Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗುತ್ತದೆ 'ಬ್ಯಾಚುಲರ್ಸ್' ಹಾವಳಿ: ಹಾಲಿವುಡ್‌ ಸಿರೀಸ್‌ನ ಪ್ರೇರಣೆ ಪಡೆದ 'ಬ್ಯಾಚುಲರ್ ಪಾರ್ಟಿ'

ಬ್ಯಾಚುಲರ್ ಪಾರ್ಟಿ. ಈ ಸಿನಿಮಾ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಅದಕ್ಕೆ ಕಾರಣ ಬ್ಯಾಚುಲರ್ ಪಾರ್ಟಿ ಟ್ರೈಲರ್ ಒಂದು ಕಾರಣ ಆದ್ರೆ, ಮತ್ತೊಂದು ಕಿರಿಕ್ ಪಾರ್ಟಿ ಸಿನಿಮಾ ತಂಡವೇ ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡಿ ಬೆಳ್ಳಿತೆರೆಗೆ ತರುತ್ತಿರೋದು. 
 

Diganth Loose Mada Yogi Starrer Bachelor party release on January 26 gvd
Author
First Published Jan 24, 2024, 8:08 PM IST

ಬ್ಯಾಚುಲರ್ ಪಾರ್ಟಿ. ಈ ಸಿನಿಮಾ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಅದಕ್ಕೆ ಕಾರಣ ಬ್ಯಾಚುಲರ್ ಪಾರ್ಟಿ ಟ್ರೈಲರ್ ಒಂದು ಕಾರಣ ಆದ್ರೆ, ಮತ್ತೊಂದು ಕಿರಿಕ್ ಪಾರ್ಟಿ ಸಿನಿಮಾ ತಂಡವೇ ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡಿ ಬೆಳ್ಳಿತೆರೆಗೆ ತರುತ್ತಿರೋದು. 'ಬ್ಯಾಚುಲರ್ ಪಾರ್ಟಿ'ಯಲ್ಲಿ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. 

ಆದ್ರೆ ಏನೋ ಮಾಡೋಕೆ ಹೋಗಿ ಮತ್ತೇನೋ ಆಗಿ ಏನೆಲ್ಲಾ ಎಡವಟ್ಟುಗಳಾಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ. ಇದೇ ವಾರ ಜನವರಿ 26ಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.  ಬ್ಯಾಚುಲರ್ ಪಾರ್ಟಿ ಸಿನಿಮಾ ನಿರ್ಮಾಪಕ ಕಿರಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿಯಲ್ಲಿ ಹೇಗೆ ಎಮೋಷನಲ್ ಜತೆ ಲವ್, ಕಾಮಿಡಿ ಸ್ಟೋರಿ ಇತ್ತೋ ಅದೇ ರೀತಿ ಬ್ಯಾಚುಲರ್ ಪಾರ್ಟಿಯಲ್ಲೂ ಎಮೋಷನಲ್ ಲವ್ ಜೊತೆ ಸಿಕ್ಕಾಪಟ್ಟೆ ಕಾಮಿಡಿ ಇದೆ. ಈ ಸಿನಿಮಾದ ಟ್ರೈಲರ್ ನೋಡಿದವರೆಲ್ಲಾ ಕಿರಿಕ್ ಪಾರ್ಟಿ ಸಿನಿಮಾ ಮೇಲಿದ್ಧ ಭರವಸೆಯೇ ಈ ಸಿನಿಮಾ ಮೇಲೂ ಇದೆ ಅನ್ನುತ್ತಿದ್ದಾರೆ. 

ಬಾಲಿವುಡ್ ಸ್ಟೈಲ್‌ನಲ್ಲಿರುವ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ರಿಷಬ್ ರಕ್ಷಿತ್ ಗರಡಿಯಲ್ಲಿ ಬೆಳೆದೆ ನಿರ್ದೇಶಕ ಅಭಿಜಿತ್ ಮಹೇಶ್ ಆಕ್ಷನ್ ಕಟ್ ಹೇಳಿರೋ ಮೊದಲ ಸಿನಿಮಾ ಇದು. ಈ ಸಿನಿಮಾದ ಸ್ಯಾಂಪಲ್ಸ್ಗಳನ್ನ ನೋಡುತ್ತಿದ್ರೆ ಹಾಲಿವುಡ್‌ನ 'ಹ್ಯಾಂಗೋವರ್' ಸರಣಿಯಿಂದ ಪ್ರೇರಣೆಗೊಂಡು ಬ್ಯಾಚುಲರ್ ಪಾರ್ಟಿ ಸಿದ್ಧವಾದಂತೆ ಕಾಣ್ತಿದೆ. ಸಿನಿಮಾದಲ್ಲಿ ಬಾಲಾಜಿ ಮನೋಹರ್, ಪ್ರಕಾಶ್ ತುಂಬಿನಾಡು ಮುಖ್ಯಭೂಮಿಕೆಯಲ್ಲಿದ್ದು, ಇನ್ನುಳಿದಂತೆ ಶೈನ್ ಶೆಟ್ಟಿ, ಪವನ್ ಕುಮಾರ್, ವಿಕಾಸ್ ವಿಕ್ಕಿಪಿಡಿಯ, ಎನ್. ಸೋಮೇಶ್ವರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow Us:
Download App:
  • android
  • ios