ನಟ ಯುವ ರಾಜ್‌ಕುಮಾರ್ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ 'ಆಡಿ ಕ್ಯೂ8' ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಹಾಗೂ ತಾಂತ್ರಿಕ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು (ನ.16): 'ಯುವ' ಹಾಗೂ 'ಎಕ್ಕ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆದಿರುವ ಡಾ. ರಾಜ್‌ಕುಮಾರ್ ಕುಟುಂಬದ ಕುಡಿ, ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ (Yuva Rajkumar) ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ ಐಷಾರಾಮಿ ಕಾರ್‌ ಅನ್ನು ತಮ್ಮ ಗ್ಯಾರೇಜ್‌ಗೆ ಸೇರಿಸಿಕೊಂಡಿದ್ದಾರೆ. ಬರೋಬ್ಬರಿ ₹1.42 ಕೋಟಿಯಿಂದ ₹1.46 ಕೋಟಿ ಆನ್-ರೋಡ್ ಬೆಲೆಯ ಬೂದು ಬಣ್ಣದ 'ಆಡಿ ಕ್ಯೂ8' (Audi Q8) ಕಾರ್ ಇದೀಗ ಯುವ ಮನೆಗೆ ಬಂದಿದೆ.

ಸಾಮಾನ್ಯವಾಗಿ ಹೊಸ ಕಾರನ್ನು ಷೋರೂಮ್‌ಗೆ ಹೋಗಿ ಖರೀದಿಸುವುದು ವಾಡಿಕೆ. ಆದರೆ, ಯುವ ರಾಜ್‌ಕುಮಾರ್ ಬಹಳ ಭಿನ್ನ ಎನಿಸುವಂತೆ ಹೊಸ ಕಾರನ್ನು ತಮ್ಮ ಮನೆಗೇ ಡೆಲಿವರಿ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಯುವ ಅವರ ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಳಿಯೂ 'ಆಡಿ ಕ್ಯೂ7' (Audi Q7) ಕಾರಿತ್ತು. ಇದೀಗ ಯುವ ರಾಜ್‌ಕುಮಾರ್ ಅದರ ಮುಂದಿನ ಆವೃತ್ತಿಯಾದ 'ಆಡಿ ಕ್ಯೂ8' ಕಾರನ್ನು ಖರೀದಿಸುವ ಮೂಲಕ ಆಡಿ ಮೇಲಿನ ಪ್ರೀತಿಯನ್ನು ಮುಂದುವರಿಸಿದ್ದಾರೆ.

ತಂದೆಯ ಸಹಿ, ತಾಯಿಗೆ ಸನ್ಮಾನ, ಕುಟುಂಬದೊಂದಿಗೆ ಮೊದಲ ರೈಡ್!

ಹೊಸ ಕಾರ್ ಮನೆಗೆ ಬಂದ ಬಳಿಕ ವಾಹನದ ದಾಖಲೆ ಪತ್ರಗಳಿಗೆ ತಂದೆ ರಾಘವೇಂದ್ರ ರಾಜ್‌ಕುಮಾರ್ ಸಹಿ ಹಾಕಿದರು. ಬಳಿಕ ಷೋರೂಮ್ ಸಿಬ್ಬಂದಿ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿದರೆ, ಯುವ ರಾಜ್‌ಕುಮಾರ್ ತಮ್ಮ ತಾಯಿ ಮಂಗಳಾ ಅವರಿಗೆ ಸನ್ಮಾನ ಮಾಡಿ ಸಂಭ್ರಮಿಸಿದರು. ಇದಾದ ನಂತರ ಅಣ್ಣ ವಿನಯ್ ರಾಜ್‌ಕುಮಾರ್, ತಂದೆ-ತಾಯಿ ಹಾಗೂ ತಮ್ಮ ಮುದ್ದಿನ ನಾಯಿಯ ಜೊತೆ ಯುವ ಹೊಸ ಕಾರಿನಲ್ಲಿ ಸಂತಸದ ರೈಡ್ ಹೋಗಿದ್ದಾರೆ.

ಬೆಂಗಳೂರಿನಲ್ಲಿ 'ಆಡಿ ಕ್ಯೂ8' ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಆಡಿ ಕ್ಯೂ8 (Audi Q8 Quattro / 55 TFSI) ಆನ್-ರೋಡ್ ಬೆಲೆ ಸುಮಾರು ₹1.42 ಕೋಟಿಯಿಂದ ₹1.46 ಕೋಟಿವರೆಗೆ ಇದೆ. ಇನ್ನು ಹೈ-ಪರ್ಫಾರ್ಮೆನ್ಸ್ ಮಾದರಿಯಾದ 'RS Q8' ಬೆಲೆ ಬೆಂಗಳೂರಿನಲ್ಲಿ ₹2.89 ಕೋಟಿವರೆಗೆ ತಲುಪುತ್ತದೆ.

ಸ್ಟ್ಯಾಂಡರ್ಡ್ ಆಡಿ ಕ್ಯೂ8 (55 TFSI) ಬೆಲೆ ವಿವರ

ಇದರ ಎಕ್ಸ್-ಷೋರೂಮ್ ಬೆಲೆ ಅಂದಾಜು ₹1.13 ಕೋಟಿ – ₹1.15 ಕೋಟಿ ಇದ್ದರೆ, ಆರ್‌ಟಿಒ (RTO) / ನೋಂದಣಿ ಶುಲ್ಕ ಸುಮಾರು ₹22.61 ಲಕ್ಷ – ₹23.08 ಲಕ್ಷ ರೂಪಾಯಿ ಆಗುತ್ತದೆ. ವಿಮೆ (Insurance) ಅಂದಾಜು ₹4.65 ಲಕ್ಷ – ₹6.41 ಲಕ್ಷ ಇದ್ದರೆ, ಇತರೆ ಶುಲ್ಕಗಳು (TCS, ಫಾಸ್ಟ್‌ಟ್ಯಾಗ್ ಇತ್ಯಾದಿ) ಎಂದು ಅಂದಾಜು ₹1.13 ಲಕ್ಷ – ₹2.15 ಲಕ್ಷ ಖರ್ಚಾಗಲಿದೆ. ಇದೆಲ್ಲವೂ ಸೇರಿ ಅಂದಾಜು ಆನ್-ರೋಡ್ ಬೆಲೆ: ₹1.42 ಕೋಟಿ – ₹1.46 ಕೋಟಿ ಇದೆ.

ಆಡಿ ಕ್ಯೂ8 (Standard Q8 vs RS Q8) ತಾಂತ್ರಿಕ ವಿಶೇಷತೆಗಳು

ಆಡಿ ಇಂಡಿಯಾದ ವಿಶಿಷ್ಟ 'ಕ್ವಾಟ್ರೋ' (quattro) ಆಲ್-ವೀಲ್-ಡ್ರೈವ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಈ 5-ಸೀಟರ್ ಐಷಾರಾಮಿ ಎಸ್‌ಯುವಿ-ಕೂಪೆ (SUV-coupe) ಭಾರತದಲ್ಲಿ ಎರಡು ಪ್ರಮುಖ ಮಾದರಿಗಳಲ್ಲಿ ಲಭ್ಯವಿದೆ.

ವೈಶಿಷ್ಟ್ಯ (Specification)ಸ್ಟ್ಯಾಂಡರ್ಡ್ Q8 (55 TFSI)RS Q8 ಪರ್ಫಾರ್ಮೆನ್ಸ್
ಎಂಜಿನ್ ವಿಧ3.0L V6 ಟರ್ಬೋ ಪೆಟ್ರೋಲ್ + ಮೈಲ್ಡ್ ಹೈಬ್ರಿಡ್4.0L ಟ್ವಿನ್-ಟರ್ಬೋ V8 ಪೆಟ್ರೋಲ್
ಎಂಜಿನ್ ಸಾಮರ್ಥ್ಯ2,995 cc3,996 cc
ಗರಿಷ್ಠ ಶಕ್ತಿ (Power)335–340 bhp @ 5,000–6,400 rpm640 bhp
ಗರಿಷ್ಠ ಟಾರ್ಕ್ (Torque)500 Nm @ 1,370–4,500 rpm850 Nm
ಗೇರ್‌ಬಾಕ್ಸ್8-ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್8-ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್
ಡ್ರೈವ್‌ಟ್ರೇನ್quattro ಆಲ್-ವೀಲ್ ಡ್ರೈವ್ (AWD)quattro AWD ಜೊತೆಗೆ ಸ್ಪೋರ್ಟ್ ಡಿಫರೆನ್ಷಿಯಲ್
0–100 ಕಿ.ಮೀ ವೇಗ5.6 ಸೆಕೆಂಡುಗಳು3.6 ಸೆಕೆಂಡುಗಳು
ಗರಿಷ್ಠ ವೇಗ (Top Speed)ಗಂಟೆಗೆ 250 ಕಿ.ಮೀಗಂಟೆಗೆ 305 ಕಿ.ಮೀ 
ಮೈಲೇಜ್ (ARAI)ಸುಮಾರು 9.8 ರಿಂದ 10 ಕಿ.ಮೀ/ಲೀಸುಮಾರು 8 ಕಿ.ಮೀ/ಲೀ

ಗಾತ್ರ, ಸ್ಥಳಾವಕಾಶ ಮತ್ತು 5-ಸ್ಟಾರ್ ಸುರಕ್ಷತಾ ವೈಶಿಷ್ಟ್ಯಗಳು

4,995 ಮಿಮೀ ಉದ್ದ, 1,995 ಮಿಮೀ ಅಗಲ, 1,705 ಮಿಮೀ ಎತ್ತರ ಹಾಗೂ 2,995 ಮಿಮೀ ವೀಲ್‌ಬೇಸ್ ಹೊಂದಿರುವ ಕಾರು ಇರಾಗಿದೆ. 605 ಲೀಟರ್ ಬೂಟ್ ಸ್ಪೇಸ್ ಇದ್ದು, ಹಿಂಬದಿ ಸೀಟುಗಳನ್ನು ಮಡಚಿದರೆ ಇದನ್ನು 1,755 ಲೀಟರ್‌ವರೆಗೆ ವಿಸ್ತರಿಸಬಹುದು. 85 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೀಡಲಾಗಿದೆ. ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದ್ದು, ಕ್ಯಾಬಿನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ 8 ಏರ್‌ಬ್ಯಾಗ್‌ಗಳಿವೆ. ಜೊತೆಗೆ ಪಾರ್ಕ್ ಅಸಿಸ್ಟ್ ಪ್ಲಸ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೌಲಭ್ಯಗಳನ್ನು ಹೊಂದಿದೆ.

Scroll to load tweet…