ಪ್ರಜ್ವಲ್ ದೇವರಾಜ್ ಅಭಿನಯದ ಹಾರರ್ ಲೂಪ್ ಸಿನಿಮಾ ‘ರಾಕ್ಷಸ’ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ದೀಪು ಬಿಎಸ್ ನಿರ್ಮಾಣದ ಈ ಸಿನಿಮಾ ಕುರಿತು ನಿರ್ದೇಶಕ ಲೋಹಿತ್ ಮಾಹಿತಿ ನೀಡಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ ಹಾರರ್ ಲೂಪ್ ಸಿನಿಮಾ ‘ರಾಕ್ಷಸ’ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ದೀಪು ಬಿಎಸ್ ನಿರ್ಮಾಣದ ಈ ಸಿನಿಮಾ ಕುರಿತು ನಿರ್ದೇಶಕ ಲೋಹಿತ್ ಮಾಹಿತಿ ನೀಡಿದ್ದಾರೆ. ‘ಇದು ಪ್ರಯೋಗಾತ್ಮಕ ಕಥೆ. ಇದರಲ್ಲಿ ಹೀರೋಯಿಸಂ, ಫೈಟ್‌, ಹಾಡುಗಳಂಥಾ ಮಾಮೂಲಿ ಅಂಶಗಳಿರಲ್ಲ. ಆದರೆ ಸದಾ ಹೊಸತನದ ಹುಡುಕಾಟದಲ್ಲಿರುವ ಪ್ರಜ್ವಲ್‌ ಖುಷಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. 

ವರ್ಲ್ಡ್‌ ಸಿನಿಮಾದಲ್ಲೇ ಟೈಮ್‌ ಲೂಪ್‌ನಲ್ಲಿ ಹಾರರ್‌ ಸಬ್ಜೆಕ್ಟ್‌ ಬಂದಿಲ್ಲ. ನಂಗೆ ಈ ಪ್ರಯೋಗ ಮಾಡಬೇಕು ಅನಿಸಿತು’ ಎಂದು ಲೋಹಿತ್ ಹೇಳಿದ್ದಾರೆ. ‘ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡುವ ಆಸೆಯಿಂದ ಬಂದಿದ್ದೆ. ಆದರೆ ಯಾವ ಹೀರೋಗಳೂ ಕಥೆ ಕೇಳಲೇ ಒಪ್ಪಲಿಲ್ಲ. ಆ ಫ್ರರ್ಸ್ಟೇಶನ್‌ನಲ್ಲೇ ಮಹಿಳಾ ಪ್ರಧಾನ ಹಾರರ್‌ ಸಿನಿಮಾ ಮಾಡಿದೆ. ಈಗ ಮತ್ತೊಂದು ವಿಶಿಷ್ಟ ಸಿನಿಮಾ ಮಾಡಿದ್ದೇನೆ. ನಾನು ಹೊಸ ಬಗೆಯಲ್ಲಿ ಸ್ಟೀರಿಯೋಟೈಪ್‌ಗಳನ್ನು ಮೀರಿ ಸಿನಿಮಾ ಮಾಡಲು ಪ್ರಯತ್ನಿಸುತ್ತೀನಿ. ಈ ಸಿನಿಮಾ ಕೂಡ ಹೊಸ ಬಗೆಯ ಸಿನಿಮಾ’ ಎನ್ನುತ್ತಾರೆ ರೋಹಿತ್.

ಒಂದೇ ಮುಹೂರ್ತದಲ್ಲಿ ಸೆಟ್ಟೇರಿದ ಎರಡು ಚಿತ್ರಗಳು: ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ’ಆ..ಈ..’ ಹಾಗೂ ’ರಾಜ ದೇವ ಸಿಂಧು’ ಚಿತ್ರಗಳು ಒಂದೇ ದಿನ ನಡೆದ ಮುಹೂರ್ತದಲ್ಲಿ ಸೆಟ್ಟೇರಿದವು. ಈ ಎರಡೂ ಚಿತ್ರಗಳನ್ನು ದುರ್ಗ ಮೋಹನ್ ನಿರ್ದೇಶಿಸಲಿದ್ದಾರೆ. ''ಕಥೆಗೆ ಪೂರಕವಾದ ’ಆ’ ದಿನಗಳು, ’ಈ’ ದಿನಗಳು ಶೀರ್ಷಿಕೆಯನ್ನು ಪ್ರೇಕ್ಷಕರ ಕುತೂಹಲಕ್ಕಾಗಿ ’ಆ..ಈ..’ ಅಂತ ಹೆಸರಿಡಲಾಗಿದೆ. ಕಾಶಿನಾಥ್ ಅವರ ಪ್ರೇರಣೆಯಿಂದ ಹಾಸ್ಯ ಕಥೆಯನ್ನು ಸಿದ್ದಪಡಿಸಿ, ಅದರೊಂದಿಗೆ ಸಂದೇಶವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಹಳ್ಳಿ ಬದುಕು, ಕಾರ್ಪೋರೇಟ್ ಜೀವನ. 

ನಾಗಬಾಬು ಕೂಡ ನನ್ನ ಸಹೋದರನೇ.. ಆದರೂ ಪವನ್ ಕಲ್ಯಾಣ್ ಮೇಲಿನ ವಿಶೇಷ ಪ್ರೀತಿಯನ್ನು ರಿವೀಲ್ ಮಾಡಿದ ಚಿರಂಜೀವಿ!

ಹಿಂದಿನ ಕಾಲ, ಇಂದಿನ ಕಾಲ ಎರಡರಲ್ಲೂ ಒಳ್ಳೇದು ಕೆಟ್ಟದ್ದು ಇರುತ್ತದೆ. ಇದರಲ್ಲಿ ಒಳ್ಳೆಯದನ್ನು ತೆಗೆದುಕೊಂಡರೆ ಸುಂದರ ಜೀವನ ಆಗುತ್ತದೆ ಎಂಬುದು ಚಿತ್ರಧ ಕತೆ'' ಎಂದು ನಿರ್ದೇಶಕ ದುರ್ಗ ಮೋಹನ್ ಹೇಳಿದರು. ಎರಡೂ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿರುವುದು ಭಾರ್ಗವ್. ರಾಘವೇಂದ್ರ ರಾಜ್‌ಕುಮಾರ್, ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶ್ವೇತಾಸಂಕೇತ್, ಮೋನಿಕಾವಸಿಷ್ಠ, ಆರಾ ಮುಂತಾದವರು ಇದ್ದಾರೆ. ಸಂಗೀತ ವಿವೇಕ್ ಜಂಗ್ಲಿ. ’ರಾಜ ದೇವ ಸಿಂಧು’ ಫ್ಯಾಂಟಸಿ ಸಿನಿಮಾ. ಮೂರು ಪಾತ್ರಗಳ ಮೂಲಕ ಈ ಚಿತ್ರದ ಕಥೆಯನ್ನು ಹೇಳಲಾಗುತ್ತಿದೆ. ಸ್ವಾತಿಪ್ರಭು, ಛವಸಖಿ ತಿಮ್ಮಯ್ಯ, ಆರಾ ಈ ಚಿತ್ರದ ನಾಯಕಿಯರು. ಪ್ರಜ್ವಲ್ ದೇವರಾಜ್ ಕ್ಯಾಮೆರಾ.