ಕನ್ನಡದ ಜನಪ್ರಿಯ ಧಾರವಾಹಿ ಕನ್ನಡತಿಗೆ ಜನವರಿ 27ಕ್ಕೆ 1 ವರ್ಷ ಪೂರ್ತಿಯಾಗಲಿದೆ. ಕನ್ನಡಿಗರ ಮನ ಗೆದ್ದಿರೋ ಧಾರವಾಹಿ ಯಶಸ್ವಿಯಾಗಿ 1 ವರ್ಷವನ್ನು ಪೂರೈಸಲಿದೆ.

ರಂಜನಿ ರಾಘವನ್, ಸಾರಾ ಅಣ್ಣಯ್ಯ, ರಾಮೋಲಾ, ಕಿರಣ್ ರಾಜ್, ಚಿತ್ಕಲಾ ಬಿರದಾರ್ ಸೇರಿ ಪ್ರಮುಖ ಕಲಾವಿದರು ನಟಿಸಿರೋ ಸೀರಿಯಲ್ ಯಶಸ್ವಿಯಾಗಿ ಮುಂದುವರಿಯುತ್ತಿದೆ.

ಮಾಡರ್ನ್‌ ಲುಕ್‌ನಲ್ಲಿ ರಂಜನಿ: ಸೌಂದರ್ಯವೆಲ್ಲ ನಿಮ್ಮಲಿದೆ ಎಂದ ಫ್ಯಾನ್ಸ್

ಸೀರಿಯಲ್ ಒಂದು ವರ್ಷ ಪೂರೈಸ್ತಿರೋ ಹಿನ್ನೆಲೆಯಲ್ಲಿ ಫ್ಯಾನ್ಸ್‌ಗೆ ಸರ್ಪೈಸ್‌ ಕೊಡೋಕೆ ತಯಾರಾಗಿದ್ದಾರೆ ಭುವಿ. ಏನು ಆ ಸರ್ಪೈಸ್..? ಈ ಬಗ್ಗೆ ಫ್ಯಾನ್ಸ್‌ಗೆ ಪ್ರೋಮೋ ಮೂಲಕ ಉತ್ತರ ಕೊಟ್ಟಿದ್ದಾರೆ.

ಇದೇ ತಿಂಗಳೂ 27ಕ್ಕೆ ಕನ್ನಡತಿ ಧಾರವಾಹಿ ಒಂದು ವರ್ಷ ಪೂರೈಸುತ್ತದೆ. ಆ ಕಾರಣಕ್ಕೆ ಕನ್ನಡತಿ ಧಾರವಾಹಿಯಲ್ಲಿ ನಾವು ನೋಡಿರೋ ಸುಮಧುರ ಕ್ಷಣಗಳನ್ನು ಒಟ್ಟುಗೂಡಿಸಿ ಒಂದು ವಿಡಿಯೋ ಮಾಡಿದ್ದೀನಿ. ಆ ವಿಡಿಯೋನ 27ಕ್ಕೆ ಬೆಳಗ್ಗೆ ಬೆಳಗ್ಗೆ 9.30ಕ್ಕೆ ಅಪ್ಲೋಡ್ ಮಾಡ್ತೀನಿ. ಅದರ ಚಿಕ್ಕ ಪ್ರೋಮೋ ಇದು ಎಂದು ವಿಡಿಯೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.