Asianet Suvarna News Asianet Suvarna News

ಮೈ ತುಂಬಾ ರಾಮನ ಹೆಸರಿನ ಹಚ್ಚೆ ಹಾಕಿಸಿಕೊಂಡ ರಾಮ ನಾಮಿ ಸಮುದಾಯದೊಂದಿಗೆ ಡಾ ಬ್ರೋ

ಈ ಸಮುದಾಯದ ಜನ ಹುಟ್ಟಿನಿಂದ ಸಾವಿನವರೆಗೂ ರಾಮ ನಾಮ ಧ್ಯಾನದಲ್ಲೇ ಕಳೆಯುತ್ತಾರೆ, ಮೈ ತುಂಬಾ ರಾಮ ನಾಮವನ್ನೇ ಟ್ಯಾಟೂ ಹಾಕಿಸಿಕೊಂಡಿರುತ್ತಾರೆ. ಅವರ ಸಮಾಧಿ ಮೇಲೆ ಕೂಡಾ ರಾಮನ ನಾಮವೇ ತುಂಬಿರುತ್ತದೆ. 

Dr Bro with Ramnami Community of Chhattisgarh skr
Author
First Published Jan 14, 2024, 12:41 PM IST

ಈ ಸಮುದಾಯಕ್ಕೆ ಜಾತಿ ಕಾರಣದಿಂದ ದೇವಾಲಯದ ಒಳಕ್ಕೆ ಬಿಟ್ಟುಕೊಡಲಿಲ್ಲ. ಈಗ ಇವರು ಕಟ್ಟಿಕೊಂಡಿರುವ ಈ ದೇವಾಲಯದಲ್ಲಿ ಗೋಡೆ, ಬಾಗಿಲಿನ ಹಂಗೇ ಇಲ್ಲ. ಯಾರು ಬೇಕಿದ್ದರೂ ಬಂದು ಪ್ರಾರ್ಥಿಸಬಹುದು ಎಂದು ಡಾ. ಬ್ರೋ ತಮ್ಮ ಹೊಸ ವಿಡಿಯೋದಲ್ಲಿ ಛತ್ತೀಸ್‌ಗಢದ ರಾಮನಾಮಿ ಸಮುದಾಯದ ಬಗ್ಗೆ ಹೇಳುತ್ತಿದ್ದರೆ, ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮತ್ತಷ್ಟು ಗರಿಗೆದರುತ್ತದೆ. 

ಈ ಸಮುದಾಯದ ಜನ ಹುಟ್ಟಿನಿಂದ ಸಾವಿನವರೆಗೂ ರಾಮ ನಾಮ ಧ್ಯಾನದಲ್ಲೇ ಕಳೆಯುತ್ತಾರೆ, ಮೈ ತುಂಬಾ ರಾಮ ನಾಮವನ್ನೇ ಟ್ಯಾಟೂ ಹಾಕಿಸಿಕೊಂಡಿರುತ್ತಾರೆ,ಧರಿಸುವ ಬಟ್ಟೆಯಲ್ಲೂ ರಾಮನ ಹೆಸರು ತುಂಬಿರುತ್ತದೆ. ಅಷ್ಟೇ ಅಲ್ಲ, ಅವರ ಸಮಾಧಿ ಮೇಲೆ ಕೂಡಾ ರಾಮನ ನಾಮವೇ ತುಂಬಿರುತ್ತದೆ. ಅರೆ, ಎಷ್ಟೊಂದು ವಿಶಿಷ್ಠವಾಗಿದೆಯಲ್ಲವೇ? ಯಾವುದೀ ಸಮುದಾಯ, ಇದರ ವಿಶೇಷತೆಗಳೇನು ನೋಡೋಣ. 

ಛತ್ತೀಸ್‌ಗಢದ ರಾಮನಾಮಿ ಸಮಾಜವು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಒಂದು ವಿಶಿಷ್ಟವಾದ ಮತ್ತು ಶಾಂತಿಯುತ ಮಾರ್ಗವನ್ನು ಕಂಡುಕೊಂಡಿದೆ. 'ನಿರ್ಗುಣ್ ರಾಮ್' ಎಂಬ ಹೆಸರಿನೊಂದಿಗೆ ತಮ್ಮ ಮೇಲೆ ವಿಧಿಸಲಾದ ನಿರ್ಬಂಧಗಳ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಇವರು ತೋರುತ್ತಾರೆ. ಬಹುಮಟ್ಟಿಗೆ ಅನಕ್ಷರಸ್ಥರಾಗಿದ್ದ ಸಮುದಾಯ ಹಟ ಹಿಡಿದು ಓದಲು, ಬರೆಯಲು ಕಲಿತುಕೊಂಡಿತು. ಈಗವರು ರಾಮಚರಿತಮಾನಸವನ್ನು ಸಲೀಸಾಗಿ ಓದುತ್ತಾರೆ. ಸಮುದಾಯದ ಸದಸ್ಯರು ತಮ್ಮ ಸಂಪೂರ್ಣ ದೇಹದ ತುಂಬಾ ರಾಮ ರಾಮ ಎಂಬ ಹಚ್ಚೆ ಹಾಕಿಸಿಕೊಳ್ಳುವುದಷ್ಟೇ ಅಲ್ಲ, ತಮ್ಮದೇ ಆದ ಸಂಗೀತ, ಬಟ್ಟೆ, ಸಂಪ್ರದಾಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.

ನಟನೆಗೆ ಹೋದರೆ ಶೂಟ್ ಮಾಡುತ್ತೇನೆ ಎಂದಿದ್ದ ತಂದೆ! ಇಂದೀಕೆ ಬಾಲಿವುಡ್‌ನ ಖ್ಯಾತ ನಟಿ

ಛತ್ತೀಸ್‌ಗಢದ ಹತ್ತಾರು ಹಳ್ಳಿಗಳಲ್ಲಿ ಹರಡಿರುವ ಈ ನಿರ್ಗುಣ ರಾಮ  ಚಳುವಳಿಯು ಹದಿನೈದನೆಯ ಶತಮಾನದ ಭಕ್ತಿ ಸಂಪ್ರದಾಯಗಳಲ್ಲಿ ತನ್ನ ಬೇರುಗಳನ್ನು ಹೊಂದಿದೆ ಎನ್ನಲಾಗುತ್ತದೆ. ಛತ್ತೀಸ್‌ಗಢದ ನಾಲ್ಕು ಜಿಲ್ಲೆಗಳಿಂದ ಹತ್ತಾರು ಹಳ್ಳಿಗಳ ಸದಸ್ಯರೊಂದಿಗೆ ಸಮುದಾಯವು ಎರಡು ಲಕ್ಷ ಜನಸಂಖ್ಯೆಯಷ್ಟು ಬೆಳೆದಿದೆ. ವಿಶೇಷವಾದ ಸ್ಥಳೀಯ ಶಾಯಿಯನ್ನು ಬಳಸಿ ನಿರ್ಗುಣ್ ರಾಮ್ ಎಂಬ ಹೆಸರಿನಿಂದ ತಮ್ಮ ಸಂಪೂರ್ಣ ದೇಹ ಮತ್ತು ಬಟ್ಟೆಗಳನ್ನು ಮುಚ್ಚಿಕೊಳ್ಳಲು ಅವರು ಜನಪ್ರಿಯರಾಗಿದ್ದಾರೆ. ಸ್ಥಳೀಯ ಭಾಷೆಯಲ್ಲಿ 'ಗೋಡ್ನಾ' ಎಂದು ಕರೆಯಲ್ಪಡುವ ಹಚ್ಚೆಗಳ ವಿನ್ಯಾಸಗಳು ರಾಮಚರಿತಮಾನಗಳು ಮತ್ತು ನೈಸರ್ಗಿಕ ಪರಿಸರದಿಂದ ಪ್ರೇರಿತವಾಗಿವೆ. ಅವರು ಸರಳ ಜೀವನಶೈಲಿಯನ್ನು ಉತ್ತೇಜಿಸುತ್ತಾರೆ, ಸಾಂಪ್ರದಾಯಿಕ ಪದ್ಧತಿಗಳು ಮತ್ತು ಆಚರಣೆಗಳನ್ನು ವಿರೋಧಿಸುತ್ತಾರೆ. 

ಶರಶಯ್ಯೆಯ ಮೇಲೆ ಸಾವಿಗಾಗಿ ಸಂಕ್ರಾಂತಿವರೆಗೆ ಕಾದ ಭೀಷ್ಮ; 58 ದಿನ ಕಾದಿದ್ದು ಏಕಾಗಿ?

ಬಹುಮಟ್ಟಿಗೆ ಅರಾಜಕೀಯವಾಗಿ ಉಳಿದುಕೊಂಡಿರುವ ಮತ್ತು ಔಪಚಾರಿಕ ಶ್ರೇಣೀಕೃತ ರಚನೆಗಳಿಲ್ಲದ ಚಳುವಳಿಯು ಈಗ ಹೊಸ ಯುಗಕ್ಕೆ ಸಾಕ್ಷಿಯಾಗಿದೆ, ಪ್ರಸ್ತುತ ಪೀಳಿಗೆಯ ರಾಮನಾಮಿಗಳು ಹಳೆಯ ಸಂಪ್ರದಾಯಗಳು ಮತ್ತು ಆಧುನಿಕ ಜೀವನಶೈಲಿಯ ನಡುವೆ ತಮ್ಮ ಮಾರ್ಗವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

 

Follow Us:
Download App:
  • android
  • ios