ಮೈ ತುಂಬ ತುರಿಕೆ, ಕೀವು.. ಗುರುಪ್ರಸಾದ್‌ಗಿದ್ದ ಆ ಕೆಟ್ಟ ಖಾಯಿಲೆ ಯಾವ್ದು ಗೊತ್ತಾ?

 ನಿನ್ನೆಯಿಂದ ನಿರ್ದೇಶಕ ಗುರುಪ್ರಸಾದ್ ಸಾವಿನದೇ ಸುದ್ದಿ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದೇನೋ ನಿಜ. ಇದರ ಜೊತೆಗೆ ಅವರಿಗೆ ವಿಚಿತ್ರ ಕಾಯಿಲೆಯೂ ಇತ್ತು. ಅದ್ಯಾವುದು?

director guruprasad last days un diagnosed disease

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ದೇಹ ಪಂಚಭೂತಗಳಲ್ಲಿ ಲೀನವಾಗಿದೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಕುಟುಂಬಸ್ಥರಿಂದ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ಯೋಗರಾಜ್ ಭಟ್, ದುನಿಯಾ ವಿಜಯ್, ಡಾಲಿ, ಸತೀಶ್ ನೀನಾಸಂ, ತಬಲಾ ನಾಣಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.‌ 1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದವರು. ಇದು ಜಗ್ಗೇಶ್‌ ನಟನೆಯ 100ನೇ ಚಿತ್ರವಾಗಿತ್ತು. 2009 ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ ಎಂಬ ಮತ್ತೊಂದು ಸಾಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿಯೂ ಬಂದಿತ್ತು.

ನಂತರ ‘ಡೈರೆಕ್ಟರ್ ಸ್ಪೇಷಲ್’,’ಎರಡನೇ ಸಲ’ ಚಿತ್ರಗಳನ್ನು ಗುರು ನಿರ್ದೇಶಿಸಿದ್ದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ‘ಮಠ’, ‘ಎದ್ದೇಳು ಮಂಜುನಾಥ’,’ಮೈಲಾರಿ’, ‘ಹುಡುಗರು’,’ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ಮಠ ಗುರುಪ್ರಸಾದ್ ನಟಿಸಿದ್ದರು. ಜೊತೆಗೆ ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

ಇದು ಕೊನೆ ಮಾತು... ನಾನು ಸತ್ರೆ ನಿಮಗೇ ಶಾಪ ತಟ್ಟೋದು... ಗುರುಪ್ರಸಾದರ ಹಳೆ ವಿಡಿಯೋ ವೈರಲ್​

ಇದೆಲ್ಲ ಇವರ ಸಾಧನೆಯ ಲಿಸ್ಟ್. ಆದರೆ ಇವರ ಜೊತೆಗಿದ್ದವರಿಗೆ ಇವರ ಇತರೆ ವಿಷಯಗಳ ಬಗ್ಗೆ ಗೊತ್ತು. ಜಗ್ಗೇಶ್ ನಿನ್ನೆ ಎಳೆ ಎಳೆಯಾಗಿ ಗುರುಪ್ರಸಾದ್ ಅವರ ಒಳ್ಳೆತನ, ಕೆಟ್ಟತನ, ಅವರಿಗೆ ಅವರೇ ಅಪಾಯ ತಂದುಕೊಂಡ ಬಗೆಯನ್ನು ಹೇಳಿದ್ದರು. ಅವರು ಮಾತ್ರ ಅಲ್ಲ, ಇಂಡಸ್ಟ್ರಿಯ ಹಲವು ಹಿರಿ ತಲೆಗಳು ಮಠ ಗುರುಪ್ರಸಾದ್ ಬಗ್ಗೆ ಮಾತಾಡ್ತಾ, ಯಾವ ಥರ ಮನುಷ್ಯ ಬದುಕಬಾರದು ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಮಠ ಗುರುಪ್ರಸಾದ್ ಅನ್ನೋ ಮಾತನ್ನು ಹೇಳಿದ್ದರು. ಈ ನಡುವೆ ಬಂದು ವಿಚಾರ ಗುರುಪ್ರಸಾದ್ ಅವರಿಗಿದ್ದ ಕಾಯಿಲೆಯದು. ಆ ಬಗ್ಗೆಯೂ ಜಗ್ಗೇಶ್ ಹೇಳಿದ್ದಾರೆ. 'ಅವನಿಗೆ ಮೈಯೆಲ್ಲ ಕಡಿತ ಬರುತ್ತಲ್ಲ, ಆ ಕಾಯಿಲೆ ಇತ್ತು. ಕೆರೆದುಕೊಂಡಾಗ ಮುಖ, ಮೈಯಲ್ಲಿ ಕೀವು, ರಕ್ತ ಬರುತ್ತಿತ್ತು. ನಾವು ತಿನ್ನುವ ತಟ್ಟೆಗೆ ಕೈ ಹಾಕುತ್ತಿದ್ದ. ನಮಗೆ ಒಂದೇ ಭಯ. ಹಾಗಾಗಿ ಅವನಿಗೆ ಕಾಣದ ರೀತಿಯಲ್ಲಿ ದೂರ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಚಿಕಿತ್ಸೆಗೆ ಹೋಗು ಎಂದರೆ ಹೋಗುತ್ತಿರಲಿಲ್ಲ. ಇಡೀ ಮೈಯೆಲ್ಲ ಆಗಬೇಕು, ಅದನ್ನು ನೋಡಬೇಕು ಅಂತ ಹೇಳುತ್ತಿದ್ದ. ಅಂಥವರಿಗೆ ಏನು ಹೇಳೋದು? ತಪ್ಪು ಮಾಡಿ, ಮಾನಸಿಕವಾಗಿ ಕುಗ್ಗಿದ್ದ' ಎಂಬ ಮಾತನ್ನು ಜಗ್ಗೇಶ್ ಹೇಳಿದ್ದಾರೆ.

ಅಂದರೆ ಸೋರಿಯಾಸಿಸ್ ಥರ ಸಮಸ್ಯೆಯಿಂದ ಗುರುಪ್ರಸಾದ್ ನರಳ್ತಿದ್ರಾ? ಅವರಿಗೆ ಚರ್ಮದ ಅಲರ್ಜಿಗಳಿದ್ದವಾ ಅನ್ನೋ ಪ್ರಶ್ನೆಗಳೆಲ್ಲ ಅವರ ಸಿನಿಮಾ ನೋಡಿ ಅವರ ಬರಹಗಳ, ಸಿನಿಮಾಗಳ ಅಭಿಮಾನಿಗಳಾಗಿದ್ದ ಜನರ ಮುಂದಿದೆ. ಆದರೆ ಇದಕ್ಕೆಲ್ಲ ಉತ್ತರ ಹೇಳಲು ಗುರುಪ್ರಸಾದ್ ನಮ್ಮ ನಡುವೆ ಇಲ್ಲ. ಆದರೆ ಜಗ್ಗೇಶ್ ಮಾತು ಕೇಳಿದರೆ, ಈ ಸಮಸ್ಯೆಗೆ ಗುರುಪ್ರಸಾದ್ ಯಾವುದೇ ಮೆಡಿಸಿನ್ ಮಾಡಿದ ಹಾಗಿಲ್ಲ. ಮೈಯೆಲ್ಲ ತುರಿಸಿ ಗಾಯವಾದಾಗ ನೋಡಬೇಕು ಎಂಬುದು ಅವರ ಮಾನಸಿಕ ಸಮಸ್ಯೆಯನ್ನು ಹೇಳುತ್ತದೆ. ಇವೆಲ್ಲ ಗುರುಪ್ರಸಾದ್ ಕೊನೆಯ ದಿನಗಳಲ್ಲಿ ಹೇಗೆ ಬದುಕಿದ್ದರು ಎಂಬ ಚಿತ್ರ ಕಟ್ಟಿಕೊಡುತ್ತದೆ. ಸಿನಿಮಾ ರಂಗಕ್ಕೆ ಹೊಸತೇನೋ ಕೊಡಬೇಕು ಅಂತ ಬಂದ ಉತ್ತಮ ಚಿಂತನೆಯ ನಿರ್ದೇಶಕನೊಬ್ಬ ಪರಿಸ್ಥಿತಿಯ ಆಟಕ್ಕೆ ದಾಳವಾಗಿ ಹೇಗೆಲ್ಲ ಬದುಕು ಕೆಡಿಸಿಕೊಂಡ ಎಂಬುದು ಇದೆಲ್ಲದರಿಂದ ನಮಗೆ ತಿಳಿಯುತ್ತ ಹೋಗುತ್ತದೆ.

ಅಶಿಸ್ತು ರೂಢಿಸಿಕೊಂಡಿದ್ದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ನಿರ್ಗಮನ

Latest Videos
Follow Us:
Download App:
  • android
  • ios