ಡಿಫರೆಂಟ್ ಡೈರೆಕ್ಟರ್ ರಿಷಬ್‌ ಶೆಟ್ಟಿ ಬರೆದಿರುವ ಕತೆ ಕೇಳಿ ಹ್ಯಾಟ್ರಿಕ್ ಹೀರೋ ಶಿವಣ್ಣ ಫುಲ್ ಖುಷ್‌ ಆಗಿದ್ದಾರೆ. ಈ ಚಿತ್ರಕ್ಕೆ ಜಯಣ್ಣ ಹಾಗೂ ಭೋಗೇಂದ್ರ ಬಂಡವಾಳ ಹಾಕುತ್ತಿದ್ದಾರೆ. 

ರಿಷಬ್‌ ಶೆಟ್ಟಿಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುವುದು ಖಚಿತವಾಗಿದೆ. ರಿಷಬ್‌ ಶೆಟ್ಟಿಅವರು ಶಿವಣ್ಣ ಭೇಟಿ ಮಾಡಿ ಕತೆ ಹೇಳಿದ್ದಾರೆ. ಕತೆ ಕೇಳಿರುವ ಶಿವರಾಜ್‌ಕುಮಾರ್‌ ಸಖತ್‌ ಖುಷಿ ಆಗಿದ್ದಾರೆ.

‘ನಾನು ಶಿವಣ್ಣ ಅವರ ಓಂ ಚಿತ್ರಗಳಿಂದಲೂ ದೊಡ್ಡ ಅಭಿಮಾನಿ. ಚಿತ್ರರಂಗಕ್ಕೆ ಬಂದ ಮೇಲೆ ಅವರ ಜತೆಗೆ ಒಂದು ಸಿನಿಮಾ ಮಾಡಬೇಕು ಎಂಬುದು ಬಹುದಿನಗಳ ಕನಸು. ಅದು ಈಗ ಈಡೇರುತ್ತಿದೆ. ನೂರು ಚಿತ್ರಗಳ ಸರದಾರನಿಗೆ ಕತೆ ಹೇಳುವುದೇ ಒಂದು ಅದೃಷ್ಟ. ಇನ್ನೂ ಅವರು ನಾವು ಹೇಳುವ ಕತೆ ಕೇಳಿ ಮೆಚ್ಚುಗೆ ಸೂಚಿಸುವುದು ಇದೆಯಲ್ಲ, ಅದು ಅರ್ಧ ಗೆಲುವು ಸಿಕ್ಕಂತೆ. ನಾನು ಹೇಳಿದ ಕತೆ ಕೇಳಿ ತುಂಬಾ ಖುಷಿ ಆಗಿದ್ದಾರೆ. ರೆಗ್ಯುಲರ್‌ ಆ್ಯಕ್ಷನ್‌ ಕತೆ ಅಲ್ಲ. ಮುಂದೆ ಕತೆ ಬಗ್ಗೆ ಹೇಳುತ್ತೇನೆ. ಹೊಸ ರೀತಿಯ ಕತೆ ಮಾಡಿಕೊಂಡಿದ್ದೇನೆ. ಅದನ್ನು ನೀವು ತೆರೆ ಮೇಲೆ ನೋಡುತ್ತೀರಿ. ಮೆಚ್ಚಿಕೊಳ್ಳುತ್ತೀರಿ ಎನ್ನುವ ಭರವಸೆಯಂತೂ ಇದೆ’ ಎಂಬುದು ರಿಷಬ್‌ ಶೆಟ್ಟಿಹೇಳುವ ಮಾತುಗಳು.

ಅನೌನ್ಸ್ ಆಯ್ತು ರಿಷಬ್ ಶೆಟ್ಟಿ ಹೊಸ ಸಿನಿಮಾ 'ಕಾಂತಾರ'!

ಜಯಣ್ಣ ಹಾಗೂ ಭೋಗೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಮಾಚ್‌ರ್‍ ಅಥವಾ ಏಪ್ರಿಲ್‌ಗೆ ಆರಂಭವಾಗುವ ಸಾಧ್ಯತೆಗಳು ಇವೆ. ಅಷ್ಟರಲ್ಲಿ ಶಿವಣ್ಣ ‘ವೇದ’ ಹಾಗೂ ‘ನೀ ಸಿಗುವವರೆಗೂ’ ಚಿತ್ರಗಳನ್ನು ಮುಗಿಸಲಿದ್ದಾರೆ. ಇತ್ತ ರಿಷಬ್‌ ಶೆಟ್ಟಿಕೂಡ ‘ಕಾಂತಾರ’ ಚಿತ್ರವನ್ನು ಮುಗಿಸಲಿದ್ದಾರೆ.