ಬಿರಿಯಾನಿ ಚಿನ್ನೆಗಿಲ್ಲದಿದ್ರೂ ಸುಮ್ಮನಿರ್ತೀರಿ, ಚಿತ್ರ ಚೆನ್ನಾಗಿಲ್ಲವೆಂದ್ರೆ ಹೇಳೋದ್ಯಾಕೆ?: ಮಾರ್ಟಿನ್ ಪರ ನಿಂತ ಕವಿರಾಜ್

ಭರ್ಜರಿ ಓಪನಿಂಗ್ ನಡುವೆಯೂ ಮಾರ್ಟಿನ್​ಗೆ ಕಟುಟೀಕೆ. ಚಿತ್ರಸಾಹಿತಿ ಕವಿರಾಜ್ ಹುಟ್ಟಿಹಾಕಿದ ಬಿರಿಯಾನಿ ಚರ್ಚೆ ವೈರಲ್.

Director Kaviraj talks about martin film and compares it with biryani vcs

ಮಾರ್ಟಿನ್ ಸಿನಿಮಾಗೆ ಅದೆಷ್ಟು ಭರ್ಜರಿ ಓಪನಿಂಗ್ ಸಿಕ್ಕಿದಿಯೋ ಅಷ್ಟೇ ನೆಗೆಟಿವ್ ರಿವ್ಯೂಸ್ ಕೂಡ ಕೇಳಿಬಂದ್ವು. ಈ ನಡುವೆ ಕೆಟ್ಟದಾಗಿ ರಿವ್ಯೂ ಮಾಡೋರ ವಿರುದ್ದ ಮಾರ್ಟಿನ್ ಟೀಂ ಕಂಪ್ಲೆಂಟ್ ಕೊಡೋದಕ್ಕೂ ಮುಂದಾಯ್ತು. ಸದ್ಯ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.  ಸಿನಿಮಾಗೂ ಬಿರಿಯಾನಿಗೂ ನಡುವೆ ಹೋಲಿಕೆ ಮಾಡಲಾಗ್ತಾ ಇದೆ. ಹಾಗಾದ್ರೆ ಏನಿದು ಸಿನಿಮಾ v.s ಬಿರಿಯಾನಿ ಗಲಾಟೆ..?  

ಯೆಸ್! ಕಳೆದ ವಾರ ತೆರೆಗೆ ಬಂದ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಅದೆಷ್ಟು ದೊಡ್ಡ ಓಪನಿಂಗ್ ಸಿಕ್ಕಿದೆ ಅನ್ನೋದು ನಿಮಗೆ ಗೊತ್ತೇ ಇದೆ. ದೊಡ್ಡ ಸ್ಟಾರ್ ನಟನೆಯ ಸಿನಿಮಾ,ಜೊತೆಗೆ ದೊಡ್ಡ ಬಜೆಟ್ ಸಿನಿಮಾ.. ಸಹಜವಾಗೇ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಮೊದಲ ವಾರಾಂತ್ಯವೇ ಬಾಕ್ಸಾಫೀಸ್​​ನಲ್ಲಿ ಭರ್ಜರಿ ಬೆಳೆಯೂ ಬಂದಿದೆ. ಆದರೆ ಮಾರ್ಟಿನ್  ಸಿನಿಮಾಗೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂಸ್ ಕೂಡ ಬಂದಿವೆ. ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಸಿನಿಮಾ ತುಂಬಾನೇ ಕೆಟ್ಟದಾಗಿದೆ ಅಂತ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಿರುಚಿತ್ರಗಳಲ್ಲಿ ನಟಿಸೋ ಸುಧಾಕರ್ ಗೌಡ ಅನ್ನೋ ಯುವ ನಟ ಈ ಬಗ್ಗೆ ತನ್ನ ಅಭಿಪ್ರಾಯವನ್ನ ಹಂಚಿಕೊಂಡಿದ್ದ. ಈತನ ಮೇಲೆ ಮಾರ್ಟಿನ್ ನಿರ್ದೇಶಕರು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಈ ನಡುವೆ ಬೇರೆ ಕೇಸ್​ವೊಂದರಲ್ಲಿ ಸುಧಾಕರ್ ಗೌಡ ಅರೆಸ್ಟ್ ಆಗಿದ್ದು, ಆತನನ್ನ ಮಾರ್ಟಿನ್ ಬಗ್ಗೆ ರಿವ್ಯೂ ಮಾಡಿದ್ದಕ್ಕೇನೆ ಅರೆಸ್ಟ್ ಮಾಡಲಾಗಿದೆ ಅಂತ ಸುದ್ದಿ ಹರಿದಾಡಿದೆ.

ಶುರುವಾಯ್ತು ಶ್ರೀಮುರಳಿ ಬಘೀರನ ಘರ್ಜನೆ; 'ರುಧಿರ ಧಾರಾ’ ಸಾಂಗ್ ರಿಲೀಸ್!

ಈ ಬಗ್ಗೆ ಖ್ಯಾತ ಗೀತಸಾಹಿತಿ ಕಮ್ ನಿರ್ದೇಶಕ ಕವಿರಾಜ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು,ಇಂಡಸ್ಟ್ರಿಯಲ್ಲಿ ದೊಡ್ಡ ಚರ್ಚೆ ಹುಟ್ಟಿಹಾಕಿದೆ. ಸಿನಿಮಾಗೂ ಬಿರಿಯಾನಿಗೂ ಹೋಲಿಕೆ ಮಾಡಿರೋ ಕವಿರಾಜ್, 200 ರಿಂದ 300 ಕೊಟ್ಟು ತಿಂದ ಬಿರಿಯಾನಿ ಚೆನ್ನಾಗಿಲ್ಲ ಅಂದ್ರೆ ಸುಮ್ಮನಿರ್ತೀತಿ. ನೂರಿನ್ನೂರು ಕೊಟ್ಟು ನೋಡಿದ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಯಾಕೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡ್ತೀರಿ ಅಂತ ಪ್ರಶ್ನೆ ಮಾಡಿದ್ದಾರೆ. ಸಿನಿಮಾವನ್ನು ಬಿರಿಯಾನಿಗೆ ಹೋಲಿಸಿರೋ ಈ ವಿಷ್ಯ ಇಂಡಸ್ಟ್ರಿಯಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ. ಇದು ಬಿರಿಯಾನಿಗೂ ಸ್ಟಾರ್ಸ್ ಕೊಟ್ಟು ರೇಟಿಂಗ್ ನೀಡುವ ಕಾಲ. ಅಂಥದ್ರಲ್ಲಿ ಲಕ್ಷಾಂತರ ಜನ ಸಿನಿಮಾವನ್ನು ನೋಡ್ತಾರೆ. ಕೋಟಿ ಕೋಟಿ ಹಣ ಹೂಡುವ ನೀವು ಕೋಟಿ ಹಣವನ್ನು ಸಂಪಾದನೆಯೂ ಮಾಡ್ತೀರಿ. ಅಂಥದ್ರಲ್ಲಿ ಪ್ರೇಕ್ಷಕರ ಟೀಕೆ-ವಿಮರ್ಷೆಗಳನ್ನ ಸ್ವೀಕರಿಸದೇ ಇದ್ರೇ ಹೇಗೆ ಅಂತ ಅನೇಕರು ಪ್ರಶ್ನೆ ಮಾಡ್ತಾ ಇದ್ದಾರೆ.

ಹಳೇ ಸಿನಿಮಾ ರೀ- ರಿಲೀಸ್ ಬಿಟ್ರೆ ಬೇರೆ ಗತಿಯಿಲ್ಲ; ದರ್ಶನ್ 'ನಮ್ಮ ಪ್ರೀತಿಯ ರಾಮು' ಮರುಬಿಡುಗಡೆ!

ಚಿತ್ರರಂಗದಲ್ಲಿರೋ ಅನೇಕರು ಕೂಡ ಕವಿರಾಜ್ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಸಿನಿಮಾ ಮಾಡೋವರೆಗೂ ಅದು ನಮ್ಮದು, ಪ್ರೇಕ್ಷಕರ ಮುಂದಿಟ್ಟ ಮೇಲೆ ಅದು ಆಡಿಯನ್ಸ್​ಗೆ ಸೇರಿದ್ದು, ಹಣ ಕೊಟ್ಟು ಸಿನಿಮಾ ನೋಡೋ ಪ್ರೇಕ್ಷಕರಿಗೆ ಸಿನಿಮಾವನ್ನ ಟೀಕಿಸುವ ಹಕ್ಕು ಇದೆ ಅಂತ ಹೇಳ್ತಾ ಇದ್ದಾರೆ. ಒಟ್ನಲ್ಲಿ ಮಾರ್ಟಿನ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಚರ್ಚೆಯನ್ನೇಹುಟ್ಟಿಹಾಕಿದೆ. ಈ ಬಿರಿಯಾನಿ ಚರ್ಚೆಯಂತೂ  ಬಿಸಿಯೇರ್ತಾ ಇದೆ. ಆದ್ರೆ ಇದು ಜಸ್ಟ್ ವಾದ-ವಿವಾದ ಎಬ್ಬಿಸದೇ ನಮ್ಮ ಕನ್ನಡ ಚಿತ್ರರಂಗ ತಪ್ಪು ಹೆಜ್ಜೆ ಇಡ್ತಾ ಇರೋದೆಲ್ಲಿ ಅನ್ನೋದನ್ನ ಶೋಧಿಸಬೇಕಿದೆ. ಚಿತ್ರರಂಗಕ್ಕೆ ಒಂದು ಪಾಠವಾಗಬೇಕಿದೆ.

Latest Videos
Follow Us:
Download App:
  • android
  • ios