ಈ ಕೋಟಿ ಮಧ್ಯಮ ವರ್ಗದ ಕುಟುಂಬದ ಯಾವ ಹುಡುಗನಲ್ಲೂ ಸಿಗಬಹುದು. ಇದು ಎಲ್ಲರಿಗೂ ಕನೆಕ್ಟ್‌ ಆಗುವ ಸಿನಿಮಾ. ಒಂದು ತೀವ್ರ ಅನುಭವವನ್ನು ಕಟ್ಟಿಕೊಡುವ ಸಿನಿಮಾ.

‘ನಾನು ಸದಾ ಹೊಸ ಕತೆ, ಹೊಸ ಪಾತ್ರಕ್ಕಾಗಿ ಹುಡುಕುತ್ತಾ ಇರುತ್ತೇನೆ. ಅಂಥಾ ಹೊತ್ತಲ್ಲಿ ಪರಮ್‌ ಹೇಳಿದ ಕೋಟಿಯ ಕತೆ ನನ್ನನ್ನು ತೀವ್ರವಾಗಿ ಕಾಡಿತು. ಕೋಟಿ ನನ್ನ ಪಾತ್ರ ಮಾತ್ರವೇ ಅಲ್ಲ. ಈ ಕೋಟಿ ಮಧ್ಯಮ ವರ್ಗದ ಕುಟುಂಬದ ಯಾವ ಹುಡುಗನಲ್ಲೂ ಸಿಗಬಹುದು. ಇದು ಎಲ್ಲರಿಗೂ ಕನೆಕ್ಟ್‌ ಆಗುವ ಸಿನಿಮಾ. ಒಂದು ತೀವ್ರ ಅನುಭವವನ್ನು ಕಟ್ಟಿಕೊಡುವ ಸಿನಿಮಾ.’ಡಾಲಿ ಧನಂಜಯ್‌ ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು. 

‘ಕೋಟಿ’ ಚಿತ್ರದ ಮೇಲೆ ಅವರು ಇಟ್ಟಿರು ನಂಬಿಕೆಯನ್ನು ಅವರ ಮಾತು ಧ್ವನಿಸುತ್ತಿತ್ತು. ಜಿಯೋ ಸ್ಟುಡಿಯೋಸ್‌ ಕನ್ನಡದ ಮುಖ್ಯಸ್ಥರಾದ ಪರಮ್‌ ಕಂಡ ಕನಸು ‘ಕೋಟಿ’ ಸಿನಿಮಾದ ಟ್ರೇಲರ್‌ ಸರೆಗಮ ಕನ್ನಡ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಬಹಳ ಮೆಚ್ಚುಗೆ ಗಳಿಸಿದೆ. ಸಿನಿಮಾ ಜೂ.14ರಂದು ಬಿಡುಗಡೆ ಆಗಲಿದೆ. ನಿರ್ದೇಶಕ ಪರಮ್‌, ‘ಈ ಸಿನಿಮಾ ನಿರ್ಮಾಣ ಮಾಡಿರುವ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ಧನ್ಯವಾದ. ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್‌ ಸಿನಿಮಾ. 

ರಿಷಬ್‌ ಶೆಟ್ಟಿ ಕಾಲಿಗೆ ನಮಸ್ಕರಿಸಿದ ವಸಿಷ್ಠ ಸಿಂಹ: ಧ್ವನಿಯನ್ನು ಮಿಮಿಕ್ರಿ ಮಾಡ್ತಿದ್ದೆ ಎಂದ ಕಾಂತಾರ ನಟ

ಎಲ್ಲರೂ ಈ ಸಿನಿಮಾ ನೋಡಿ ಸಪೋರ್ಟ್ ಮಾಡಿ ಅಥವಾ ರಚನಾತ್ಮಕವಾಗಿ ಟೀಕೆಯನ್ನಾದರೂ ಮಾಡಿ. ಅದು ನನ್ನ ಮಟ್ಟಿಗೆ, ಜಿಯೋ ಸ್ಟುಡಿಯೋಸ್‌ ಮಟ್ಟಿಗೆ ದೊಡ್ಡ ಶಕ್ತಿಯಾಗಲಿದೆ. ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ತುಂಬಲಿದೆ’ ಎಂದು ಹೇಳಿದರು. ನಾಯಕ ನಟಿ ಮೋಕ್ಷ, ಖಳ ಪಾತ್ರಧಾರಿ ರಮೇಶ್ ಇಂದಿರಾ, ತಾರಾ ಇದ್ದರು. ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ಧನಂಜಯ್‌ ಹಾಗೂ ರಮೇಶ್‌ ಇಂದಿರಾ ನಟನೆಗೆ, ಛಾಯಾಗ್ರಹಣಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

ಧನಂಜಯ ಅವರ ಸಾಮಾನ್ಯ ವ್ಯಕ್ತಿಯ ಗೆಟಪ್, ರಮೇಶ್ ಇಂದಿರಾ ಅವರ ನಟೋರಿಯಸ್ ವಿಲನ್ ಪಾತ್ರ, ತಾರಾ ಅವರ ತಾಯಿಯ ಪಾತ್ರ, ಕ್ವಾಲಿಟಿ ವಿಶುವಲ್ಸ್, ಮತ್ತೆ ಮತ್ತೆ ಕೇಳಬೇಕೆನಿಸುವ ಹಿನ್ನೆಲೆ ಸಂಗೀತ, ಹುಲಿವೇಷ - ಇವೆಲ್ಲವು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. 

ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ: ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್. ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.