ಆಲೋಚನೆಗಳನ್ನು ಹಾಡಿನ ರೂಪದಲ್ಲಿ ತಂದು ಪ್ರೇಕ್ಷಕರನ್ನೇ ಆಲೋಚನೆಯಲ್ಲಿ ಮುಳುಗುವಂತೆ ಮಾಡುವ ಮಾಸ್ಟರ್ ಡೈರೆಕ್ಟರ್ ಯೋಗರಾಜ್‌ ಭಟ್ ತಮ್ಮ ಬ್ಯಾನರ್‌ನಲ್ಲಿ ಮತ್ತೊಂದು ಚಿತ್ರ ನಿರ್ಮಾಣ ಮಾಡುವುದರ ಬಗ್ಗೆ ಖಚಿತಪಡಿಸಿದ್ದಾರೆ.

ಪ್ರಭುದೇವ ಕೈಗೆ ಗಾಳಿಪಟ ಹಾರ್ಸೋಕೆ ಕೊಟ್ಟು ಬಿಟ್ರು ಯೋಗರಾಜ್ ಭಟ್ರು!

 

ಗಣೇಶ್ ಮತ್ತು ದೂದ್ ಪೇಡ ದಿಗಂತ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಗಾಳಿಪಟ-2' ಕನ್ನಡ ಸಿನಿ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿದೆ. ಒಂದು ಸಿನಿಮಾ ಮಾಡುತ್ತಲೇ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವುದರಲ್ಲಿ ರಿಸ್ಕ್‌ ತೆಗೆದುಕೊಂಡಿದ್ದಾರೆ ಭಟ್ರು.

ರಾಧಿಕಾ ನಾರಾಯಣ್‌ಗ ಕ್ಲೀನ್‌ ಬೋಲ್ಡ್‌ ಆದ ದತ್ತಣ್ಣ!

ಹರಿಪ್ರಸಾದ್ ಜಯಣ್ಣ ಆ್ಯಕ್ಷನ್‌ ಕಟ್‌ಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಪದವಿ ಪೂರ್ಣ' ಚಿತ್ರಕ್ಕೆ ಯೋಗರಾಜ್‌ ಭಟ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಕಾಲೇಜು ಯುವಕರ ಮನಸ್ಥಿತಿ ಇಟ್ಟುಕೊಂಡು ಮಾಡಿರುವ ಕಥೆ ಇದಾಗಿದ್ದು ಮಾಡೆಲ್ ಪೃಥ್ವಿ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಚಿತ್ರದ ಮಾತುಕಥೆ ನಡೆಯುತ್ತಿದ್ದು 2020 ರಲ್ಲಿ ಮುಹೂರ್ತ ಶುರುವಾಗಲಿದೆ ಎಂದು ಹೇಳಲಾಗಿದೆ.