗ ಪತ್ರವೊಂದನ್ನು ಬರೆದಿದ್ದರು. 'ಈಗ ಬಿಡುಗಡೆ ಆಗಿರುವ 'ಮುತ್ತಿನಹಾರ' ಸಿನಿಮಾ ನನ್ನ ಸಹೋದರ ವಿಷ್ಣುವರ್ಧನ್ ಅವರ 125ನೇ ಚಿತ್ರವಾಗಿದೆ. ಈ ಶುಭ ಸಮಯದಲ್ಲಿ ನಾನು, ಅವರು ಇನ್ನೂ ನೂರಾರು ಸಿನಿಮಾಗಳಲ್ಲಿ ಅಭಿನಯಿಸಲಿ. ತಾಯಿ ಭುವನೇಶ್ವರಿ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಬಯಸುವ- ಡಾ ರಾಜ್‌ಕುಮಾರ್' ಎಂದು ಅಣ್ಣಾವ್ರು ತಮ್ಮ ಶುಭಾಶಯ ತಿಳಿಸಿದ್ರು.
ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ತಮ್ಮ ಕುಟುಂಬ ಎನ್ನುವಂತೆ ನೋಡಿಕೊಳ್ತಾ ಇದ್ರು. ತಮಗಿಂತ ಕಿರಿಯ ನಟರಿಗೆ ಹೇಗೆ ಸಪೋರ್ಟ್ ಮಾಡ್ತಾ ಇದ್ರು, ಹೇಗೆ ಪ್ರೀತಿ-ಗೌರವ ತೋರಿಸ್ತಾ ಇದ್ರು ಅನ್ನೋದಕ್ಕೆ ಈ ಪತ್ರವೂ ಸಾಕ್ಷಿ ಎನ್ನಬಹುದೇನೋ. ಆದರೆ, ಇಂದಿಗೂ ಕೂಡ ಡಾ ರಾಜ್ ಅಭಿಮಾನಿಗಳು ಡಾ ವಿಷ್ಣುವರ್ಧನ್ ಅಭಿಮಾನಿಗಳು ಬೇರೆಬೇರೆ ಅನ್ನೋ ಫೀಲಿಂಗ್ ಹಲವರಲ್ಲಿ ಇದೆ. ಅದೆಷ್ಟೂ ಯೂಟ್ಯೂಬ್ ಇಂಟರ್‌ವ್ಯೂಗಳಲ್ಲಿ ಕೂಡ ಡಾ ರಾಜ್ ಅವರನ್ನು ಹೊಗಳಿ ನಟ ವಿಷ್ಣುವರ್ಧನ್ ಅವರನ್ನು ತೆಗಳುವ ಅದೆಷ್ಟೋ ಹಿರಿಯರು-ಕಿರಿಯರು ನಮ್ಮಲ್ಲಿದ್ದಾರೆ.
ಅಣ್ಣಾವ್ರ 'ಭಕ್ತ ಕುಂಬಾರ' ಶೂಟಿಂಗ್ ವೇಳೆ ಮನಸ್ತಾಪ ಆಗಿದ್ದು ನಿಜವೇ? ಇಲ್ಲಿದೆ ಸತ್ಯ ಸಂಗತಿ!
ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಇಬ್ಬರನ್ನೂ ಕನ್ನಡದ ಮೇರ ನಟರು ಎಂದು ಎಲ್ಲರೂ ಒಪ್ಪಿಕೊಳ್ಳಬೇಕಿದೆ. ಅವರಿಬ್ಬರು ಬಂದ ಕಾಲಘಟ್ಟ ಬೇರೆಬೇರೆ. ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರಿಗಿಂತ 20 ವರ್ಷ ಚಿಕ್ಕವರು. ಅವರಿಬ್ಬರ ಮಧ್ಯೆ ಜನರೇಶ್‌ಗಳ ಗ್ಯಾಪ್ ಇದೆ, ಅವರಬ್ಬರೂ ಕಾಂಪಿಟೀಟರ್‌ಗಳು ಅಲ್ಲವೇ ಅಲ್ಲ. ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಈ ಇಬ್ಬರ ಕೊಡುಗೆಯೂ ಅಪಾರ. ಕನ್ನಡ ಚಿತ್ರರಂಗದ ಶ್ರೀಮಂತವಾಗಲೂ ಇಬ್ಬರೂ ಶ್ರಮಿಸಿದ್ದಾರೆ.

