Asianet Suvarna News Asianet Suvarna News

ದರ್ಶನ್ ಜೊತೆಗಿನ ಸ್ನೇಹ 'ಕಾಟೇರ' ನೋಡಿದ್ರಾ ಸುದೀಪ್‌?: ಕಿಚ್ಚನಿಗೆ ಸಿನಿಮಾ ತೋರಿಸಿದ್ರಾ ಡೈರೆಕ್ಟರ್ ತರುಣ್?

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ. ಇದಿಷ್ಟಿದ್ರೆ ಎಲ್ಲಾ ಸಂಬಂಧಗಳು ಸರಿಯಾಗಿರುತ್ತೆ. ಈ ಸ್ನೇಹ ಪ್ರೀತಿ ಹುಡುಕಾಟದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ನಟ ದರ್ಶನ್ ಇದ್ದಂತೆ ಕಾಣ್ತಿದೆ. ಇಬ್ಬರ ಮಧ್ಯೆ ಹಳೇ ಸ್ನೇಹ ಪ್ರೀತಿ ಮತ್ತೆ ಮೊಳಕೆ ಒಡೆದಂತಿದೆ. 

did kichcha sudeep watch kaatera movie heres his answer to a fans question gvd
Author
First Published Jan 18, 2024, 9:56 AM IST

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ. ಇದಿಷ್ಟಿದ್ರೆ ಎಲ್ಲಾ ಸಂಬಂಧಗಳು ಸರಿಯಾಗಿರುತ್ತೆ. ಈ ಸ್ನೇಹ ಪ್ರೀತಿ ಹುಡುಕಾಟದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ನಟ ದರ್ಶನ್ ಇದ್ದಂತೆ ಕಾಣ್ತಿದೆ. ಇಬ್ಬರ ಮಧ್ಯೆ ಹಳೇ ಸ್ನೇಹ ಪ್ರೀತಿ ಮತ್ತೆ ಮೊಳಕೆ ಒಡೆದಂತಿದೆ. ಯಾಕಂದ್ರೆ ಬಾದ್ ಷಾ ಕಿಚ್ಚ ಸುದೀಪ್ ತನ್ನ ಒಂದು ಕಾಲದ ಆತ್ಮೀಯ ಸ್ನೇಹಿತ ನಟ ದರ್ಶನ್ ಅಭಿನಯಿಸಿರೋ ಕಾಟೇರ ಸಿನಿಮಾ ನೋಡಿದ್ದಾರಂತೆ. ಕಿಚ್ಚ ಸುದೀಪ್ ಬಳಸೋ ಸೋಷಿಯಲ್ ಮೀಡಿಯಾ ಅಕೌಂಟ್ಗೆ ದರ್ಶನ್ ಅಭಿಮಾನಿಗಳಿಂದ ಒಂದು ಪ್ರಶ್ನೆ ಎದುರಾಗಿತ್ತು. ನೀವು ನಿಮ್ಮ ಕುಚಿಕು ಗೆಳೆಯನ ಕಾಟೇರಾ ಸಿನಿಮಾ ನೋಡಿದ್ದೀರಾ ಅಂತ ಸುದೀಪ್ರನ್ನ ಪ್ರಶ್ನೆ ಮಾಡಿದ್ರು. 

ಇದಕ್ಕೆ ಕಿಚ್ಚ ಖಡಕ್ ಉತ್ತರ ಕೊಟ್ಟಿದ್ದಾರೆ. ‘ನಾನು ನೋಡಿಲ್ಲ ಎಂದು ನಿಮಗೆ ಯಾರಾದ್ರೂ ಹೇಳಿದ್ರಾ’ ಅನ್ನೋ ಅರ್ಥದಲ್ಲಿ ಕಿಚ್ಚ ರೀ ಟ್ವೀಟ್ ಮಾಡಿದ್ದಾರೆ. ಕಾಟೇರ ಸಿನಿಮಾವನ್ನ ಸಿನಿ ರಂಗದ ಸೆಲೆಬ್ರೆಟಿಗಳು ನೋಡಲಿ ಅಂತ ಕಾಟೇರ ಸೆಲಿಬ್ರೆಟಿ ಶೋ ಹಾಕಿದ್ರು. ಆದ್ರೆ ಆ ದಿನ ಸುದೀಪ್ ಗೈರಾಗಿದ್ರು. ಕಾರಣ ಕಿಚ್ಚನ ಮ್ಯಾಕ್ಸ್ ಶೂಟಿಂಗ್ ಚನ್ನೈನಲ್ಲಿ ನಡೀತಿತ್ತು. ಈಗ ಮೊನ್ನೆ ಬೆಂಗಳೂರಿಗೆ ಬಂದಿರೋ ಸುದೀಪ್ ಕಾಟೇರ ಸಿನಿಮಾ ನೋಡಿದ್ದಾರೆ ಅನ್ನೋ ಟಾಕ್ ಇದೆ. ಕಾಟೇರ ನಿರ್ದೇಶಕ ತರುಣ್ ಜನವರಿ 12 ರಂದು ಕಿಚ್ಚನ ಭೇಟಿಯಾಗಿದ್ದು, ಕಿಚ್ಚನಿಗೆ ಕಾಟೇರ ನೋಡೊ ಸಕಲ ವ್ಯವಸ್ಥೆ ಮಾಡಿ ಬಂದಿದ್ದಾರೆ. 

ಖಾಸಗಿ ಹೋಮ್ ಥಿಯೇಟರ್ ನಲ್ಲಿ ಕಿಚ್ಚ ಕಾಟೇರ ಸಿನಿಮಾ ನೋಡಿದ್ದಾರಂತೆ. ಹೀಗಾಗೆ ಸುದೀಪ್ ಟ್ವೀಟ್ ‘ನಾನು ನೋಡಿಲ್ಲ ಎಂದು ನಿಮಗೆ ಯಾರಾದ್ರೂ ಹೇಳಿದ್ರಾ’ ಅನ್ನೋ ಅರ್ಥದಲ್ಲಿನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಕಿಚ್ಚ ಹಾಗು ದರ್ಶನ್ ಸ್ನೇಹ ಹಳಸಿತ್ತು ಅನ್ನೋದು ಗುಟ್ಟಾಗೇನು ಇರಲಿಲ್ಲ. ಸುದೀಪ್ ಬರೆದ ಬೇಸರದ ಪತ್ರವೇ ಅದನ್ನೆಲ್ಲಾ ಹೇಳಿತ್ತು. ಆದ್ರೆ ಹಳಿ ತಪ್ಪಿರೋ ಇವರ ಸ್ನೇಹವನ್ನ ಟ್ರ್ಯಾಗ್ಗೆ ತರೋದ್ಯಾರು ಅಂತ ಗಾಂಧಿನಗರ ಕಾಯ್ತಿತ್ತು. ಅದಕ್ಕೆ ಗಳಿಗೆ ಸಿಕ್ಕಿದ್ದು, ಕಳೆದ ವರ್ಷ ನಡೆದ ಸುಮಲತಾ ಅಂಬರೀಶ್ ರ ಹುಟ್ಟುಹಬ್ಬದ ಪಾರ್ಟಿಯಲ್ಲಿ. 

ನಿಮ್ಮ ಎತ್ತರ ಐದು ಅಡಿ, ಚಪ್ಪಲಿ ಮೂರು ಅಡಿ: ಟಗರು ಪುಟ್ಟಿ ಮಾನ್ವಿತಾ ಫೋಟೋಶೂಟ್‌ ನೋಡಿ ಕಾಲೆಳೆದ ನೆಟ್ಟಿಗ!

ಈ ಪಾರ್ಟಿಯಲ್ಲಿ ಎದುರು ಬದುರಾಗಿದ್ರು ಸುದೀಪ್ ದರ್ಶನ್ ಇದನ್ನ ಮಾಡಿಸಿದ್ದು ಕಾಟೇರ ಸಿನಿಮಾ ನಿರ್ಮಾಪಕ ರಾಕ್ಲೈನ್ ವೆಂಕಟೇಶ್.  ಸುಮಲತಾ ಪಾರ್ಟಿ ಬಳಿಕ ದರ್ಶನ್ ಕಿಚ್ಚನ ಹೆಸರನ್ನ ಹಲವು ಭಾರಿ ಹೇಳಿದ್ದಾರೆ. ಸುದೀಪ್ ಕೂಡ ದರ್ಶನ್ರನ್ನ ಬಿಗ್ ಸ್ಟಾರ್ ಅಂತ ಕರೆದಿದ್ದಾರೆ. ಹೀಗಾಗೆ ಒಳಗೊಳಗೆ ಯಾರಿಗೂ ಗೊತ್ತಾಗದ ಹಾಗೆ ಇಬ್ಬರ ಫ್ರೆಂಡ್ಶಿಪ್ ಸರಿ ಹೋಗಿದೆ ಅನ್ನೋ ನಂಬಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಈಗ ಸುದೀಪ್ ಕಾಟೇರ ಸಿನಿಮಾ ನೋಡಿರೋದಕ್ಕೆ ಹಿಂಟ್ ಸಿಕ್ಕಿದ್ದು, ದರ್ಶನ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

Follow Us:
Download App:
  • android
  • ios