'ಬದನೆಕಾಯಿ ಬಲು ಇಷ್ಟ, ಲಸಿಕೆ ಹಾಕಿಸಿಕೊಂಡಿಲ್ಲ' ಯಾವ ಊರಲಿದ್ದಾರೆ ರಮ್ಯಾ!
ಬೆಂಗಳೂರು(ಜು. 09) ಇಂದಿಗೂ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಸಿಕೊಳ್ಳುವ ರಮ್ಯಾ ದಿವ್ಯ ಸ್ಪಂದನ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಅನೇಕ ವಿಚಾರಗಳನ್ನು ಅಭಿಮಾನಿಗಳ ಜತೆ ಹಂಚಿಕೊಂಡರು.

ಬಹಳ ಕಾಲದ ನಂತರ ರಮ್ಯಾ ದರ್ಶನ ನೀಡಿದ್ದರು. ಸಂದರ್ಶನವೊಂದರಲ್ಲಿ ಇನ್‌ಸ್ಟಾಗ್ರಾಮ್ ಲೈವ್ ಮೂಲಕ ಮಾತನಾಡಿದರು.ಅದೆಷ್ಟೇ ಮಾತನಾಡಿದರೂ ತಾವಿರುವ ವಾಸಸ್ಥಳ ಯಾವುದು ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಸಿನಿಮಾ ಮಾಡುವಾಗ ಆರೋಗ್ಯದ ಬಗ್ಗೆ ಸೌಂದರ್ಯದ ಬಗ್ಗೆ ಗಮನ ಕೊಡುತ್ತಿದ್ದೆ. ಆಗ ಡಯೆಟ್, ವ್ಯಾಯಾಮ ಮಾಡುತ್ತಿದ್ದೆ. ಈಗ ಮನಸ್ಸಿಗೆ ಬಂದಿದ್ದನ್ನೆಲ್ಲ ತಿನ್ನುತ್ತೇನೆ ಎಂದು ಚಟಾಕಿ ಹಾರಿಸಿದರು.

ಐಸ್‌ಕ್ರೀಂ, ಜೋಳದ ರೊಟ್ಟಿ-ಎಣ್ಣೆಗಾಯಿ, ಮಶ್ರೂಮ್, ಕೇಕ್ ನನ್ನಿಷ್ಟದ ತಿಂಡಿಗಳು. ನಾಣ್ ವೆಜ್ ನಿಂದ ದೂರ ಸರಿದಿದ್ದೇನೆ ಎಂದರು.

ರೆಡ್ ಸಿಗ್ನಲ್ ಜಂಪ್ ಮಾಡಿದ್ದೀರಾ? ಎಂದಿದ್ದಕ್ಕೆ ಹೌದು ಎಂದರು. ಲವ್ ಮತ್ತು ಡವ್ ನಡುವಿನ ವ್ಯತ್ಯಾಸವನ್ನು ತಮ್ಮದೇ ಭಾಷೆಯಲ್ಲಿ ತಿಳಿಸಿದರು.

ಕನ್ನಡದ ಎಲ್ಲ ನಟಿಯರೂ ಚೆನ್ನಾಗಿದ್ದಾರೆ. ನಾನು ಸಿನಿಮಾ ಅಷ್ಟಾಗಿ ನೋಡಿಲ್ಲ ಎಂದು ಸತ್ಯ ಒಪ್ಪಿಕೊಂಡರು.

ಬೆಂಗಳೂರಿನ ಬಸವನಗುಡಿ, ಗಾಂಧಿನಗರ ನನ್ನ ಇಷ್ಟದ ಜಾಗ ಎಂದು ಹೇಳಿ ಫುಡ್ ಸ್ಟ್ರೀಟ್ ದಿನ ನೆನೆದರು.

ನಾನು ಲಸಿಕೆ ಹಾಕಿಸಿಕೊಂಡಿಲ್ಲ. ಮೊಡೆರ್ನಾ ಲಸಿಕೆಗೆ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಯಾವುದಕ್ಕೂ ಚೌಕಾಶಿ ಮಾಡಲ್ಲ. ಆಟೋದವರು ಒನ್ ಆಂಡ್ ಹಾಫ್ ಕೇಳಿದರೂ ಖುಷಿಯಿಂದ ಕೊಡುತ್ತೇನೆ.

ಸೀರೆ ಎಂದರೆ ನನಗೆ ತುಂಬಾ ಇಷ್ಟ ಎಂದರು

ಸೀರೆ ಎಂದರೆ ನನಗೆ ತುಂಬಾ ಇಷ್ಟ ಎಂದರು

ಬದನೆಕಾಯಿ ಇಷ್ಟ, ಮದುವೆ ಸದ್ಯಕ್ಕಿಲ್ಲ, ಸಿನಿಮಾ ಮಾಡುವ ತೀರ್ಮಾನವೂ ಇಲ್ಲ, ಪ್ರಾಣಿಗಳೊಂದಿಗೆ ದಿನ ಕಳೆಯುತ್ತಿದ್ದೇನೆ ಇದು ರಮ್ಯಾಯಣದ ಹೈಲೈಟ್ಸ್.