ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ಒಟ್ಟಾಗಿ ಕಾಣಿಸಿಕೊಂಡ ನವಗ್ರಹ ಸಿನಿಮಾ ರಿಲೀಸ್‌ ಆಗಿ 12 ವರ್ಷ ಪೂರೈಸಿದೆ. 2008ರಲ್ಲಿ ದೊಡ್ಡ ದಾಖಲೆ ಮಾಡಿದ ಈ ಚಿತ್ರದ ಬಗ್ಗೆ ನಿರ್ದೇಶಕ ದಿನಾಕರ್ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಪಾತ್ರಗಳ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಹಾಗೂ ವಿನೋದ್ ಸದ್ಯಕ್ಕೆ ಟ್ರೆಂಡ್‌ನಲ್ಲಿರವ ಕಾರಣ ಈ ವಿಡಿಯೋ ವೈರಲ್ ಆಗುತ್ತಿದೆ..

ನವಗ್ರಹ ಚಿತ್ರಕ್ಕೆ 12 ವರ್ಷ; ಭಾಗ-2ಕ್ಕೆ ಡಿ-ಬಾಸ್‌ ಸಾಥ್‌ ಕೊಡುತ್ತಾರಾ? 

ನವಗ್ರಹ ಚಿತ್ರದಲ್ಲಿ ಪ್ರತಿಯೊಬ್ಬ ನಟನ ಪಾತ್ರಕ್ಕೂ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದೆ. ಅದರಲ್ಲಿ ಜಗ್ಗು ಪಾತ್ರ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಪ್ರಮುಖ ಪಾತ್ರವಾದರೂ ಖಳನಾಯಕನ ಪಾತ್ರವಾಗಿತ್ತು. ಚಿತ್ರಕತೆ ಚರ್ಚೆ ಸಮಯದಲ್ಲಿ ಈ ಪಾತ್ರವನ್ನು ಮಾಡಲು ವಿನೋದ್ ಪ್ರಭಾಕರ್ ಆಯ್ಕೆಯಾಗಿದ್ದರು. ಆದರೆ ಖಳನಾಯಕನ ಪಾತ್ರವಾದ ಕಾರಣ ವಿನೋದ್ ಹಿಂದೇಟು ಹಾಕಿದ್ದಾರೆ. ಕತೆ ಹೇಳಿ ಸ್ವತಃ ದರ್ಶನ್ ಈ ಪಾತ್ರ ಮಾಡಲು ಒಪ್ಪಿಕೊಂಡರಂತೆ. 

ನವಗ್ರಹ ಚಿತ್ರದ ಕತೆ ಹೇಳಿದ ತಕ್ಷಣವೇ ದರ್ಶನ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.  ನೆಗೆಟಿವ್ ಶೇಡ್ ಆದರೂ ಪರ್ವಾಗಿಲ್ಲ, ನಾನೇ ಮಾಡುತ್ತೇನೆ ಎಂದು ಡಿ ಬಾಸ್ ಹೇಳಿದ್ದರಂತೆ. 100 ದಿನಗಳ ಯಶಸ್ವಿ ಪ್ರದರ್ಶನ ಪಡೆದ ನವಗ್ರಹ ಎರಡನೇ ಭಾಗ ಬರಬೇಕು ಎಂದು ಅಭಿಮಾನಿಗಳು ದಿನಕರ್ ಬಳಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸದ್ಯಕ್ಕೆ ದರ್ಶನ್ ರಾಬರ್ಟ್‌ ಸಿನಿಮಾ ರಿಲೀಸ್ ಆಗಬೇಕಿದೆ, ವಿನೋದ್ ಪ್ರಭಾಕರ್ ಶ್ಯಾಡೋ ಸಿನಿಮಾ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶಣ ಕಾಣುತ್ತಿದೆ