ಜಗ್ಗೇಶ್‌ ನಟನೆ, ಸಂತೋಷ್‌ ಆನಂದ ರಾಮ್‌ ನಿರ್ದೇಶನ, ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ ಕಿರಗಂದೂರು ನಿರ್ಮಿಸಿರುವ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದೊಂದು ನಗೆ ಹಬ್ಬ ಅನ್ನುತ್ತಲೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌.

ಪ್ರಿಯಾ ಕೆರ್ವಾಶೆ

- ಕಂಟೆಂಟ್‌ ಸಿನಿಮಾಕ್ಕಿಂತ ಕಾಮಿಡಿ ಸಿನಿಮಾ ಮಾಡೋದು ಸವಾಲು ಅಂತಾರೆ?

ಇದು ನಿಜವೇ. ಆದರೆ ಕಾಮಿಡಿ ಬಹಳ ಇಷ್ಟಪಡೋದು ನಾನು. ನಗುತ್ತ ನಗಿಸುತ್ತ ಇರೋದು ನನ್ನ ಸ್ವಭಾವ. ನನ್ನ ಸ್ವಭಾವವೇ ಹಾಗಿದ್ದ ಕಾರಣ ಕಾಮಿಡಿ ಮೇಲೆ ಗ್ರಿಪ್‌ ಇತ್ತು. ನನ್ನೊಳಗಿದ್ದ ಕಾಮಿಡಿ ಸಬ್ಜೆಕ್ಟನ್ನು ಸಮರ್ಥವಾಗಿ ತೆರೆ ಮೇಲೆ ತರುವ ನಟರು ಸಿಕ್ಕಿದ್ದರಿಂದ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂತು.

- ಜನಪ್ರಿಯ ಮ್ಯಾನರಿಸಂ ಇರುವ ಜಗ್ಗೇಶ್‌ ಥರದ ನಟರಿಂದ ಹೊಸತನ್ನ ತೆಗೆಸೋದು ಚಾಲೆಂಜಿಂಗ್‌ ಅನಿಸಲ್ವಾ?

ಜಗ್ಗೇಶ್‌ ಒಬ್ಬ ವರ್ಸಟೈಲ್‌ ಆ್ಯಕ್ಟರ್‌. ಕಾಮಿಡಿ ಕಲಾವಿದರ ಸ್ಕ್ರೀನ್‌ ಲೈಫು ಕಡಿಮೆ. ಒಂದೆರಡು ದಶಕಗಳಿಗೆ ಬೇಡಿಕೆ ಕಳೆದುಕೊಳ್ತಾರೆ. ನನಗೆ ತಿಳಿದ ಹಾಗೆ 40 ವರ್ಷ ಚಿತ್ರರಂಗದಲ್ಲಿದ್ದರೂ ಇನ್ನೂ ಪ್ರಸ್ತುತತೆ ಉಳಿಸಿಕೊಂಡಿರುವ ದಕ್ಷಿಣ ಭಾರತೀಯ ಚಿತ್ರರಂಗದ ಏಕೈಕ ನಟ ಜಗ್ಗೇಶ್‌. ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳೋದು ಅವರಿಗೆ ಕರತಲಾಮಲಕ. ಅಂಥವರಿಂದ ಹೇಗೆ ನಟನೆ ತಗೊಳ್ಬೇಕು ಅನ್ನೋದು ನಿರ್ದೇಶಕನಿಗೆ ತಿಳಿದಿರಬೇಕು.

Hidden ಕ್ಯಾಮೆರಾ ಹಿಡಿದು ಬಂದ ಯುಟ್ಯೂಬರ್‌ನ ಕಥೆಯನ್ನು 3 ದಿನದಲ್ಲಿ ಕ್ಲೋಸ್ ಮಾಡಿಸಿದೆ: ನಟ ಜಗ್ಗೇಶ್

- ಅವರನ್ನು ಮನಸ್ಸಲ್ಲಿಟ್ಟುಕೊಂಡೇ ಕಥೆ ಬರೆದಿರಾ?

ಒನ್‌ಲೈನ್‌ ಮನಸ್ಸಲ್ಲಿತ್ತು. ಅದನ್ನು ವಿಸ್ತರಿಸುವಾಗ ಜಗ್ಗೇಶ್‌ ಅವರನ್ನು ಮನಸ್ಸಿಟ್ಟುಕೊಂಡಿದ್ದೆ. ಬಾಲ್ಯದಿಂದ ಅವರನ್ನು ನೋಡಿಕೊಂಡು ಬೆಳೆದಿರುವವನು. ಅವರ ಕಾಮಿಡಿಗಳ ಪ್ರಭಾವ ನನ್ನಂಥವರ ಮೇಲೆ ಇದ್ದೇ ಇರುತ್ತದೆ.

ಮೆಸೇಜ್‌ ಸಿನಿಮಾಕ್ಕೆ ಅನಿವಾರ್ಯವಾ?

ವೈಯುಕ್ತಿಕವಾಗಿ ಹೇಳಬೇಕಾದ್ರೆ ಹೌದು. ಪ್ರೇಕ್ಷಕ ಸಿನಿಮಾ ನೋಡಿ ಆಚೆ ಹೋಗ್ತಾ ಒಂದು ಸಂದೇಶವನ್ನು, ಎಮೋಶನ್‌ ಅನ್ನು ಧ್ಯಾನಿಸುತ್ತ ಹೋಗಬೇಕು ಅನ್ನೋದು ನನ್ನ ಉದ್ದೇಶ.

- ಈ ಸಿನಿಮಾ ಜೊತೆಗಿನ ನಿಮ್ಮ ಜರ್ನಿ ಬಗ್ಗೆ ಹೇಳೋದಾದ್ರೆ?

ಲಾಕ್‌ಡೌನ್‌ನಲ್ಲಿ ಹುಟ್ಟಿಬೆಳೆದ ಸ್ಕಿ್ರಪ್‌್ಟಇದು. ಅಲ್ಲಿಂದ ಒಂದೂಕಾಲು ವರ್ಷಗಳ ಅದ್ಭುತ ಜರ್ನಿ. ಆಗ್ರ್ಯಾನಿಕ್‌ ಆಗಿ ಕಥೆ ಬೆಳೆಯುತ್ತ ಹೋಯ್ತು.

ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

- ಅವಿವಾಹಿತ ಹುಡುಗರ ಸಂಖ್ಯೆ ಹೆಚ್ಚಾಗ್ತಿದೆ. ಎಲ್ಲೆಡೆ ಹಬ್ಬಿರುವ ಈ ಸಮಸ್ಯೆ ನಿಮಗೆ ಪ್ರೇರಣೆ ನೀಡಿತಾ?

ಲೇಟಾಗಿ ಮದುವೆಯಾಗಿ ನಂತರ ಇನ್‌ಫರ್ಟಿಲಿಟಿ ಸಮಸ್ಯೆಯಿಂದ ಒದ್ದಾಡೋದು ಸಾಮಾನ್ಯ ಆಗ್ತಿದೆ. ಇದನ್ನು ಸೀರಿಯಸ್‌ ಆಗಿ ಹೇಳಿದರೆ ನೋವಿನ ಮೇಲೆ ಬರೆ ಎಳೆದ ಹಾಗೆ ಆಗುತ್ತೆ. ನಗುತ್ತ ಹೇಳಿದರೆ ಸರಿಯಾಗಿ ಮನಸ್ಸಲ್ಲಿ ಕೂರುತ್ತೆ.

- ಪ್ರೇಕ್ಷಕರನ್ನು ಥಿಯೇಟರಿಗೆ ಕರೆತರುವ ಅಂಶಗಳೇನು?

ಪ್ರೇಕ್ಷಕರನ್ನು ಜಡ್ಜ್‌ ಮಾಡೋದಕ್ಕೆ ಯಾರಿಂದಲೂ ಆಗಲ್ಲ. ನಮ್ಮ ಸಿನಿಮಾದ ಅವಧಿ ಚಿಕ್ಕದು. ನಗುವಿನ ರಸದೌತಣವೇ ಸಿನಿಮಾದಲ್ಲಿದೆ. ಈ ಅಂಶವೇ ಪ್ರೇಕ್ಷಕರನ್ನು ಕರೆತರುತ್ತದೆ ಅಂದುಕೊಂಡಿದ್ದೇವೆ.