ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಮುರಿದು ಬಿದ್ದಿರೋದು ಏನಕ್ಕೆ ಹೇಳಿ.. ಕಾರಣ ಸುಮಾರಿರಬಹುದು, ಆದರೆ ಮುಖ್ಯ ಕಾರಣ ರಶ್ಮಿಕಾಗೆ ಈಗಲೇ ಮದ್ವೆ ಆಗೋದು ಇಷ್ಟ ಇರಲಿಲ್ಲ.

ಈಗಷ್ಟೇ ಮೇನ್ ಸ್ಟ್ರೀಮ್ ಗೆ ಬರ್ತಿರೋ ಅವರಿಗೆ ಮದ್ವೆ ಆದ್ರೆ ಅವಕಾಶ ವಂಚಿತೆ ಆಗ್ತೀನಿ ಅನ್ನೋ ಭಯ ಕಾಡಿದೆ. ಅದಕ್ಕೋಸ್ಕರ ಸದ್ಯ ಮದುವೆ ಬೇಡ ಅಂತ ಹಠ ಮಾಡಿದ್ದಾರೆ. ಈಗ ಟಾಲಿವುಡ್, ಬಾಲಿವುಡ್ ಅಂತ ಬ್ಯುಸಿಯಾಗಿದ್ದಾರೆ. ಐಟಿ ರೈಡ್ ಆಗುವಷ್ಟು ದುಡ್ಡು ಮಾಡಿದ್ದಾರೆ.

ಶ್ರುತಿ ಹರಿಹರನ್ ಅನ್ನೋ ನಟಿ ಹಿಂದೆಯೇ ಮದುವೆ ಆಗಿದ್ರು. ಆದರೆ ಆ ವಿಷಯವನ್ನು ಬಚ್ಚಿಟ್ಟು ತಾನು ಅವಿವಾಹಿತೆ ಅನ್ನುತ್ತಲೇ ಚಿತ್ರಗಳಲ್ಲಿ ಬ್ಯುಸಿಯಾಗಿದ್ರು. ಯಾವಾಗ ಅವರ ಮದ್ವೆ ವಿಷ್ಯ ಲೀಕ್ ಆಯ್ತೋ ಮೀಡಿಯಾದ ವಿರುದ್ಧ ತಿರುಗಿ ಬಿದ್ರು. ಅವರು ಪ್ರಗ್ನೆಂಟ್ ಆದಾಗ ಸತ್ಯ ಬಹಿರಂಗ ಪಡಿಸಲೇಬೇಕಾಯ್ತು.

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ! ...

ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ನಟಿ ಶ್ವೇತಾ ಶ್ರೀವಾತ್ಸವ್ ಗೂ ಹಿಂದೆಯೇ ಮದುವೆ ಆಗಿತ್ತು. ಆದರೆ ಈ ವಿಚಾರ ಅವರ ಆಪ್ತರಿಗಷ್ಟೇ ಗೊತ್ತಿತ್ತು. ವಿವಾಹದ ಸ್ಟೇಟಸ್ ಅನ್ನು ನಟಿ ಬಿಟ್ಟುಕೊಟ್ಟಿದ್ದು ತಾನು ಪ್ರೆಗ್ನೆಂಟ್ ಆದಾಗಲೇ. ಖುಷಿ ರವಿ ಎಂಬ ದಿಯಾ ಚಿತ್ರದ ನಟಿ ವಿವಾಹಿತೆ, ಜೊತೆಗೆ ಮಗುವೂ ಇದೆ ಅನ್ನೋದು ರಿವೀಲ್ ಆಗಿದ್ದು ತೀರಾ ಇತ್ತೀಚೆಗೆ. 

ಮೊನ್ನೆ ಮೊನ್ನೆ ಮಿಲನಾ ನಾಗರಾಜ್ ಮೀಡಿಯಾವೊಂದರಲ್ಲಿ ಈಗ ನಾನು ಕೆರಿಯರ್‌ನ ಪೀಕ್‌ನಲ್ಲಿದ್ದೀನಿ. ಮದ್ವೆಯಾದ ಮೇಲೆ ನನ್ನ ಕೆರಿಯರ್ ನಿಜಕ್ಕೂ ಮುಂದುವರಿಯುತ್ತಾ, ನಾನು ಈಗಿನಂತೆ ಸಿನಿಮಾಗಳಲ್ಲಿ ನಟಿಸೋದಕ್ಕಾಗುತ್ತಾ ಅಂತ ಆತಂಕ ತೋಡಿಕೊಂಡಿದ್ದಾರೆ.

ಸ್ಪೋರ್ಟ್ಸ್ ಬ್ರಾ, ಟೈಟ್ಸ್‌ನಲ್ಲಿ ಪ್ರೆಗ್ನೆಂಟ್ ಕರೀನಾ ಯೋಗ..! ...

ಈಗ ಶ್ರದ್ಧಾ ಶ್ರೀನಾಥ್ ಸರದಿ. ಕಳೆದ ಕೆಲವು ದಿನಗಳಿಂದ ಶ್ರದ್ಧಾ ಶ್ರೀನಾಥ್ ಮದ್ವೆಯಾದ್ರೆ ನಟಿಯರಿಗೆ ಅವಕಾಶಗಳೇ ಸಿಗಲ್ಲ ಅನ್ನೋ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚಿಸಿದ್ದಾರೆ. ಮದ್ವೆ ಆದ ನಟಿಯರನ್ನ ಯಾಕೆ ನಮ್ಮ ಸಿನಿಮಾ ರಂಗ ಕಡೆಗಣಿಸುತ್ತೆ, ಹೀರೋಗಳಿಗೆ ಮದ್ವೆ ಆದ್ಮೇಲೂ ಹಿಂದಿನಂತೇ ಅವಕಾಶಗಳಿರುತ್ತೆ, ಆದ್ರೆ ಹೀರೋಯಿನ್‌ಗಳು ಮಾತ್ರ ಯಾಕೆ ಅವಕಾಶ ವಂಚಿತರಾಗ್ತಿದ್ದಾರೆ ಅಂತ ನೇರವಾಗಿ ಕೇಳಿದ್ದರು. 

ಇದೀಗ ವರುಣ್ ಧವನ್ ಮದುವೆ ಸಂಭ್ರಮ. ಎಲ್ಲ ತಾರೆಯರೂ ಈ ಜೋಡಿಗೆ ವಿಶ್ ಮಾಡಿದ್ರೆ ಶ್ರದ್ಧಾ ಶ್ರೀನಾಥ್ ಮಾತ್ರ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. 'ಇನ್ನೊಬ್ಬ ನಟನ ಸಿನಿಮಾ ಲೈಫ್ ಮುಗಿದಿದೆ. ಮತ್ತೆ ಈ ನಟನನ್ನು ಸ್ಕ್ರೀನ್ ಮೇಲೆ ನೋಡೋಕಾಗಲ್ಲ. ವರುಣ್ ಬೇರೆ ಹೀರೋಯಿನ್ ಜೊತೆಗೆ ಸ್ಕ್ರೀನ್ ಹಂಚಿಕೊಂಡರೆ ಅವರ ಪತ್ನಿ, ಮಾವನ ಮನೆಯವರಿಗೆ ಬೇಸರ ಆಗಲ್ವೇ... ಹೀಗಾಗಿ ಅವರು ಮುಂದೆ ನಟಿಸಿದ್ರೂ ಬಹುಶಃ ಪುರುಷ ಪ್ರದಾನ ಚಿತ್ರಗಳಲ್ಲಿ ನಟಿಸಬಹುದೋ ಏನೋ.. ಮತ್ತೆ, ಅವರು ತಮ್ಮ ವೃತ್ತಿ ಬದುಕನ್ನೂ ವಯುಕ್ತಿಕ ಲೈಫ್‌ಅನ್ನೂ ಹೇಗೆ ನಿಭಾಯಿಸ್ತಾರೆ, ತುಂಬಾ ಕಷ್ಟ, ನಾವು ಅವ್ರನ್ನು ಮಿಸ್ ಮಾಡ್ಕೊಳ್ತೀವಿ ಅನಿಸುತ್ತೆ. ಥ್ಯಾಂಕ್ಯೂ' ಅಂತ ವ್ಯಂಗ್ಯವಾಗಿ ಚಾಟಿ ಬೀಸಿದ್ದಾರೆ. ಇದು ಒಬ್ಬ ನಟಿಯನ್ನು ಸಿನಿಮಾರಂಗ ಟ್ರೀಟ್ ಮಾಡೋ ರೀತಿ. ಅದನ್ನೇ ನಟನಿಗೆ ಆರೋಪಿಸಿ ಲೇವಡಿ ಮಾಡಿದ್ದಾರೆ. 

ಕನ್ನಡತಿಗೆ 1 ವರ್ಷ: ರಂಜನಿ ಕೊಡ್ತಾರೆ ಸರ್ಪೈಸ್, ಏನದು..? ...

ಬಹುಶಃ ಶ್ರದ್ಧಾ ಅವರ ವೈಯುಕ್ತಿಕ ಅನುಭವಗಳೇ ಇಂಥಾ ಮಾತಾಡಿಸಿರಬಹುದು ಅನ್ನಲಾಗುತ್ತೆ. ಶ್ರದ್ಧಾ ಶ್ರೀನಾಥ್‌ಗೆ ಮದುವೆ ಆಗಿದೆ ಅನ್ನೋ ಸುದ್ದಿ ಹಿಂದಿನಿಂದಲೂ ಕೇಳಿ ಬರ್ತಾ ಇದೆ. ಸಿನಿಮಾ ಕಾರಣಕ್ಕೆ ಅವರು ತಮ್ಮ ವೈವಾಹಿಕ ಬದುಕನ್ನು ಮುಚ್ಚಿಟ್ಟಿದ್ದಾರೆ ಎಂಬ ಗುಸುಗುಸು ಇದೆ. ಮಾರ, ವಿಕ್ರಾಂತ್ ರೋಣದಂಥಾ ಬಿಗ್‌ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶ್ರದ್ಧಾ ಸದ್ಯಕ್ಕಂತೂ ಮದ್ವೆ ವಿಚಾರವನ್ನು ರಿವೀಲ್ ಮಾಡೋ ಹಾಗೆ ಕಾಣ್ತಿಲ್ಲ. ಬಹುಶಃ ಶುಭ ಸುದ್ದಿ ಬಂದಾಗ ಹೇಳ್ಬಹುದೇನೋ.. ಕಾದು ನೋಡೋಣ.