ಸಪ್ತ ಸಾಗರದಾಚೆಗೆಲ್ಲೋ.. ಸಿನಿಮಾದ ಹೀರೋಯಿನ್ ರುಕ್ಮಿಣಿ ವಸಂತ್. ಆದರೆ ಈಕೆಯ ಅಪ್ಪ ರಿಯಲ್ ಹೀರೋ. ಏನವರ ಕತೆ?
ಸಪ್ತಸಾಗರದಾಚೆಗೆಲ್ಲೋ ಸಿನಿಮಾಕ್ಕೊಬ್ಬಳು ಅಂದದ ನಾಯಕಿ ಸಿಕ್ಕಿದ್ದಾಳೆ ಅನ್ನೋ ಸುದ್ದಿ ಸಖತ್ ವೈರಲ್ ಆಗಿದೆ. ಜೊತೆಗೆ ಈ ಹುಡುಗಿಯ ಫೋಟೋ ಸಹ ಎಲ್ಲರ ಸ್ಕ್ರೀನ್ ಮೇಲೆ ಹರಿದಾಡಿದೆ. ಜೊತೆಗೆ ಯಾರು ಈ ರುಕ್ಷ್ಮಿಣಿ ಅಂತ ಹುಡುಗ್ರು ತಲೆಕೆಡಿಸ್ಕೊಂಡಿದ್ದೇ ಕೊಂಡಿದ್ದು. ಬೀರಬಲ್ ಅನ್ನೋ ಸಿನಿಮಾಗೆ ಹಿಂದೆ ರುಕ್ಷ್ಮಿಣಿ ನಾಯಕಿಯಾಗಿದ್ರೂ ಅವರ ಹೆಸರು ಮನೆಮಾತಾಗುವಷ್ಟೆಲ್ಲ ಫೇಮಸ್ ಆಗ್ಲಿಲ್ಲ. ಸ್ಯಾಂಡಲ್ ವುಡ್ ನ ಕೆಲವೊಂದು ಜನರಿಗಷ್ಟೇ ಈಕೆಯ ಬಗ್ಗೆ ಗೊತ್ತಿತ್ತು. ಆ ಬಳಿಕ ಮತ್ತೆಲ್ಲೂ ಈಕೆ ಕಾಣಿಸಿಕೊಳ್ಳಲಿಲ್ಲ.
ಈಕೆ ರುಕ್ಷ್ಮಿಣಿ ವಸಂತ್ ಅಂತಷ್ಟೇ ಹೇಳಿದ್ರೆ ಖಂಡಿತಾ ಸಾಕಾಗಲ್ಲ. ಈ ಹುಡುಗಿ ಪ್ರತಿಭೆಯ ಆಗರ. ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ನಲ್ಲೂ ಮಿಂಚಿದ್ದಾರೆ. ಜೊತೆಗೆ ಆಪ್ತ ವಲಯದಲ್ಲೆಲ್ಲ ಸಖತ್ ಸ್ಟ್ರಾಂಗ್ ಗರ್ಲ್ ಅಂತಲೇ ಫೇಮಸ್. ಆದರೆ ಈಕೆಯ ಬಗ್ಗೆ ಇನ್ನೊಂದು ಸತ್ಯ ಹಲವರಿಗೆ ಗೊತ್ತಿಲ್ಲ. ಈ ಹುಡುಗಿ ಅಶೋಕ ಚಕ್ರ ಪಡೆದ ವೀರ ಯೋಧ ಕರ್ನಲ್ ವಸಂತ್ ವೇಣುಗೋಪಾಲ್ ಮಗಳು.
ವಸಂತ್ ವೇಣುಗೋಪಾಲ್ ಅಪ್ಪಟ ಕನ್ನಡಿಗರು. ಮಾತ್ರವಲ್ಲ, ಅಶೋಕಚಕ್ರ ಪಡೆದ ಮೊದಲ ಕನ್ನಡಿಗರು. 'ಫಾರೆವರ್ ಫಾರ್ಟಿ, ಕೊಲೊನಲ್ ವಸಂತ್ ಎಸಿ' ಅನ್ನೋ ಪುಸ್ತಕ ಕರ್ನಲ್ ವಸಂತ ಅವರ ಶೌರ್ಯ, ತ್ಯಾಗ, ಬಲಿದಾನಗಳನ್ನು ವಿವರಿಸುತ್ತದೆ. ಕೇವಲ ೪೦ನೇ ವಯಸ್ಸಿನಲ್ಲಿ ವೀರ ಮರಣವನ್ನಪ್ಪಿದರು ವಸಂತ್.
ರಕ್ಷಿತ್ ಶೆಟ್ಟಿಗೆ ಜೋಡಿಯಾಗಲಿದ್ದಾರೆ ಕರಾವಳಿ ಚೆಲುವೆ ರುಕ್ಮಿಣಿ ವಸಂತ್ ...
ಉರಿ ಅಂದಕೂಡಲೇ ನಮಗೆಲ್ಲ ಸರ್ಜಿಕಲ್ ಸ್ಟ್ರೈಕ್ ನೆನಪಾಗುತ್ತದೆ. ಉರಿ ವಾಯುನೆಲೆಯ ಉಗ್ರರು ದಾಳಿ ನಡೆಸಿದಾಗ ನಮ್ಮ ವೀರಯೋಧರು ಅವರ ನೆಲೆಗಳನ್ನೇ ನಾಶ ಮಾಡಿದ ಐತಿಹಾಸಿಕ ಕ್ಷಣವದು. ಆದರೆ 2007ರಲ್ಲೂ ಉರಿ ಸುದ್ದಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕ್ ಗಡಿ ಪ್ರದೇಶ ಉರಿಯಲ್ಲಿ ಸದಾ ಉಗ್ರರ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ನಮ್ಮ ವೀರ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಉಗ್ರರಿಂದ ದೇಶ ರಕ್ಷಿಸುತ್ತಾರೆ. ನೇ ಇಸವಿ ಜುಲೈ ೩೧ರ ಆ ದಿನ ಮರಾಠ ಲೈಟ್ ಇನ್‌ಫೆಂಟ್ರಿಯ 9ನೇ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದವರು ಕರ್ನಲ್ ವಸಂತ್ ವೇಣುಗೋಪಾಲ್.
ರೈತರ ಹೋರಾಟದ ಬಗ್ಗೆ ಟ್ವೀಟ್ ಮಾಡಿದ ರಿಹಾನಾ ...
ನುಸುಳುಕೋರ ಉಗ್ರರು ಉರಿಯಲ್ಲಿ ನಮ್ಮ ದೇಶದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕ ಕೂಡಲೇ ವಸಂತ್ ನೇತೃತ್ತದ ಸೈನಿಕ ಪಡೆ ಅಲ್ಲಿಗೆ ತೆರಳುತ್ತೆ. ನಮ್ಮ ಸೈನಿಕರು ಮತ್ತು ಉಗ್ರರ ನಡುವಿನ ಕಾಳಗದಲ್ಲಿ ಅನೇಕ ಉಗ್ರರನ್ನು ಮಣಿಸಿ ನಮ್ಮ ಸೈನ್ಯ ಮುನ್ನುಗ್ಗುತ್ತದೆ. ಈ ನಡುವೆ ನಮ್ಮ ಸೈನ್ಯವನ್ನು ಮುನ್ನಡೆಸುತ್ತಿದ್ದ ಕರ್ನಲ್ ವಸಂತ್ ಗೆ ಉಗ್ರರ ಗಂಡೇಟು ತಾಗಿ ಮಾರಣಾಂತಿಕ ಗಾಯವಾಗುತ್ತೆ. ಆದರೆ ಈ ವೀರಯೋಧನ ಗುಂಡಿಗೆಯಲ್ಲಿ ಎಂಥಾ ಧೈರ್ಯ, ಸಾಹಸಗಳು ತುಂಬಿದ್ದವು ಎಂದರೆ ಆ ನೋವಿನಲ್ಲೂ ೮ ಮಂದಿ ಉಗ್ರರನ್ನು ಸಾಯಿಸುತ್ತಾರೆ. ಕೊನೆಗೆ ತಾವೂ ಕುಸಿದು ಅಸುನೀಗುತ್ತಾರೆ.
ಸ್ಟ್ರೀಟ್ ಕರ್ನಲ್ ಪುತ್ರಿ ರುಕ್ಮಿಣಿ ವಸಂತ್ ಈಗ ಸ್ಯಾಂಡಲ್‌ವುಡ್ ಬೇಡಿಕೆಯ ನಟಿ! ...
ವೀರಯೋಧನ ಮರಣಕ್ಕೆ ದೇಶವೇ ಕಣ್ಣೀರು ಸುರಿಸುತ್ತದೆ. ಹೀಗೆ ವೀರ ಮರಣವನ್ನಪ್ಪಿದಾಗ ಇವರ ವಯಸ್ಸು ಕೇವಲ ೪೦ ವರ್ಷ. ಚಿಕ್ಕ ವಯಸ್ಸಿನ ಪತ್ನಿ. ಮಗಳು ತಬ್ಬಲಿಗಳಂತಾಗುತ್ತಾರೆ. ಬಳಿಕ ಈ ವೀರನಿಗೆ ದೇಶದ ಅತ್ಯುನ್ನತ ಸೇನಾ ಗೌರವ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು.
ಇಂಥಾ ಮಹಾನ್ ಯೋಧನ ಮಗಳೇ ರುಕ್ಷ್ಮಿಣಿ ವಸಂತ್. ಇಪ್ಪತ್ತಾರರ ಚೆಲುವೆ. ಈಕೆಯ ಅಪ್ಪ ಕರ್ನಲ್ ಆದರೆ ಅಮ್ಮ ಭರತನಾಟ್ಯ ಡ್ಯಾನ್ಸರ್ ಸುಭಾಷಿಣಿ ವಸಂತ್. ಈ ರುಕ್ಷ್ಮಿಣಿಯಾದರೂ ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರೆಮಾಟಿಕ್ ಆರ್ಟ್ಸ್ ನಲ್ಲಿ ಪದವಿ ಪಡೆದ ಪ್ರತಿಭಾವಂತೆ. ಜೊತೆಗೆ ಡ್ಯಾನ್ಸ್‌ನಲ್ಲೂ ಚತುರೆ. ಎರಡು ವರ್ಷಗಳ ಕೆಳಗೆ ಬೀರಬಲ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಪಡೆದ ರುಕ್ಷ್ಮಿಣಿ ಆಮೇಲೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸಪ್ತಸಾಗರದಾಚೆಗೆಲ್ಲೋ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದಾಗ ತಾನೇ ಕಾಲ್ ಮಾಡಿ ನಿರ್ದೇಶಕ ಹೇಮಂತ್ ಗೆ ವಿಶ್ ಮಾಡಿದ್ರಂತೆ. ಆಗ ಹೇಮಂತ್ ಗೆ ಅದೇನನಿಸಿತೋ ಈಕೆಯನ್ನು ಅಡಿಶನ್ ಮಾಡಿ ಸೆಲೆಕ್ಟ್ ಮಾಡಿಯೇ ಬಿಟ್ರು. ಸದ್ಯಕ್ಕೀಗ ಈಕೆಯ ಹೆಸರನ್ನೂ ರಿವೀಲ್ ಮಾಡಿದ್ದು ರುಕ್ಷ್ಮಿಣಿ ಟಾಕ್ ಆಫ್ ದಿ ಟೌನ್ ಆಗ್ಬಿಟ್ಟಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2021, 5:41 PM IST