ಸಾಯಿಪ್ರಕಾಶ್‌ ನಿರ್ದೇಶನದ, ಗೌರಿಶಂಕರ್‌ ಎಸ್‌ಆರ್‌ಜಿ ನಾಯಕನಾಗಿ ನಟಿಸಿರುವ ‘ಕಾಮನ್‌ ಮ್ಯಾನ್‌’ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಕಥೆ ಬರೆದಿರುವ ಡಾ. ಎನ್‌. ನರಸಿಂಹಮೂರ್ತಿ ನಿರ್ಮಾಪಕರಾಗಿದ್ದು, ಪ್ರಮುಖ ಮುಖ್ಯಮಂತ್ರಿ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಯಾವತ್ತೋ ಕಂಡ ಕನಸು ಯಾವಾಗ ಬೇಕಾದರೂ ನನಸಾಗಬಹುದು ಅನ್ನುವುದಕ್ಕೆ ಡಾ.ಎನ್‌. ನರಸಿಂಹಮೂರ್ತಿಯವರೇ ಸಾಕ್ಷಿ. ಸಾಯಿಪ್ರಕಾಶ್‌ ನಿರ್ದೇಶನದ, ಗೌರಿಶಂಕರ್‌ ಎಸ್‌ಆರ್‌ಜಿ ನಾಯಕನಾಗಿ ನಟಿಸಿರುವ ‘ಕಾಮನ್‌ ಮ್ಯಾನ್‌’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನಿರ್ಮಾಣ ಹೊಣೆ ಹೊತ್ತಿದ್ದು ಮಾತ್ರವಲ್ಲದೆ, ಕತೆ ಬರೆದು ಪ್ರಮುಖ ಪಾತ್ರವನ್ನೂ ನಿಭಾಯಿಸಿರುವ ಡಾ.ಎನ್‌. ನರಸಿಂಹಮೂರ್ತಿಯವರ ತಾರುಣ್ಯದ ಕನಸು.

ನಾನು ಸಮುದಾಯ ರಂಗತಂಡದಲ್ಲಿದ್ದೆ. ಅನೇಕ ವರ್ಷ ರಂಗಭೂಮಿಯಲ್ಲಿ ನಟಿಸಿದ್ದೇನೆ. ರಾಜ್ಯ ಪ್ರಶಸ್ತಿಯನ್ನೂ ಗಳಿಸಿದ್ದೇನೆ. ಸಿನಿಮಾರಂಗದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ, ನಿರ್ದೇಶನದ ಆಸೆ ಹೊತ್ತು ಕೆಲ ಸಮಯ ಓಡಾಡಿದ್ದೂ ಇದೆ. ಆಗ ಸಿನಿಮಾ ಮಾಡಲು ಆಗಿರಲಿಲ್ಲ. ಆಮೇಲೆ ಬಿಎಸ್‌ಎನ್‌ಎಲ್‌ ಸಂಸ್ಥೆ ಸೇರಿದೆ. ಬೇರೆ ದಾರಿ ಹಿಡಿದೆ. ಇದೀಗ ಅನಿವಾರ್ಯವಾಗಿ ಸಿನಿಮಾರಂಗಕ್ಕೆ ಮರಳಿದ್ದೇನೆ.

ನಾನೇ ಕತೆ ಬರೆದೆ. ಒಬ್ಬ ಸಾಮಾನ್ಯ ಮನುಷ್ಯ ಸಿಎಂ ಆಗುವ ಕತೆ ಇದು. ಬಹಳ ಅದ್ಭುತವಾಗಿ ಸಿನಿಮಾ ಮೂಡಿಬಂದಿದೆ ಎಂದು ಹೇಳುತ್ತಾರೆ. ವಿಶೇಷವೆಂದರೆ ಅವರು ಈ ಸಿನಿಮಾದಲ್ಲಿ ಪ್ರಮುಖವಾದ ಮುಖ್ಯಮಂತ್ರಿ ಪಾತ್ರ ನಿಭಾಯಿಸಿದ್ದಾರೆ. ಅಶೋಕ್, ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ.

ತ್ರಿಕಾರಂ ಚಿತ್ರದ ಟ್ರೇಲರ್‌ ಬಿಡುಗಡೆ

‘ತ್ರಿಕಾರಂ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಚಿತ್ರವನ್ನು ಜಿ.ಗಣೇಶ್‌ ಮೂರ್ತಿ ನಿರ್ಮಿಸುವ ಜೊತೆಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಲೀಪ್‌ ಕುಮಾರ್‌ ಜೆ.ಆರ್‌. ಬಡ್ತಿ ನಿರ್ದೇಶಿಸಿದ್ದಾರೆ. ಹರ್ಷವರ್ಧನ್‌ ಕೇಸರಿ ನಾಯಕ, ನಿಶ್ಚಿತಶೆಟ್ಟಿ ನಾಯಕಿ. ನಾಗೇಂದ್ರ ಅರಸು, ಬಲ ರಾಜವಾಡಿ, ಮಂಜು ಪಾವಗಡ ಅಭಿನಯಿಸಿದ್ದಾರೆ.

ನಿರ್ದೇಶಕ ದಿಲೀಪ್‌, ‘ನಾಯಕ, ನಾಯಕಿ ಹಾಗೂ ಖಳನಾಯಕ ಈ ಮೂರು ಪಾತ್ರಗಳ ಸುತ್ತಾ ಸಾಗುವ ಕತೆ ಇದು. ಹೀಗಾಗಿ ಚಿತ್ರಕ್ಕೆ ತ್ರಿಕಾರಂ ಎನ್ನುವ ಹೆಸರು ಇಟ್ಟಿದ್ದೇನೆ. ದೈವ ಹಾಗೂ ದುಷ್ಟರ ನಡುವಿನ ಹೋರಾಟವು ಎಂದಿಗೂ ಮುಗಿಯದ ಕರ್ಮ ಹಾಗೂ ಧರ್ಮದ ಲೆಕ್ಕಚಾರ. ಇದು ಹೇಗೆಂಬುದನ್ನು ಸೆಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯಲ್ಲಿ ನಿರೂಪಿಸಲಾಗಿದೆ’ ಎಂದರು.