ರಕ್ಷಿತ್ ಶೆಟ್ಟಿಗೆ ಜೋಡಿಯಾಗಲಿದ್ದಾರೆ ಕರಾವಳಿ ಚೆಲುವೆ ರುಕ್ಮಿಣಿ ವಸಂತ್
First Published Feb 3, 2021, 10:33 AM IST
ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ | ರಕ್ಷಿತ್ ಶೆಟ್ಟಿಚಿತ್ರದಲ್ಲಿ ಕರಾವಳಿ ಹುಡುಗಿ ಪಾತ್ರ

ರಕ್ಷಿತ್ ಶೆಟ್ಟಿನಟನೆಯ, ಹೇಮಂತ್ ರಾವ್ ನಿರ್ದೇಶನದ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಕ್ಕೆ ‘ಬೀರಬಲ್’ ಚಿತ್ರ ಖ್ಯಾತಿಯ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಫೆಬ್ರವರಿ ಕೊನೆಯ ವಾರ ಚಿತ್ರೀಕರಣ ಆರಂಭವಾಗಲಿದೆ. ಇಲ್ಲಿ ನಾಯಕಿ ಕರಾವಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡೇ ಪಾತ್ರಗಳು ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿವೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಾಹಣ ಮಾಡಲಿದ್ದಾರೆ.

‘ಇದು ಪ್ರೇಮ ಕತೆಯ ಸಿನಿಮಾ ಅಲ್ಲ. ಸಸ್ಪೆನ್ಸ್ ಸಿನಿಮಾ.

ಚಿತ್ರದ ಕೊನೆಯವರೆಗೂ ಕುತೂಹಲದಿಂದ ಸಾಗುತ್ತದೆ. ಬೇರೆ ರೀತಿಯ ಕತೆಯನ್ನೇ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.