ನಟ ಡಾಲಿ ಧನಂಜಯ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಭಾವುಕರಾದರು. ಇದೇ ವೇಳೆ ಅವರ ಪತ್ನಿ ಧನ್ಯತಾ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ..

ಬೆಂಗಳೂರು (ಫೆ.16): ಮದುವೆ ನಾವಂದುಕಂಡಿದ್ದಕ್ಕಿಂತ ಚನ್ನಾಗಿ ಆಗಿದೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ನನ್ನ ಕುಟುಂಬ ಇದ್ದ ಹಾಗೆ. ನನ್ನ ಪ್ರಾರಂಭದ ದಿನಗಳಿಂದಲೂ ನನ್ನ ಕೈ ಹಿಡಿದಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇದೆ. ನಾನು ಕೂಡ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಾವು ಎಲ್ಲವನ್ನ ಗೌರವಿಸಬೇಕು ಎಂದು ನಟ ಡಾಲಿ ಧನಂಜಯ ಹೇಳಿದರು.

ಕಳೆದೆರಡು ದಿನಗಳಿಂದ ನಡೆಯುತ್ತಿರುವ ಮದುವೆಯ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮದುವೆ ಹೇಗೆ ನಡೆಯಬೇಕು ಎಂದುಕೊಂಡಿದ್ದೆವೋ ಅದಕ್ಕಿಂತ ಚೆನ್ನಾಗಿ ನಡೆದಿದೆ. ಇಡೀ ಕನ್ನಡ ಚಿತ್ರರಂಗವೇ ನನ್ನ ಕುಟುಂಬ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಆಶೀರ್ವಾದ ನನ್ನ ಮೇಲಿದೆ. ನನ್ನ ಮದುವೆ ಅದ್ಧೂರಿಯಾಗಿ, ಸುಸೂತ್ರವಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಇನ್ನು ನನಗೆ ಆಸ್ತಿಕತೆ, ನಾಸ್ತಿಕತೆ ಎರಡರ ಬಗ್ಗೆಯೂ ನಂಬಿಕೆ ಇದೆ. ನನ್ನ ಬಾಲ್ಯದ ದಿನಗಳಿಂದಲೂ ನಮ್ಮೂರ ಜಾತ್ರೆಯಲ್ಲಿ ನಾನು ಭಾಗಿಯಾಗಿದ್ದೇನೆ. ಇದೆಲ್ಲವೂ ನಮ್ಮೂರಲ್ಲಿ ನಡೆಯುತ್ತಿರುವ ಜಾತ್ರೆಯ ಬಗ್ಗೆ ತಿಳಿಸುತ್ತದೆ. ನಮಗೆ ವಿಜ್ಞಾನವು ಬೇಕು, ನಂಬಿಕೆಯು ಬೇಕು. ನನ್ನ ಹೆಂಡತಿ ವಿಜ್ಞಾನದಲ್ಲಿದ್ದಾರೆ. ನಮ್ಮ ತಾಯಿ ಆಸ್ಪತ್ರೆ ಒಳ ಹೋಗುವ ಮುನ್ನ ದೇವರಿಗೆ ಕೈ ಮುಗಿಯುತ್ತಾರೆ. ನನ್ನ ತಾಯಿಯ ನಂಬಿಕೆಯನ್ನು ನಾನು ಗೌರವಿಸಬೇಕು. ಮದುವೆ ಬಳಿಕ ಸ್ವಲ್ಪ ವಿರಾಮ ಇದ್ದೆ ಇರುತ್ತದೆ. ನಂತರ ಅವರು ಅವರ ವೃತ್ತಿ ಮಾಡುತ್ತಾರೆ. ನಾನು ಚಿತ್ರರಂಗದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಶ್ರೀಮಂತರಂತೆ ಮದುವೆಯಾದ ಡಾಲಿ ಧನಂಜಯ; ಟೀಕೆ ಮಾಡಿದವ್ರಿಗೆ ವಾಸ್ತವದ ಪಾಠ ಮಾಡಿದ ವೀರಕಪುತ್ರ ಶ್ರೀನಿವಾಸ್

ಮುದವೆ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಡಾಲಿ ಧನಂಜಯ ಅವರ ಹೆಂಡ್ತಿ ಧನ್ಯತಾ ಅವರು, ಅಭಿಮಾನಿಗಳ ಪ್ರೀತಿಗೆ ಏನು ಮಾತನಾಡಬೇಕೋ ನನಗೆ ಮಾತುಗಳೇ ಬರುತ್ತಿಲ್ಲ. ಅಭಿಮಾನಿಗಳ ಪ್ರೀತಿ ಕಂಡು ನಾನು ತುಂಬಾ ಬಾವುಕಳಾದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಕುಟುಂಬ ಅವರ ಕುಟುಂಬ ಎರಡು ಒಂದೇ. ಇಬ್ಬರು ತುಂಬಾ ಅನ್ಯುನತೆಯಿಂದ ಇರುತ್ತೇವೆ. ಎಲ್ಲವು ಚನ್ನಾಗಿ ಆಗಿದೆ ಎಂದು ಹೇಳಿದರು. 

ಡಾಲಿ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ: ಇನ್ನು ನಿನ್ನೆ ಧನಂಜಯ್ ಹಾಗೂ ಧನ್ಯತಾ ಮದುವೆಗೆ ಬಂದು ಹಾರೈಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಡಾಲಿ ನನಗೆ ಒಳ್ಳೆ ಸ್ನೇಹಿತರು. ಧನಂಜಯ್ ಮದುವೆ ಆಗುತ್ತಿದ್ದಾರೆ ಒಳ್ಳೇದು. ಹಾಗೇನೇ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ. ನಾನು ಎಲ್ಲರಿಗೂ ಹೇಳುತ್ತೇನೆ ಮದುವೆ ತುಂಬಾ ಚೆನ್ನಾಗಿರತ್ತದೆ ಅಂತ. ಬೆಳಿಗ್ಗೆ ಕೌಶಲ್ಯ ರಾಮ ಪೂಜ್ಯ ಸಂದ್ಯತೆ ಕೇಳುತ್ತದೆ. ಆಮೇಲೆ ಬೇರೆ ಕೆಳುತ್ತದೆ. ಆದ್ರೂ ಡಾಲಿ ದಾಂಪತ್ಯಕ್ಕೆ ಒಳ್ಳೆದಾಗಲಿ. ನಾನು ಡಾಲಿ ಒಂದೇ ಅಪಾರ್ಟ್ಮೆಂಟ್ ಅಲ್ಲಿ ಇದ್ದೆವು. ಉತ್ತಮ ಸ್ನೇಹಿತರು ಕೂಡ. ಜೀವನ ಎನ್ನುವುದು ಅದ್ಭುತ ಪಯಣ. ಧನಂಜಯ್, ಧನ್ಯತಾಗೆ ಶುಭವಾಗಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.