ಹುಷಾರಾಗಿರು ಮಗನೇ ಅಂದಿದ್ರಾ ರಾಯರು; ಪುನೀತ್ ವಿಡಿಯೋ ಬಗ್ಗೆ ಮುರಳಿ ಮೋಹನ್ ಹೇಳಿಕೆ ವೈರಲ್
ಅಪ್ಪು ಅಗಲಿದಾಗ ವೈರಲ್ ಆದ ವಿಡಿಯೋ ಬಗ್ಗೆ ನಿರ್ದೇಶಕ ಮುರಳಿ ಮೋಹನ್ ಕೊಟ್ಟ ಸ್ಪಷ್ಟನೆ ವೈರಲ್....

ಕನ್ನಡ ಚಿತ್ರರಂಗದ ಮುತ್ತು, ಕರ್ನಾಟಕ ಮುತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29, 2021ರಲ್ಲಿ ಅಗಲಿದರು. ಅಭಿಮಾನಿಗಳು ಮಾಡುತ್ತಿರುವ ಸಮಾಜ ಸೇವೆಗಳ ಮೂಲಕ ಅಪ್ಪು ಇಲ್ಲೇ ಇದ್ದಾರೆ ಅನ್ನೋ ಭಾವನೆಯಲ್ಲಿ ಸಾಕಷ್ಟು ಜನರು ಬದುಕುತ್ತಿದ್ದಾರೆ. ಅಪ್ಪು ಇಲ್ಲೇ ಇದ್ದಾರೆ ಹೌದು. ಆದರೆ ಅಪ್ಪು ಅಗಲಿದ ಕೆಲವು ದಿನಗಳ ನಂತರ ಮಂತ್ರಾಲಯದಲ್ಲಿ ಸೆರೆ ಹಿಡಿದ ವಿಡಿಯೋ ಸಖತ್ ವೈರಲ್ ಆಗಿತ್ತು.
ಮಂತ್ರಾಲಯದಲ್ಲಿ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ ಪುನೀತ್ ರಾಜ್‌ಕುಮಾರ್ ಪೀಠದ ಮುಂದೆ ನಿಂತು ಮಾತನಾಡುವಾಗ ಪೀಠ ಮುಂದೆ ವಾಲುತ್ತದೆ. ಆಗ ಮುಂದಿನ ವರ್ಷ ಆರಾಧನೆಗೆ ಬರುತ್ತೀನಿ ಎಂದು ಅಪ್ಪು ಹೇಳುತ್ತಿರುತ್ತಾರೆ. ಈ ಘಟನೆ ಬಗ್ಗೆ ಸಾಕಷ್ಟ ವಿಶ್ಲೇಷಣೆ ನಡೆಯಿತ್ತು. ಈ ಘಟನೆ ಬಗ್ಗೆ ಖ್ಯಾತ ನಿರ್ದೇಶಕ ಮುರಳಿ ಮೋಹನ್ ಮಾತನಾಡಿದ್ದಾರೆ.
ದುರ್ಗಾ ಹೋಮ, ಲಲಿತಾ ಸಹಸ್ರನಾಮ ಪೂಜೆ ಮಾಡಿಸಿದ ಪ್ರಿಯಾಂಕಾ ಉಪೇಂದ್ರ!
'ವಿಡಿಯೋ ಹೀಗೆ ವೈರಲ್ ಆಗುತ್ತಿದೆ ಎಂದು ಉಪೇಂದ್ರ ನನಗೆ ತೋರಿಸಿದ್ದರು. ಇದೇನಿದು ನೋಡಿ ಏನ್ ಹೇಳುತ್ತೀಯಾ ಎಂದು ಹೇಳಿದರು. ಆಗ ನಾನು ಈ ವಿಡಿಯೋ ನೋಡಿದೆ. ಆರಾಧನೆಗೆ ಬರ್ತೀನಿ ಎಂದು ಹೇಳಿದ ತಕ್ಷಣವೇ ಫೋಟೋ ಅಲ್ಲಾಡಿದೆ. ಪಕ್ಕದಲ್ಲಿ ನಿಂತವರು ಕೈ ತಾಗಿಸಿರಬಹುದು ಎಂದು ನೋಡಿದೆ ಅದು ಕೂಡ ಆಗಿಲ್ಲ ಒಂದು ವೇಳೆ ಒಬ್ಬರು ಮುಟ್ಟಿದ್ದರು ಆ ಮಾತಿಗೆ ಯಾವ ಹೀಗಾಗುತ್ತದೆ ಇದರಿಂದ ಅವರಿಗೆ ಏನು ಲಾಭ ಇದೆ? ಹೀಗಾಗಿ ಇದರಲ್ಲಿ ಎರಡು ವಿಚಾರ ಬರುತ್ತೆ. ಒಂದು ಮಂತ್ರಾಲಯ ಪೀಠಾಧಿಪತಿಗಳು ಸ್ಪಷ್ಟನೆ ಕೊಟ್ಟಿದ್ದಾರೆ ಇದಕ್ಕೆ ನೀವು ಯಾವ ಅರ್ಥ ಕಲ್ಪಿಸಬೇಕಿಲ್ಲ ರಾಯರಿಗೆ ಅವರ ಮೇಲೆ ಮುನಿಸಿಲ್ಲ ಅವರು ರಾಯರ ಭಕ್ತರು ಎಂದು. ರಾಯರು ಮುನಿಸು ತೋರಿಸಿಕೊಂಡರು ಅಂತ ಜನರು ಹೇಳುವ ರೀತಿ ಚರ್ಚೆ ಆಗಿಲ್ಲ. ಚರ್ಚೆ ಆಗುತ್ತಿರುವುದು ಅಪ್ಪು ಹೇಳಿರುವ ಘಟನೆ ನಡೆಯುವುದಿಲ್ಲ ಅಂತ ಸೂಚನೆ ಕೊಟ್ಟಿದ್ದಾರೆ ಅಂತ' ಎಂದು ಮುರಳಿ ಮೋಹನ್ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದರು.
ಮೈಸೂರು ಲೋಕೇಶ್ ನಿಗೂಢ ಸಾವು; ತಂದೆಯ 'ಆ' ಸಂಬಂಧ ಬಿಚ್ಚಿಟ್ಟ ಪುತ್ರ ಆದಿ ಲೋಕೇಶ್
ರಾಘವೇಂದ್ರ ಸ್ವಾಮಿಗಳ ಇತಿಹಾಸ ನೋಡಿದಾಗ ಪರೋಕ್ಷವಾಗಿ ಅವರ ಇರುವಿಕೆ ತೋರಿಸಿಕೊಂಡು ಬಂದಿದ್ದಾರೆ. ರಜನಿಕಾಂತ್ ಅವರಿಗೂ ರಾಯರು ಒಂದು ಜಡ್ಜ್‌ಮೆಂಟ್ ಕೊಡುತ್ತಾರೆ. ರಜನಿಕಾಂತ್ ಚಿತ್ರರಂಗದಲ್ಲಿ ಬೇಸತ್ತು ಮದ್ರಾಸ್‌ನಲ್ಲಿ ಅವಕಾಶಗಳು ಸಿಗದೆ ನಾನು ವಾಪಸ್ ಬೆಂಗಳೂರಿಗೆ ಹೊರಡುತ್ತೀನಿ ಅಂತ ಯೊಚನೆ ಮಾಡಿದಾಗ ಅಲ್ಲಿ ರಾಯರ ದರ್ಶನ ಮಾಡುತ್ತಾರೆ. ಕಣ್ಣೀರಿಟ್ಟು ರಾಯರ ಬಳಿ ಘಟನೆ ಹಂಚಿಕೊಂಡು ಎರಡು ದಿನ ಉಳಿಯುತ್ತಾರೆ ಅಲ್ಲಿಂದ ಹೊರಡುವ ದಿನ ಬಸ್ ಹತ್ತಿಕೊಂಡು ಹೋಗಲು ಮುಂದಾದಾಗ ವಯಸ್ಸಾದವರು ಬಂದು ಏನು ನಿನ್ನ ಸಮಸ್ಯೆ ಎಂದು ವಿಚಾರಿಸಿ ನೀನು ವಾಪಸ್ ಮದ್ರಾಸ್‌ಗೆ ಹೋಗಿ ನೀನು ಹೋಗಲೇ ಬೇಕು ಎನ್ನುತ್ತಾರೆ. ರಾಯರೇ ಹೇಳಿಸಿರುವುದು ಎಂದು ರಜನಿಕಾಂತ್ ವಾಪಸ್ ಆಗುತ್ತಾರೆ ಅಲ್ಲಿ ಅವರಿಗೆ ದೊಡ್ಡ ಅವಕಾಶ ಪಡೆದು ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು' ಎಂದು ಮುರಳಿ ಮೋಹನ್ ಹೇಳಿದ್ದಾರೆ.
'ಪುನೀತ್ ವಿಚಾರದಲ್ಲಿ ರಾಘವೇಂದ್ರ ಸ್ವಾಮಿ ಏನು ಹೇಳಲು ಮುಂದಾದರು ಎಂದು ವಿವರಿಸಲು ನಮಗೆ ಪಾಂಡಿತ್ಯವೂ ಇಲ್ಲ ಯೋಗ್ಯತೆನೂ ಇಲ್ಲ ಆದರೆ ಏನೂ ಸೂಚನೆ ಕೊಟ್ಟಿದ್ದಾರೆ. ಅಲ್ಲಿ ಏನೋ ಆಗಿರುವುದು ನಿಜ ಯಾರು ಮಾಡಿರುವುದು ಅಲ್ಲ. ಹುಷಾರ್ ಆಗಿರು ಮನೆ ಎಂದು ಸೂಚನೆ ಕೊಟ್ಟಿರಬಹುದು' ಎಂದಿದ್ದಾರೆ ಮುರಳಿ ಮೋಹನ್.