Asianet Suvarna News Asianet Suvarna News

ಕರುನಾಡಿನ ವಿಶಿಷ್ಟ ಸಾಧಕರು: ಭಿನ್ನ-ವಿಭಿನ್ನ ಪ್ರತಿಭೆ ಪ್ರದರ್ಶಿಸಿ ಸಖತ್‌ ಪ್ರಸಿದ್ಧಿ ಪಡೆದವರು

ಇದು ಡಿಜಿಟಲ್‌ ಯುಗ. ಇಂಟರ್ನೆಟ್‌ ಕಾಲ. ಟೀವಿ ಚಾನಲ್‌, ಮೊಬೈಲ್‌ ಆ್ಯಪ್‌ಗಳೇ ಎಲ್ಲೆಲ್ಲೂ. ಈ ಲೋಕದಲ್ಲಿ ತಮ್ಮ ಭಿನ್ನ-ವಿಭಿನ್ನ ಪ್ರತಿಭಾ ಪ್ರದರ್ಶನ ಮಾಡುತ್ತಲೇ ಅನೇಕರು ತಾರೆಗಳಾಗಿದ್ದಾರೆ. ಕೆಲವರು ಗಂಭೀರ, ಇನ್ನು ಕೆಲವರು ಹಾಸ್ಯ, ಮತ್ತು ಕೆಲವರು ಮನರಂಜನಾತ್ಮಕ ವಿಷಯಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಇಂತಹ ನೂರಾರು ತಾರೆಯರು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿದ್ದಾರೆ. ಬಹುಸಂಖ್ಯಾತ ಇಂಗ್ಲಿಷ್‌, ಹಿಂದಿ ಅಂತಲ್ಲ. ಏಳೆಂಟು ಕೋಟಿ ಜನ ಮಾತನಾಡುವ ಕನ್ನಡದಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಾರೆಗಳು ಹುಟ್ಟಿದ್ದಾರೆ. ಅಂತಹ ತಾರೆಯರ ಪೈಕಿ ಕೆಲ ವಿಶಿಷ್ಟಸಾಧಕರ ವಿವರ ಇಲ್ಲಿದೆ.

Distinguished achievers of Karnataka different talents gained strong fame list vcs
Author
First Published Nov 1, 2022, 11:51 AM IST

ಪ್ರೀತಿ ಕಾಮತ್‌

1. ಹನಮಂತ (ಗಾಯಕ)

ತಮ್ಮ ಮುಗ್ಧತೆ ಹಾಗೂ ಸುಮಧುರ ಕಂಠದ ಮೂಲಕ ಇಡೀ ರಾಜ್ಯದಲ್ಲಿ ದಿಢೀರ್‌ ಖ್ಯಾತಿ ಪಡೆದವರಲ್ಲಿ ಹನಮಂತ ಲಮಾಣಿ ಒಬ್ಬರು. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದ ಕುರಿಗಾಹಿಯಾಗಿದ್ದ ಹನಮಂತ ‘ಸಾರೆಗಮಪ’ ರಿಯಾಲಿಟಿ ಶೋನಲ್ಲಿ ಮಿಂಚಿದವರು. ಉತ್ತರ ಕರ್ನಾಟಕದ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಇವರು ಕೇವಲ 5ನೇ ತರಗತಿ ಓದಿದ್ದು, ಯಾವುದೇ ಸಂಗೀತದ ಶಿಕ್ಷಣವನ್ನು ಪಡೆದವರಲ್ಲ. ದಿನವೂ ಕುರಿಗಳ ಹಿಂಡಿನ ಜತೆ ಕಾಲಕಳೆಯುವಾಗ ಮೊಬೈಲ್‌ನಲ್ಲಿ ಶಿಶುನಾಳ ಷರೀಫರ ಹಾಡುಗಳನ್ನು ಕೇಳುತ್ತಲೇ ಹಾಡು ಹೇಳುವುದನ್ನು ಕಲಿತವರು. ‘ಸಂಗೀತ ನನಗೆ ಬರಲ್ಲ ಕಣ್ರೀ...2-3 ಹಾಡು ಬರುತ್ತೆ’ ಎಂದು ವಿನಮ್ರನಾಗಿ ಹೇಳಿದ್ದ ಹನಮಂತನಿಗೆ ಇಂದು ಲಕ್ಷಾಂತರ ಫ್ಯಾನ್ಸ್‌ಗಳಿದ್ದಾರೆ. ಅಲ್ಲದೇ ‘ಡಾನ್ಸ್‌ ಕರ್ನಾಟಕ ಡ್ಯಾನ್ಸ್‌’ನಲ್ಲಿ ಸಖತ್‌ ಸ್ಟೆಪ್‌ ಹಾಕಿಯೂ ಜನರನ್ನು ರಂಜಿಸಿದ ಇವರು ಇತ್ತೀಚೆಗೆ ‘ಲೈಟಾಗಿ ಲವ್ವಾಗಿದೆ ನನಗಾ’ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಿನ್ನೆಲೆ ಗಾಯಕರಾಗಿಯೂ ಪ್ರವೇಶ ಪಡೆದಿದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ ಬಳಿಕವೂ ಹನಮಂತ ಸಾದಾ ಬಟ್ಟೆಧರಿಸಿ ತಮ್ಮ ಹಳ್ಳಿಯ ಮುಗ್ಧತೆ ಉಳಿಸಿಕೊಂಡಿದ್ದಾರೆ.

Distinguished achievers of Karnataka different talents gained strong fame list vcs

2. ಡಾಕ್ಟರ್‌ ಬ್ರೋ (ಪ್ರವಾಸಿಗ)

ಸೋಶಿಯಲ… ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಡಾ

ಬ್ರೋ ಚಿರಪರಿಚಿತ. ಓದಿನಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೇನು? ಸಾಧಿಸುವ ಛಲವಿದ್ದರೆ ಏನನ್ನಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಈ ಯುವಕ ಕನ್ನಡಿಗರಿಗೆ ಮೊಬೈಲ್‌ ಮೂಲಕ ಜಗತ್ತಿನ ದರ್ಶನ ಮಾಡಿಸುತ್ತಾನೆ. 22ರ ಕಿರುವಯಸ್ಸಿನಲ್ಲೇ ದೇಶ ವಿದೇಶ ಸುತ್ತುವ ಡಾ

ಬ್ರೋ ನಿಜವಾದ ಹೆಸರು ಗಗನ್‌ ಶ್ರೀನಿವಾಸ್‌. ನಮಸ್ಕಾರ ದೇವ್ರು.. ಎನ್ನುತ್ತಲೇ ವಿಡಿಯೋ ಆರಂಭಿಸುವ ಇವರಿಗೆ 2.02 ಲಕ್ಷ ಇನ್‌ಸ್ಟಾಗ್ರಾಂ ಫಾಲೋವ​ರ್‍ಸ್ ಇದ್ದಾರೆ. ಬೆಂಗಳೂರು ಮೂಲದ ಇವರು ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೇ ವಿವಿಧ ದೇಶಗಳಲ್ಲೂ ಏಕಾಂಗಿಯಾಗಿ ಸುತ್ತಾಡುತ್ತಾರೆ. ಇವರು ತಮ್ಮ ವ್ಲಾಗ್‌ನಲ್ಲಿ ಪ್ರವಾಸಿ ತಾಣಗಳ ಬಗ್ಗೆ ವಿಶಿಷ್ಟಮಾಹಿತಿಯನ್ನು ಕನ್ನಡದಲ್ಲೇ ಹಂಚಿಕೊಳ್ಳುವ ಮೂಲಕ ಖ್ಯಾತಿ ಪಡೆದವರು. ಈಗಾಗಲೇ 8 ದೇಶಗಳಲ್ಲಿ ಈತ ಸಂಚರಿಸಿದ್ದು, ಜಗತ್ತಿನ ಎಲ್ಲ ದೇಶಗಳಲ್ಲಿ ಸುತ್ತಾಡುವ ಆಸೆ ಹೊಂದಿದ್ದಾರೆ. ತಮ್ಮ ಪ್ರವಾಸಕ್ಕಾಗಿ ಅವರು ತಮ್ಮ ಪಾಲಕರು ಅಥವಾ ಇನ್ಯಾರ ಬಳಿಯಿಂದ ಹಣ ಪಡೆಯದೇ ಸ್ವಂತ ದುಡಿಮೆಯಿಂದ ಗಳಿಸಿದ ಹಣವಷ್ಟೇ ಬಳಸುವುದು ವಿಶೇಷ.

Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!

3. ಕಾಫಿನಾಡು ಚಂದು (ರೀಲ್ಸ್‌ ರಾಜ)

ಸೋಷಿಯಲ… ಮೀಡಿಯಾ ಓಪನ್‌ ಮಾಡಿದರೆ ಸಾಕು ‘ನಮಸ್ಕಾರ, ನಾನು ನಿಮ್ಮ ಕಾಫಿ ನಾಡಿನ ಚಂದು’ ಎಂಬ ವಿಡಿಯೋಗಳು ಎಲ್ಲೆಡೆ ಕಂಡು ಬರುತ್ತವೆ. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎನ್ನುತ್ತಾ ಫೇಮಸ್ಸಾದವರು ಕಾಫಿನಾಡು ಚಂದು. ತಮ್ಮದೇ ಆದ ಧಾಟಿಯಲ್ಲಿ ಹ್ಯಾಪಿ ಬರ್ತಡೇ ಪದಗಳನ್ನ ಹಾಡುತ್ತ ಅಣ್ಣ, ಅಕ್ಕ ಎಂದು ಸಂಬೋಧಿಸಿ ಬತ್‌ರ್‍ಡೇ ವಿಶ್‌ ಮಾಡುವ ಇವರು ಮೂಲತಃ ಚಿಕ್ಕಮಗಳೂರಿನವರು. ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಇವರು ಮನಸ್ಸಿಗೆ ಬಂದತೆ ಹಾಡು ಮನಸ್ಸಿಗೆ ಬಂದಂತೆ ಸಾಹಿತ್ಯ ಹೇಳುತ್ತ ಮೊದಲು ತಮ್ಮ ಸ್ನೇಹಿತರಿಗೆ ಬತ್‌ರ್‍ಡೇ ವಿಶ್‌ ಮಾಡುತ್ತಿದ್ದರು. ಚಂದುವಿನ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆವೈರಲ್‌ ಆಗಿತ್ತು. ಇವರಿಗೀಗ ಸಿಕ್ಕಾಪಟ್ಟೆಅಭಿಮಾನಿಗಳು ಇದ್ದಾರೆ. ಹೋದಲ್ಲೆಲ್ಲ ಜನರು ಮುಗಿಬಿದ್ದು ಸೆಲ್ಫಿ ಹೊಡೆಸಿಕೊಳ್ಳುತ್ತಾರೆ. ಆಗಾಗ ಸಣ್ಣಪುಟ್ಟಸಮಾಜ ಸೇವೆಯನ್ನೂ ಮಾಡುತ್ತ ಜನರ ಪ್ರೀತಿಗೆ ಪಾತ್ರರಾಗಿರುವ ಚಂದುವಿಗೆ ಇನ್‌ಸ್ಟಾಗ್ರಾಂನಲ್ಲಿ 3.87 ಲಕ್ಷ ಫಾಲೋವರ್ಸ್‌ ಅನ್ನೂ ಹೊಂದಿದ್ದಾರೆ.

Distinguished achievers of Karnataka different talents gained strong fame list vcs

4. ಸೋನು ವೇಣುಗೋಪಾಲ್‌ (ಸ್ಟಾಂಡಪ್‌ ಕಾಮಿಡಿಯನ್‌)

ಓದಿದ್ದು ಎಂಜಿನಿಯರಿಂಗ್‌, ಮಾಡಿದ್ದು ರೇಡಿಯೊ ಜಾಕಿ ಕೆಲಸ. ಆದರೆ ಪಟಪಟನೇ ಮಾತನಾಡುವ ಇವರ ಕೈ ಹಿಡಿದಿದ್ದು ಸ್ಟ್ಯಾಂಡಪ್‌ ಕಾಮಿಡಿ. ಇದು ಬಾಜುಮನಿ ಕಾಕು ಆಗಿ ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಸೋನು ವೇಣುಗೋಪಾಲ್‌ ಅವರ ಕತೆ. ಹಿಂದಿ, ಇಂಗ್ಲಿಷ್‌ನಲ್ಲಿ ಸ್ಟ್ಯಾಂಡಪ್‌ ಕಾಮಿಡಿಯನ್‌ಗಳು ಸೆಲೆಬ್ರಿಟಿಯಾಗಿ ಮಿಂಚುತ್ತಿದ್ದಾಗ 2018ರಲ್ಲಿ ತಮ್ಮ ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ಕನ್ನಡದಲ್ಲೇ ಮೈಕಿನ ಮುಂದೆ ನಿಂತು ಮಾತಿನ ಕಚಗುಳಿ ಇಡುವುದನ್ನು ಆರಂಭಿಸಿದರು. ತಮಗಾದ ಅನಭವಗಳನ್ನೇ ಹಾಸ್ಯ ಪ್ರಸಂಗವಾಗಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮೂಲಕ ಹಂಚಿಕೊಳ್ಳುವ ಇವರಿಗೆ 1.45 ಲಕ್ಷ ಫಾಲೋವರ್ಸ್‌ ಇದ್ದಾರೆ. ಇವರ ಅಂಕಲ್‌ ಶೇಷಾದ್ರಿ, ರಾಜು ಟೇಲರ್‌ ಮೊದಲಾದ ಪಾತ್ರಗಳು ಸಾಕಷ್ಟುಜನಪ್ರಿಯವಾಗಿವೆ. ಕಾಮಿಡಿಯಲ್ಲಿ ಕೆಟ್ಟಪದಗಳ ಬಳಕೆ ಅನಿವಾರ್ಯ ಎಂಬಂತೇ ವರ್ತಿಸುವವರ ನಡುವೆ ಇವರು ಯಾವುದೇ ಕೆಟ್ಟಪದ ಬಳಸದೇ ಹಾಸ್ಯ ಮಾಡುವ ಇವರು 2021ರಲ್ಲಿ ಪ್ರತಿಷ್ಠಿತ ಫೋಬ್ಸ್‌ರ್‍ ಮ್ಯಾಗಜೀನ್‌ನಲ್ಲೂ ಕಾಣಿಸಿಕೊಂಡಿದ್ದರು.\

'ಬದನೆಕಾಯಿ ಬಲು ಇಷ್ಟ, ಲಸಿಕೆ ಹಾಕಿಸಿಕೊಂಡಿಲ್ಲ' ಯಾವ ಊರಲಿದ್ದಾರೆ ರಮ್ಯಾ!

5. ಅನೂಪ್‌ ಮಯ್ಯ (ಕನ್ನಡಗೊತ್ತಿಲ್ಲ.ಕಾಂ ಸ್ಥಾಪಕ)

ಉದ್ಯೋಗವನ್ನು ಅರಸಿ ಬೆಂಗಳೂರಿಗೆ ಬರುವ ಪರಭಾಷಿಕರ ಬಾಯಲ್ಲಿ ಸಾಮಾನ್ಯವಾಗಿ ಕೇಳುವ ಪದವೇ ‘ಕನ್ನಡ ಗೊತ್ತಿಲ್ಲ’. ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿದೆ ಎಂದು ಕರುಬುವವರ ನಡುವೆ ಮನಸ್ಸು ಮಾಡಿದರೆ ಪರಭಾಷಿಕರಿಗೆ ನೆಲದ ಭಾಷೆಯನ್ನು ಸಲೀಸಾಗಿ ಕಲಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಅನೂಪ್‌ ಮಯ್ಯ. ಕನ್ನಡಗೊತ್ತಿಲ್ಲ.ಕಾಂ ಎಂಬ ಪೋರ್ಟಲ್‌ ಆರಂಭಿಸಿರುವ ಅನೂಪ್‌ ಅವರು ವಾಟ್ಸಾಪ್‌, ಸ್ಕೈಪ್‌ ಮೂಲಕ ತರಗತಿಗಳ ಮೂಲಕ ಪರಭಾಷಿಕರಿಗೆ ಕನ್ನಡ ಕಲಿಸುತ್ತಾರೆ. ಈ ಪೋರ್ಟಲ್‌ನಲ್ಲಿ ಕನ್ನಡ ಬಲ್ಲವರು ಶಿಕ್ಷಕರಾಗಿ ಕನ್ನಡ ಕಲಿಸುವ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. 30 ದಿನಗಳ ಈ ಕೋರ್ಸಿನಲ್ಲಿ ವ್ಯಾಕರಣ ಹಾಗೂ ಸರಳವಾದ ವಾಕ್ಯಗಳ ರಚನೆ ಕಲಿಸಲಾಗುತ್ತದೆ. ‘ಕನ್ನಡ ಗೊತ್ತಿಲ್ಲ’ ಎನ್ನುವವರ ಬಾಯಲ್ಲಿ ‘ನನಗೆ ಕನ್ನಡ ಬರುತ್ತದೆ’ ಎಂದು ಹೇಳಲು ನೆರವಾದ ಅನೂಪ್‌ ಮಯ್ಯ, ಕಳೆದ ಎಂಟು ವರ್ಷಗಳಲ್ಲಿ 28,000ಕ್ಕೂ ಹೆಚ್ಚು ಮಂದಿಗೆ ಕನ್ನಡ ಕಲಿಸಿದ್ದಾರೆ. ಇದರೊಂದಿಗೆ 15 ದೇಶಗಳ ಪ್ರಜೆಗಳಿಗೆ ಕನ್ನಡ ಕಲಿಸಿದ ಖ್ಯಾತಿಯನ್ನೂ ಹೊಂದಿದ್ದಾರೆ.

6. ಭಟ್ಸ್‌-ಎನ್‌-ಭಟ್ಸ್‌ (ಅಡುಗೆ ಚಾನಲ್‌)

ಕೊರೋನಾ ಕಾಲದಲ್ಲಿ ಭಾರೀ ಪ್ರಸಿದ್ಧಿ ಪಡೆದದ್ದು ಗಡಿನಾಡ ಕನ್ನಡಿಗರು ನಡೆಸುತ್ತಿರುವ ಭಟ್ಸ್‌-ಎನ್‌-ಭಟ್ಸ್‌ ಅಡುಗೆ ಚಾನಲ್‌. ಕೇರಳದ ಕಾಸರಗೋಡು ಜಿಲ್ಲೆ ಸೀತಾಂಗೋಳಿಯ ಸುದರ್ಶನ್‌ ಭಟ್‌ ಹಾಗೂ ಮನೋಹರ್‌ ಭಟ್‌ ಎಂಬ ಅಣ್ಣತಮ್ಮಂದಿರು ಕಟ್ಟಿದ ಯೂಟ್ಯೂಬ್‌ ಚಾನಲ್‌ ಇದು. ಕನ್ನಡದಲ್ಲಿ ಮಾತನಾಡುತ್ತಾ ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಅಡುಗೆ ಮಾಡಿಕೊಂಡು ಮನೆಮಾತಾಗಿರುವ ಇವರು ವಿದೇಶಗಳಲ್ಲೂ ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಮಂಗಳೂರು ಕನ್ನಡದಲ್ಲಿ ಸರಳವಾಗಿ ಮಾತನಾಡುವ ಇವರು ಸಾಂಪ್ರದಾಯಿಕ ಅಡುಗೆಗಳು ಮಾತ್ರವಲ್ಲದೆ ಇಂದಿನ ಪೀಳಿಗೆ ತಿಳಿಯದ ಹಲವಾರು ಸಾಂಪ್ರದಾಯಿಕ ವಿಚಾರಗಳನ್ನು, ಮನೆ ಮದ್ದುಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ. ಇನ್ನು ಇವರು ತಯಾರಿಸುವ ತಿನಿಸುಗಳೆನ್ನೆಲ್ಲ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯ. ತಿನಿಸುಗಳನ್ನು ತಯಾರಿಸಲು ಇವರು ಸಾಂಪ್ರದಾಯಿಕ ಸಲಕರಣೆಗಳನ್ನೇ ಬಳಸುವುದು ವಿಶೇಷ. ಪ್ರಸ್ತುತ ಇವರ ಯುಟ್ಯೂಬ್‌ ಚಾನಲ್‌ಗೆ 8.73 ಲಕ್ಷ ಸಬ್‌ಸ್ಕೆ್ರೖಬರ್‌ ಇದ್ದಾರೆ.

7. ಫ್ಲೈಯಿಂಗ್‌ ಪಾಸ್‌ಪೋರ್ಚ್‌ (ಪ್ರವಾಸಿಗರು)

‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂಬ ಗಾದೆ ಮಾತಿದೆ. ಆದರೆ ಒಂದು ದೇಶ ಸುತ್ತುವುದೇ ಸುಲಭವಲ್ಲ. ಅಂತದ್ದರಲ್ಲಿ 76 ದೇಶಗಳನ್ನು ಸುತ್ತಿ, ಆ ದೇಶಗಳ ಪ್ರಮುಖ ಪ್ರವಾಸಿ ಸ್ಥಳಗಳು, ಆಹಾರ ಪದ್ಧತಿ, ಸಂಸ್ಕೃತಿ ಮೊದಲಾವುಗಳ ಬಗ್ಗೆ ಕನ್ನಡದಲ್ಲೇ ಮಾಹಿತಿ ಹಂಚಿ ಜನಪ್ರಿಯರಾದವರು ಫ್ಲೈಯಿಂಗ್‌ ಪಾಸ್‌ಪೋರ್ಚ್‌ ಯುಟ್ಯೂಬ್‌ ಚಾನಲ್‌ನ ಆಶಾ ಹಾಗೂ ಕಿರಣ್‌ ದಂಪತಿ. ಬೆಂಗಳೂರು ಮೂಲದ ಈ ಟೆಕ್ಕಿ ದಂಪತಿ ಜರ್ಮನಿಯಲ್ಲಿ ನೆಲೆಸಿದ್ದರೂ ಕನ್ನಡ ಮರೆತಿಲ್ಲ. ಕನ್ನಡಿಗರಿಗೆ ವಿವಿಧ ದೇಶಗಳ ಪರಿಚಯ ಮಾಡಿದಲು 2020ರಲ್ಲಿ ಯುಟ್ಯೂಬ್‌ ಚಾನಲ್‌ ಆರಂಭಿಸಿದರು. ಹೋದ ದೇಶಗಳೆಲ್ಲ ಜತೆಗೆ ಕನ್ನಡ ಬಾವುಟವನ್ನು ಕೊಂಡೊಯ್ಯುವ ಇವರು ಅಲ್ಲೆಲ್ಲ ಕನ್ನಡ ಧ್ವಜವನ್ನು ಹಾರಿಸುವುದು ವಿಶೇಷ. ನಿಗೂಢವಾದ ಅಮೆಜಾನ್‌ ಕಾಡಿನಿಂದ ಹಿಡಿದು, ಟರ್ಕಿ, ಪೆರು, ಸ್ವಿಜರ್‌ಲೆಂಡ್‌ ಮೊದಲಾದಲ್ಲಿ ಭೇಟಿ ನೀಡಿ ತಮಗಾದ ಅನುಭವವನ್ನೂ ಹಂಚಿಕೊಂಡಿದ್ದು 1.91 ಲಕ್ಷ ಸಬ್‌ಸ್ಕೆ್ರೖಬರ್‌ ಹೊಂದಿದ್ದಾರೆ.

8. ಮೋಕ್ಷಿತ್‌ ಪೂಜಾರಿ (ರೀಲ್ಸ್‌ ತಂಡ)

ಕೆಜಿಎಫ್‌- ಚಾಪ್ಟರ್‌ 2 ವೇಳೆ ರವೀನಾ ಟಂಡನ್‌ ಅವರು ಮಾಡಿದ ರಮಿಕಾ ಸೇನ್‌ ಅವರ ಪಾತ್ರವನ್ನಿಟ್ಟುಕೊಂಡು ಸ್ಪೂಫ್‌ ಮಾಡಿ ರೀಲ್‌ ಶೇರ್‌ ಮಾಡಿದ ಮೋಕ್ಷಿತ್‌ ಪೂಜಾರಿ ಅವರ ತಂಡ ದಿಢೀರ್‌ ಜನಪ್ರಿಯತೆ ಪಡೆದುಕೊಂಡಿತ್ತು. ಸಿಕ್ಕಾಪಟ್ಟೆವೈರಲ್‌ ಆದ ಈ ರೀಲ್‌ ಅನ್ನು ಸ್ವತಃ ರವೀನಾ ಟಂಡನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿ ಭೇಷ್‌ ಎಂದಿದ್ದರು. ಮೋಕ್ಷಿತ್‌ ಪೂಜಾರಿ ಮಂಗಳೂರಿನವರಾಗಿದ್ದು, ಅಪ್ಪಟ ಮಂಗಳೂರು ಕನ್ನಡದಲ್ಲೇ ಸ್ಪೂಫ್‌ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಜನಪ್ರಿಯ ಚಲನಚಿತ್ರಗಳ ಫೇಮಸ್‌ ದೃಶ್ಯಗಳನ್ನೇ ಸ್ಪೂಫ್‌ ಮಾಡಲು ಇವರು ತಮ್ಮ ಓರಗೆಯ ಸ್ಥಳೀಯ ಮಕ್ಕಳನ್ನು ಬಳಸುತ್ತಾರೆ. ಯಾವುದೇ ಬೈಗುಳ, ಕೆಟ್ಟಪದಗಳ ಬಳಕೆಯಿಲ್ಲದೇ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಫಿಲ್ಮಿ ಟ್ವಿಸ್ಟ್‌ ನೀಡುವ ಈ ಕಾಮಿಡಿ ರೀಲ್‌ಗಳಿಗೆ ಭರ್ಜರಿ ಫ್ಯಾನ್ಸ್‌ಗಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ 2.25 ಲಕ್ಷ ಫಾಲೋವರ್ಸ್‌ ಇದ್ದಾರೆ.

9. ಆಲ್‌ ಓಕೆ ಅಲೋಕ್‌ (ರಾರ‍ಯಪರ್‌)

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ರಾರ‍ಯಪ್‌ ಹಾಡುಗಳು ತುಂಬಾ ಕಡಿಮೆ. ಡಿಜೆ ಕ್ರೇಜ್‌ ಹೆಚ್ಚಾಗಿರುವ ವೇಳೆಯಲ್ಲಿ ಆಲ್‌ ಓಕೆ ಅಲೋಕ್‌ ಅಲಿಯಾಸ್‌ ಅಲೋಕ್‌ ಬಾಬು ಅಪ್ಪಟ್ಟಕನ್ನಡದಲ್ಲಿ ರಾರ‍ಯಪ್‌ ಹಾಡಿ ಮನೆಮಾತಾಗಿದ್ದಾರೆ. ರಾರ‍ಯಪರ್‌, ಸಂಗೀತ ನಿರ್ದೇಶಕ, ನಟ ಹಾಗೂ ನಿರ್ದೇಶಕರಾಗಿ ಖ್ಯಾತಿಗಳಿಸಿದ್ದಾರೆ. ತಮ್ಮ ಮೊದಲ ರಾರ‍ಯಪ್‌ ‘ಹೆಂಗ್‌ ಹೆಂಗೋ’ ಹಾಡಿನ ಮೂಲಕವೇ ಆಲೋಕ್‌ ಜನಪ್ರಿಯರಾಗಿದ್ದರು. ಬಿಬಿಎಂ ಪದವಿಧರರಾದ ಅಲೋಕ್‌ ಅವರಿಗೆ ಯಶಸ್ಸು ದೊರೆತಿದ್ದು, ರಾರ‍ಯಪಿಂಗ್‌ನಲ್ಲಿ. ಡೋಂಟ್‌ವರಿ, ಮಾರಮ್ಮನ ಡಿಸ್ಕೋ, ಯಾಕ್‌ಹಿಂಗೆ, ಹ್ಯಾಪಿ, ನಾನ್‌ ಕನ್ನಡಿಗ ಹಾಡುಗಳಂತೂ ಚಿಕ್ಕ ಮಕ್ಕಳಿಂದ ವಯಸ್ಕರ ಬಾಯಲ್ಲೂ ಗುನುಗುತ್ತದೆ. ರಾರ‍ಯಪಿಂಗ್‌ ಹೊರತಾಗಿ ನಟನೆಯಲ್ಲೂ ಆಲೋಕ್‌ ಸೈ ಎನಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಯಾಕಿಂಗೆ-2 ಹಾಡು ಒಂದೇ ದಿನದಲ್ಲಿ 10 ಲಕ್ಷ ಜನ ವೀಕ್ಷಿಸಿದ್ದಾರೆ. ಆಲೋಕ್‌ ತಮ್ಮ ಹಾಡುಗಳಲ್ಲಿ ನಟ ಪುನೀತ್‌, ಸಂಚಾರಿ ವಿಜಯ್‌, ಚಿರಂಜೀವಿ ಸರ್ಜಾಗೆ ನಮನ ಸಲ್ಲಿಸಿ ನಟರ ಅಭಿಮಾನಿಗಳಿಗೂ ಪ್ರಿಯರಾಗಿದ್ದಾರೆ. ಇವರು ಇತ್ತೀಚೆಗೆ ಬಿಡುಗಡೆ ಮಾಡಿದ ಪಾರ್ಟಿ ಸಾಂಗ್‌ ಅಂತೂ ಮನೆಯಲ್ಲಿ ಸಿಕ್ಕಾಪಟ್ಟೆವೈರಲ್‌ ಆಗಿದೆ.

Distinguished achievers of Karnataka different talents gained strong fame list vcs

10. ವಂಶಿಕಾ (ಬಾಲ ನಟಿ)

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ 5 ವರ್ಷದ ವಂಶಿಕಾ ಅಂಜನಿ ಕಶ್ಯಪ್‌ ತನ್ನ ಮಾತು, ನಟನೆಯಿಂದ ಭಾರೀ ಫೇಮಸ್ಸಾದವರು. ಪಟಪಟ ಮಾತನಾಡುವ ವಂಶಿಕಾ, ತನ್ನ ತಾಯಿ ಯಶಸ್ವಿನಿ ಜೊತೆ ‘ನನ್ನಮ್ಮ ಸೂಪರ್‌ ಸ್ಟಾರ್‌’ ರಿಯಾಲಿಟಿ ಶೋ ಗೆದ್ದಿದ್ದಾಳೆ. ಖ್ಯಾತ ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ನಟ ಮಾಸ್ಟರ್‌ ಆನಂದ್‌ ಅವರ ಮಗಳಾದ ಇವಳು ಥೇಟ್‌ ಅಪ್ಪನಂತೆ ನಟನೆಯಲ್ಲಿ ಎತ್ತಿದ ಕೈ. ಇದರೊಂದಿಗೆ ಕನ್ನಡ ಚಿತ್ರರಂಗದ ನಟ-ನಟಿಯರ ಮಿಮಿಕ್ರಿ ಮಾಡಿಯೂ ಸೈ ಎನಿಸಿಕೊಂಡಿದ್ದಾಳೆ. ನನ್ನಮ್ಮ ಸೂಪರ್‌ ಸ್ಟಾರ್‌ ಖ್ಯಾತಿ ಬಳಿಕ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿಯೂ ಭಾಗವಹಿಸಿದ್ದಳು. ವಂಶಿಕಾ ನನ್ನಮ್ಮ ಸೂಪರ್‌ ಸ್ಟಾರ್‌ 2ನೇ ಆವೃತ್ತಿಗೆ ನಿರಂಜನ್‌ ದೇಶಪಾಂಡೆ ಜೊತೆ ಸಹ ನಿರೂಪಕಿಯಾಗಿ ಮಿಂಚಿದ್ದಾಳೆ. ನಟನೆ ಹಾಗೂ ಮಾತಿನಿಂದ ರಾಜ್ಯದ ಜನತೆಗೆ ಮೋಡಿ ಮಾಡಿದ್ದ ವಂಶಿಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಬಳಿಕ ಚಿತ್ರಗಳಲ್ಲೂ ನಟಿಸಲು ಮುಂದಾಗಿದ್ದಾಳೆ.

Follow Us:
Download App:
  • android
  • ios