ಪುನೀತ್ ರಾಜ್‌ಕುಮಾರ್ ಸಿನಿಮಾ ಚಿತ್ರೀಕರಣ ಅರಂಭಿಸಿದ ನಿರ್ದೇಶಕ ಪವನ್. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿದ ಅಭಿಮಾನಿಗಳು. 

ಕನ್ನಡ ಚಿತ್ರರಂಗದ ನಿರ್ದೇಶಕ ಪವನ್ ಕುಮಾರ್ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್‌ ಅಗಿ ಚೇತರಿಸಿಕೊಂಡು, ಈಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

'ಕನ್ನಡಿಯಲ್ಲಿ ಕಾಣಿಸುತ್ತಿರುವ ವ್ಯಕ್ತಿ ನಾನೇ. ಆ್ಯಂಟಿಬಾಡೀಸ್ ಲೋಡ್ ಅಗಿರುವ ದೇಹ ಆರೋಗ್ಯವಾಗಿದೆ. ದ್ವಿತ್ವ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾದ ಕಾರಣ ಸೋಷಿಯಲ್ ಮೀಡಿಯಾದಿಂದಲೂ ಕೊಂಚ ದೂರ ಉಳಿದೆ. ಇದನ್ನು ಮೊದಲೇ ತಿಳಿಸುವುದಕ್ಕೆ ಮರೆತೆ. ನಮ್ಮ ಆರೋಗ್ಯದ ಬಗ್ಗೆ ವಿಚಾರಿಸಲು ಮೆಸೇಜ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಪವನ್ ಬರೆದುಕೊಂಡಿದ್ದಾರೆ. 

ಕೆಲವು ದಿನಗಳ ಹಿಂದೆಯೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿರುವ ಪವನ್ ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಫಿಲಂ ಬಂಡವಾಳ ಹಾಕಿದೆ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರದ ಮ್ಯೂಸಿಕ್ ಕಂಪೋಸರ್ ಆಗಿದ್ದು,ಇನ್ನುಳಿದ ತಾರಾ ಬಳಗದ ಬಗ್ಗೆ ಇನ್ನೂ ರಿವೀಲ್ ಮಾಡಬೇಕಿದೆ.

ಪುನೀತ್‌ಗೆ ಜೋಡಿಯಾಗಲಿದ್ದಾರೆ ಕಾಲಿವುಡ್ ಚೆಲುವೆ

ನಟ ಪುನೀತ್ ರಾಜ್‌ಕುಮಾರ್ ಸದ್ಯ ಡಾಕ್ಯೂಮೆಂಟರಿಗಾಗಿ ಕರ್ನಾಟಕ ಟೂರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೇಮ್ಸ್‌ ಚಿತ್ರದ ನಂತರ ಅಪ್ಪು ದ್ವೀತ್ವ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.