'ಗೂಗ್ಲಿ' ನಿರ್ದೇಶಕ ಪವನ್ ಒಡೆಯಾರ್ ದಂಪತಿ  ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಒಂದೇ ದಿನ ಎರಡೆರಡು ಸಂಭ್ರಮ ಈ ಜೋಡಿಗೆ.

ಡಿಸೆಂಬರ್ 10 ನಿರ್ದೇಶಕ ಪವನ್‌ ಲೈಫ್‌ನಲ್ಲಿ ಮರೆಯಲಾಗದ ದಿನ. ಪವನ್ ಒಡೆಯಾರ್ ಹುಟ್ಟು ಹಬ್ಬವಾದರೆ ಮತ್ತೊಂದು ಕಡೆ ದಂಪತಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಪತ್ನಿ ಜೊತೆಗಿರುವ ಸೆಲ್ಫೀ ಶೇರ್ ಮಾಡಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ ಪವನ್.

ನಟಿ ಅಪೇಕ್ಷಾ ಪುರೋಹಿತ್ ಸರಳ, ಸುಂದರ ಸೀಮಂತ ಕಾರ್ಯಕ್ರಮ! 

ಪವನ್ ಪಕ್ಕದಲ್ಲಿ ಮಡದಿ ಅಪೇಕ್ಷಾ ಹಾಗೂ ಆಗಷ್ಟೇ ಜನಿಸಿದ ಪುಟ್ಟ ಕಂದಮ್ಮನ ಕಾಲು ಹಿಡಿದು ಸೆಲ್ಫೀ ಕ್ಲಿಕಿಸಿ ಕೊಂಡಿದ್ದಾರೆ. 'ನನ್ನ ಹುಟ್ಟುಹಬ್ಬಕ್ಕೆ ಪ್ರಪಂಚದ ಅತಿ ಅದ್ಭುತವಾದ ಉಡುಗೊರೆ ಸಿಕ್ಕಿದೆ. ಗಂಡು ಮಗು. ಜೈ ಚಾಮುಂಡೇಶ್ವರಿ' ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಆಸ್ಪತ್ರೆ ಬಾಗಿಲಿನ ಮೇಲಿರುವ 'Its a boy' ಎಂದು ಆನೆ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 

Scroll to load tweet…

ಈ ಹಿಂದೆ ಅಪೇಕ್ಷಾ ಸೀಮಂತ ಕಾರ್ಯಕ್ರಮಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಸ್ಪೆಷಲ್ ಫೋಟೋ ಶೂಟ್ ಮೂಲಕ ಪ್ರೆಗ್ನೆಂನ್ಸಿ ಬಗ್ಗೆ ರಿವೀಲ್ ಮಾಡಿದ್ದರು. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಹಲವು ರೀತಿ ತಿನಿಸುಗಳ ಮುಂದೆ ಕುಳಿತಿದ್ದ ಫೋಟೋ ಎಲ್ಲರ ಗಮನ ಸೆಳೆದಿತ್ತು. ಇಂದು ಪವನ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸುತ್ತಿರುವ ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬಸ್ಥರು ಪುಟ್ಟ ಕಂದಮ್ಮನಿಗೂ ಶುಭ ಹಾರೈಸುತ್ತಿದ್ದಾರೆ.

ಗುಡ್‌ ನ್ಯೂಸ್‌ ಕೊಟ್ಟ ಪವನ್ ಒಡೆಯರ್ ದಂಪತಿ; ಡಿಸಂಬರ್‌ನಲ್ಲಿ ಪುಟ್ಟ ಕಂದನ ಆಗಮನ! 

Scroll to load tweet…