userpic
user icon
0 Min read

Dr Rajkumar Birthday: ಬಯಸಿದ್ದರೂ ಮಾಡಲಾಗದ ಸಿನಿಮಾಗಳು; ಅಭಿಮಾನಿಗಳಿಗೆ ಇಂದಿಗೂ ಕೊರಗು!

Dr Rajkumar Birthday celebration: Fans and family worship

Synopsis

ಡಾ ರಾಜ್‌ಕುಮಾರ್ ಅವರು ತುಂಬಾ ಆಸೆಪಟ್ಟು ಮಾಡಬೇಕೆಂದಿದ್ದ 3-4 ಚಿತ್ರಗಳನ್ನು ಕೊನೆಗೂ ಅವರು ಮಾಡಲು ಸಾಧ್ಯವೇ ಆಗಲಿಲ್ಲ. ಅದೊಂದು ಘೋರ ದುರಂತವೇ ಸರಿ. ಡಾ ರಾಜ್‌ಕುಮಾರ್ ಅವರು ಗಂಡಗಲಿ...

ಇಂದು, 24 ಏಪ್ರಿಲ್ ರಂದು ಕನ್ನಡದ ವರನಟ, ಕರ್ನಾಟಕ ರತ್ನ ಡಾ ರಾಜ್‌ಕುಮಾರ್ (Dr Rajkumar) ಅವರ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ. ಈ ಸಂಬಂಧ ಡಾ ರಾಜ್‌ಕುಮಾರ್ ಸ್ಮರಣೆ ಮಾಡುತ್ತಿರುವ ಕನ್ನಡದ ವರನಟನ ಅಭಿಮಾನಿಗಳು ಇಂದು ಹಲವು ಕಡೆಗಳಲ್ಲಿ ಅಣ್ಣಾವ್ರ ಫೋಟೋಗೆ ಪೂಜೆ ಮಾಡಿ ತಮ್ಮ ಅಭಿಮಾನ ಹಾಗೂ ಭಕ್ತಿ ಮೆರೆದಿದ್ದಾರೆ. ಡಾ ರಾಜ್‌ಕುಮಾರ್ ಅವರು 'ಬಂಗಾರದ ಮನುಷ್ಯ', 'ಸಂಪತ್ತಿಗೆ ಸವಾಲ್' ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅನೇಕ ಚಿತ್ರಗಳಲ್ಲಿ ಅವರು ದ್ವಿಪಾತ್ರ ಹಾಗೂ ತ್ರಿಪಾತ್ರ ಮಾಡಿ ಸಿನಿಮಾಪ್ರೇಮಿಗಳನ್ನು ರಂಜಿಸಿದ್ದಾರೆ. 

ಅಪ್ಪಟ ಕಲಾವಿದ, ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಮುತ್ತುರಾಜ್ ಅವರು ಕೇವಲ 3ನೇ ಕ್ಲಾಸ್ ಶಾಲಾ ಶಿಕ್ಷಣ ಪಡೆದಿದ್ದರೂ ಗೌರವ ಡಾಕ್ಟರೇಟ್ ಪದವಿ ಪಡೆದು ಡಾ ರಾಜ್‌ಕುಮಾರ್ ಎನ್ನಿಸಿಕೊಂಡರು. ಅವರು ಬಂಗಾರದ ಮನುಷ್ಯ ಚಿತ್ರದಲ್ಲಿ ಮಾಡಿದ ಪಾತ್ರದ ಮೂಲಕ ಹಲವರು ತಮ್ಮ ಬದುಕನ್ನೇ ಬದಲಿಸಿಕೊಂಡರು. ಸಿನಿಮಾ ಪಾತ್ರಗಳಂತೆ ತಮ್ಮ ಬದುಕಿನಲ್ಲಿ ಕೂಡ ಹಲವು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಡಾ ರಾಜ್‌ಕುಮಾರ್ ಅವರು ಕನ್ನಡಿಗರ ಕಣ್ಮಣಿ ಎನಿಸಿಕೊಂಡಿದ್ದರು. ಈ ಕಾರಣಕ್ಕೆ ಅವರು ನಮ್ಮನ್ನಗಲಿ ಇಷ್ಟು ವರ್ಷಗಳ ಬಳಿಕ ಕೂಡ ಅವರನ್ನು ಕನ್ನಡನಾಡು ಸ್ಮರಿಸುತ್ತಿದೆ. 

ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?

ಡಾ ರಾಜ್‌ಕುಮಾರ್ ಅವರು ತುಂಬಾ ಆಸೆಪಟ್ಟು ಮಾಡಬೇಕೆಂದಿದ್ದ 3-4 ಚಿತ್ರಗಳನ್ನು ಕೊನೆಗೂ ಅವರು ಮಾಡಲು ಸಾಧ್ಯವೇ ಆಗಲಿಲ್ಲ. ಅದೊಂದು ಘೋರ ದುರಂತವೇ ಸರಿ. ಡಾ ರಾಜ್‌ಕುಮಾರ್ ಅವರು ಗಂಡಗಲಿ ಕುಮಾರರಾಮ ಚಿತ್ರದಲ್ಲಿ ನಟಿಸಬೇಕಿತ್ತು. ಈ ಚಿತ್ರದ ಮುಹೂರ್ತ ಕೂಡ ಆಗಿತ್ತು. ಆದರೆ, ಈ ಚಿತ್ರ ಕೆಲವು ಕಾರಣಗಳಿಂದ ಆಗಲೇ ಇಲ್ಲ. ಆದರೆ, ಅದೇ ಚಿತ್ರವನ್ನು ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ನಟಿಸುವ ಮೂಲಕ ಸ್ವಲ್ಪ ಪ್ರಮಾಣದಲ್ಲಿ ನೆರವೇರಿಸಿದ್ದಾರೆ ಎನ್ನಬಹುದು. ಅದರೆ, ಗಂಡುಗಲಿ ಕುಮಾರರಾಮ ಬಿಡುಗಡೆ ಆದಾಗ ಡಾ ರಾಜ್‌ಕುಮಾರ್ ಅವರು ನಿಧನರಾಗಿದ್ದರು. ಆದರೆ, ಸಿನಿಮಾ ಶೂಟಿಂಗ್‌ನ ಕೆಲವು ದೃಶ್ಯಗಳನ್ನು ಡಾ ರಾಜ್‌ ಅವರು ವೀಕ್ಷಿಸಿ ಖುಷಿಪಟ್ಟಿದ್ದರು ಎನ್ನಲಾಗಿದೆ. 

ಹಾಗೇ, ಡಾ ರಾಜ್‌ಕುಮಾರ್ ನಟನೆಯ 200ನೇ ಚಿತ್ರವಾಗಿ ಅಮೋಘವರ್ಷ ನೃಪತುಂಗ ಆಗಬೇಕಿತ್ತು. ಆ ಚಿತ್ರಕ್ಕಾಗಿ ಸಿಂಗೀತಂ ಶ್ರೀನಿವಾಸ್‌ ರಾವ್ ನಿರ್ದೇಶನದಲ್ಲಿ ಹಾಡುಗಳ ಧ್ವನಿಮುದ್ರಣ ಕಕೂಡ ಆಗಿತ್ತು. ಆದರೆ, ಆ ಚಿತ್ರದ ಚಿತ್ರೀಕರಣ ನಡೆಯಲೇ ಇಲ್ಲ. ಬದಲಿಗೆ, ದೇವತಾ ಮನುಷ್ಯ ಚಿತ್ರವು ಡಾ ರಾಜ್‌ಕುಮಾರ್ ನಟನೆಯ 200ನೇ ಚಿತ್ರವಾಗಿ ಯಶಸ್ವಿಯಾಯಿತು. ಹಾಗೇ ಅಣ್ಣಾವ್ರ ನಟನೆಯಲ್ಲಿ 'ಭಕ್ತ ಅಂಬರೀಷ' ಚಿತ್ರವು ಸೆಟ್ಟೇರಿತ್ತು. ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕೂಡ ನಡೆದಿತ್ತು. ಆದರೆ ಡಾ ರಾಜ್‌ ಅವರಿಗೆ ಮಂಡಿನೋವು ಜಾಸ್ತಿಯಾದ ಕಾರಣ ಈ ಚಿತ್ರ ಮುಂದುವರಿಯಲಿಲ್ಲ.

 ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ಮೌನಿ ರಾಯ್, ನೀವೂ ಅವರಂತೆ ಆಗ್ಬಹುದು ನೋಡಿ!

ಹೀಗೆ, ಡಾ ರಾಜ್‌ಕುಮಾರ್ ಅವರು ಇಷ್ಟಪಟ್ಟಿದ್ದ ಕೆಲವು ಚಿತ್ರಗಳಲ್ಲಿ ನಟಿಸಲು ಅವರಿಗೆ ಸಾಧ್ಯವೇ ಆಗಲಿಲ್ಲ. ಅಂತಹ ಮೇರು ಕಲಾವಿದರು ಆಗಿದ್ದರೂ ಕೂಡ ಅಂದುಕೊಂಡಿದ್ದ. ಇಷ್ಟಪಟ್ಟಿದ್ದ ಎಲ್ಲವೂ ಅವರ ಜೀವನದಲ್ಲಿ ನಡೆಯಲೇ ಇಲ್ಲ. ಆದರೆ, ಡಾ ರಾಜ್‌ಕುಮಾರ್ ಅವರು ಕನ್ನಡದಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ದಾಖಲೆಯನ್ನು ಮಾಡಿದ್ದಾರೆ. ನಟ ಡಾ ವಿಷ್ಣುವರ್ಧನ್ ಕೂಡ ಅವರ ಸಮೀಪ, ಅಂದರೆ 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮತ್ತೊಬ್ಬ ಮೇರುನಟ ಎನ್ನಿಸಿಕೊಂಡಿದ್ದಾರೆ. ಅಂದಹಾಗೆ, ಅಣ್ಣಾವ್ರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಇಂದು ಕನ್ನಡನಾಡು ಪಾವನವಾಗುತ್ತಿದೆ.

Latest Videos