Asianet Suvarna News Asianet Suvarna News

ದರ್ಶನ್, ಸುದೀಪ್‌ಗಿಂತ ಡಾ ಬ್ರೋಗೆ ಹೆಚ್ಚು ಫಾಲೋವರ್ಸ್! ಇವ್ನೇ ನಿಜವಾದ ಹೀರೋ ಅಂದ್ರು ಫ್ಯಾನ್ಸ್

ಕನ್ನಡದ ಟಾಪ್ ನಟರಾದ ಸುದೀಪ್, ದರ್ಶನ್‌ಗಿಂತಾ ಹೆಚ್ಚಿನ ಇನ್ಸ್ಟಾಗ್ರಾಂ ಫಾಲೋವರ್ಸ್ ಡಾ ಬ್ರೋಗಿದ್ದಾರೆ ಎಂಬುದು ಈಗ ಸೋಷ್ಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

dr bro has more followers in Instagram than Sudeep and Darshan skr
Author
First Published Jan 14, 2024, 6:45 PM IST

ಕನ್ನಡದ ಟಾಪ್ ನಟರುಗಳೆಂದರೆ ಅದರಲ್ಲಿ ಕಿಚ್ಚ ಸುದೀಪ್, ದರ್ಶನ್ ಹೆಸರನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಇವರಿಬ್ಬರೂ ಅದ್ಭುತ ನಟರೆಂಬುದರಲ್ಲೂ ಎರಡು ಮಾತಿಲ್ಲ. ಆದರೆ, ಸಿನಿಮಾ ಕ್ಷೇತ್ರದಿಂದ ದೂರವೇ ಇದ್ದು, ತಮ್ಮ ಟ್ರಾವೆಲಾಗ್‌ಗಳನ್ನು ತಯಾರಿಸಿ ಯೂಟ್ಯೂಬ್ ವಿಡಿಯೋಗಳನ್ನು ಮಾಡಿ ಕನ್ನಡಿಗರಿಗೆ ಜಗತ್ತಿನ ದರ್ಶನ ಮಾಡಿಸುತ್ತಿರುವ ಡಾ ಬ್ರೋ ಜನಪ್ರಿಯತೆ ಈ ಇಬ್ಬರು ನಟರನ್ನೂ ಮೀರಿಸುತ್ತಿರುವುದು ಸಧ್ಯ ಸುದ್ದಿ ಮಾಡುತ್ತಿದೆ.

ಹೌದು, ನಮಸ್ಕಾರ ದೇವ್ರು ಎನ್ನುತ್ತಲೇ ಡಾ ಬ್ರೋ ಕನ್ನಡಿಗರ ಮನವನ್ನು ಎಷ್ಟರ ಮಟ್ಟಿಗೆ ಡಾ ಬ್ರೋ ಗೆದ್ದಿದ್ದಾರೆಂದರೆ, ಅವರ ಇನ್ಸ್ಟಾಗ್ರಾಂ ಬೆಂಬಲಿಗರ ಸಂಖ್ಯೆ 2.2 ದಶಲಕ್ಷ ತಲುಪಿದೆ. ಇದೇ ಸಮಯದಲ್ಲಿ ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಇನ್ಸ್ಟಾ ಬೆಂಬಲಿಗರ ಸಂಖ್ಯೆ 2.1 ಮಿಲಿಯನ್ ಇದ್ದರೆ, ದರ್ಶನ್ ತೂಗುದೀಪ್ ಬೆಂಬಲಿಗರ ಸಂಖ್ಯೆ 2 ದಶಲಕ್ಷವಾಗಿದೆ. ಈ ಸುದ್ದಿ ಹರಿದಾಡುತ್ತಿದ್ದಂತೆಯೇ ಹಲವರು ಡಾ ಬ್ರೋ ನಿಜವಾದ ಹೀರೋ ಎನ್ನುತ್ತಿದ್ದಾರೆ. ಅಲ್ಲದೆ, ಕನ್ನಡ, ಕನ್ನಡಿಗರ ಮೇಲೆ ಪ್ರೀತಿಯಿಂದ ವರ್ತಿಸುವ ಗಗನ್ ಈ ಫಾಲೋವರ್ ಸಂಖ್ಯೆಗೆ ಅರ್ಹರಾಗಿದ್ದಾರೆ ಎಂದೇ ಬಹುತೇಕರ ಅಭಿಪ್ರಾಯವಾಗಿದೆ.

ಮೈ ತುಂಬಾ ರಾಮನ ಹೆಸರಿನ ಹಚ್ಚೆ ಹಾಕಿಸಿಕೊಂಡ ರಾಮ ನಾಮಿ ಸಮುದಾಯದೊಂದಿಗೆ ಡಾ ಬ್ರೋ

ಬೇಡದ ವಿಡಿಯೋಗಳನ್ನು ಮಾಡುವ ವ್ಲಾಗರ್ಸ್‌ಗಳು ಡಾ ಬ್ರೋ ನೋಡಿ ಕಲಿಯಬೇಕಾದುದು ಸಾಕಷ್ಟಿದೆ, ಯಾವುದೇ ಮೇಕಪ್ ಇಲ್ಲದೆ, ಬಿಲ್ಡಪ್ ಇಲ್ಲದೆ ಸಾಕಷ್ಟು ದೇಶಗಳಿಗೆ ಹೋಗಿ ಅಲ್ಲಿನ ವಿಶೇಷತೆಯನ್ನು ಅಚ್ಚಕನ್ನಡದಲ್ಲಿಯೇ ಕನ್ನಡಿಗರಿಗೆ ತೋರಿಸುವ ಡಾ ಬ್ರೋ ಈ ಬೆಂಬಲಕ್ಕೆ ಅರ್ಹನಾಗಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಮತ್ತೆ ಕೆಲವರು ಈ ವಿಷಯ ಇಟ್ಟುಕೊಂಡು ಹಳೆಯ ವಿಷಯಗಳನ್ನು ಕೆಣಕಿ, ನಿಮ್ಮಜ್ಜಿಗೆ ಬ್ರೋ ಗೊತ್ತಾ ಎಂದೋರಿಗೆ ಈ ಸುದ್ದಿ ತಲುಪಿಸಿ ಎನ್ನುತ್ತಿದ್ದಾರೆ. ಒಟ್ನಲ್ಲಿ ಉತ್ತಮ ಕೆಲಸ ಮಾಡೋ ಕನ್ನಡಿಗರನ್ನು, ತಮ್ಮನ್ನ ದೇವ್ರು ಅಂದೋರನ್ನ ಕನ್ನಡಿಗರು ಯಾವತ್ತೂ ಕೈ ಬಿಡಲ್ಲ ಎನ್ನೋದಂತೂ ನಿಜ.
 

Follow Us:
Download App:
  • android
  • ios