ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್, ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ಅವರ ದೇಹದಾರ್ಢ್ಯತೆಗೆ ಹೆಸರುವಾಸಿ. ಈಗ ಅವರ AI ಚಿತ್ರಗಳು ವೈರಲ್ ಆಗುತ್ತಿವೆ. ಅಣ್ಣಾವ್ರು 65 ವರ್ಷಗಳವರೆಗೆ ಫಿಟ್ ಆಗಿದ್ದರು. ವೀರಪ್ಪನ್ ಕಿಡ್ನ್ಯಾಪ್ ನಂತರ ಆರೋಗ್ಯ ಹದಗೆಟ್ಟಿತು.
ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ (Dr Rajkumar) ಅವರಿಗೆ ಬಹಳ ಮುಖ್ಯ ಸ್ಥಾನವಿದೆ. ಕಪ್ಪು-ಬಿಳುಪು ಚಿತ್ರಗಳ ಕಾಲದಿಂದ ನಟನೆ ಆರಂಭಿಸಿ ಕಲರ್ ಚಿತ್ರಗಳ ಕಾಲದಲ್ಲಿ ಕೂಡ ಅಭಿನಯಿಸಿರುವ ಡಾ ರಾಜ್ ಅವರು ಕನ್ನಡದ ಕಳಶ ಎನ್ನಬಹುದು. ಡಾ ರಾಜ್‌ಕುಮಾರ್ ಅವರನ್ನು ಕನ್ನಡದ ಕಿರೀಟ ಎಂದರೂ ತಪ್ಪೇ ಅಲ್ಲ. ಕರ್ನಾಟಕ ರತ್ನ, ಪದ್ಮಭೂಷಣ, ಮೇರು ನಟ ಹೀಗೆ ಸಾಕಷ್ಟು ಅಲಂಕಾರಗಳನ್ನು ಹೊಂದಿರುವ ಡಾ ರಾಜ್ ಅವರನ್ನು ಕನ್ನಡ ಚಿತ್ರರಸಿಕರು 'ಅಣ್ಣಾವ್ರು' ಎಂದೇ ಪ್ರೀತಿಯಿಂದ ಕರೆಯುತ್ತಾರೆ.

ಇಂಥ ಡಾ ರಾಜ್‌ಕುಮಾರ್ ಅವರ ಏಐ (AI) ಫೋಟೋ ಈಗ ಬಿಡುಗಡೆ ಆಗುತ್ತಿದ್ದು ಸಾಕಷ್ಟು ವೈರಲ್ ಆಗುತ್ತಿದೆ. ಅಣ್ಣಾವ್ರು ತಮ್ಮ ದೇಹ ದಾರ್ಢ್ಯತೆಗೆ ಹೆಸರುವಾಸಿ ಆಗಿದ್ದರು. 'ಜೇಡರ ಬಲೆ' ಚಿತ್ರದಲ್ಲಿನ ಅವರ 'ದೇಹ ಪ್ರದರ್ಶನ'ದ ಬಳಿಕ ಅವರನ್ನು ಹಲವರು ಮನೆಗೇ ಹುಡುಕಿಕೊಂಡು ಬಂದು, ನಿಜವಾಗಿಯೂ ಅವರಿಗೆ ಅಷ್ಟು ಶೇಪ್ ಆಗಿರುವ ದಷ್ಟಪುಷ್ಟ ದೇಹ ಇದೆಯೇ ಎಂಬುದನ್ನು ಪರೀಕ್ಷಿಸಿ ಹೋಗಿದ್ದರಂತೆ. ಅದು ನಿಜ, ಡ್ಯೂಪ್ ಅಲ್ಲ ಅಂತ ತಿಳಿದು ತುಂಬಾ ಅಚ್ಚರಿಗೆ ಒಳಗಾಗಿದ್ದರಂತೆ.
ಡಾ ರಾಜ್ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!
ಡಾ ರಾಜ್‌ಕುಮಾರ್ ಅವರು ತಮ್ಮ ದೇಹ ದಾರ್ಢ್ಯತೆಗೆ ಬಹಳಷ್ಟು ಸಮಯ ಹಾಗೂ ಆಸಕ್ತಿಯನ್ನು ಮೀಸಲಾಗಿಟ್ಟಿದ್ದರು. ತಾವು ತೆಗೆದುಕೊಳ್ಳುವ ಆಹಾರ, ದಿನನಿತ್ಯದ ವಿಹಾರ ಸೇರಿದಂತೆ ಡಾ ರಾಜ್‌ಕುಮಾರ್ ಅವರು ಬಹಳಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ಜೊತೆಗೆ, ಒಂದು ದಿನ ಕೂಡ ಯೋಗ, ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ತಪ್ಪಿಸುತ್ತಿರಲಿಲ್ಲ. ಜೊತೆಗೆ ದೇಹವನ್ನು ಹಾಳು ಮಾಡುವಂಥ ಯಾವುದೇ ದುರಾಭ್ಯಾಸವನ್ನು ಅಭ್ಯಾಸ ಮಾಡಿಕೊಂಡಿರಲಿಲ್ಲ. ತಮ್ಮ ದೇಹದ ಫಿಟ್ನೆಸ್ ಬಗ್ಗೆ, ಆಕಾರ ಹಾಗೂ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಹೊಂದಿದ್ದ ಡಾ ರಾಜ್‌ಕುಮಾರ್ ಅವರು ಅದನ್ನು ಉಳಿಸಿಕೊಂಡಿದ್ದರು.
ಇದೀಗ ಇಂದಿನ ಟೆಕ್ನಾಲಾಜಿ ಯುಗದಲ್ಲಿ, ಎಲ್ಲ ಕಡೆ ಎಐ (AI) ತನ್ನ ಕೈಚಳಕ ತೋರಿಸುತ್ತಿರುವುದು ಗೊತ್ತೇ ಇದೆ. ಇಂದು ಡಾ ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಫೋಟೋ ಕೊಟ್ಟಾಗ AI ತನ್ನ ಕೆಲಸ ತಾನು ಮಾಡಿ, ಡಾ ರಾಜ್‌ಕುಮಾರ್ ಅವರ ಫೋಟೋಗಳನ್ನು ಬಿಡುಗಡೆ ಮಾಡಿದೆ. ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡಿ ಹಲವರ ಮೈ ರೋಮಾಂಚನಕ್ಕೆ ಒಳಗಾಗಿದೆ. ಕಾರಣ, AI ಮಾಡಿಕೊಟ್ಟಿರುವ ಫೋಟೋದಲ್ಲಿ ಡಾ ರಾಜ್‌ಕುಮಾರ್ ಅವರು ಅದೆಷ್ಟು ಫೀಟ್ ಹಾಘು ಹ್ಯಾಂಡ್‌ಸಮ್ ಆಗಿ ಕಾಣಿಸುತ್ತಾರೆ ಎಂದರೆ ನೋಡಿದವರು ಆಶ್ವರ್ಯ ಹಾಗೂ ಖುಷಿಯಿಂದ ಶಾಕ್ ಆಗುತ್ತಾರೆ.
ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!
ಅಂದಹಾಗೆ, ಆಲ್‌ಮೋಸ್ಟ್ 65 ವರ್ಷಗಳ ವರೆಗೆ ಕೂಡ ಡಾ ರಾಜ್‌ಕುಮಾರ್ ಅವರು ಫಿಟ್ & ಫೈನ್ ಆಗಿಯೇ ಇದ್ದರು. ಆಗಾಗ ಅಲ್ಪಸ್ವಲ್ಪ ಮಂಡಿನೋವು ಎನ್ನುತ್ತಿದ್ದ ಡಾ ರಾಜ್ ಅವರು ದಿನವೂ ವಾಕಿಂಗ್ ತಪ್ಪಿಸುತ್ತಿರಲಿಲ್ಲ. ಆದರೆ ವೀರಪ್ಪನ್ ಕಡೆಯಿಂದ ಕಿಡ್ನಾಪ್ ಆದ ಬಳಿಕ ಡಾ ರಾಜ್‌ಕುಮಾರ್ 108 ದಿನಗಳ ಕಾಲ ದಟ್ಟವಾದ ಅರಣ್ಯದಲ್ಲಿ ಇದ್ದ ಸಮಯದಲ್ಲಿ ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಅದಾದ ಬಳಿಕ ಹಾಗೂ ಆಗಾಗ ಅನಾರೋಗ್ಯಕ್ಕೆ ಒಳಗಾದ ನಟ ಡಾ ರಾಜ್‌ಕುಮಾರ್ ಅವರು ಕೊನೆಗೆ ರಂದು ಇಹಲೋಕ ತ್ಯಜಿಸಿಬಿಟ್ಟರು.
