ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹಲ್‌ಚಲ್‌ ಎಬ್ಬಿಸಿದ   'ದಿಯಾ' ಸಿನಿಮಾ ಕನ್ನಡ ಸಿನಿ ಪ್ರೇಮಿಗಳ ಮನ ಗೆದ್ದಿದೆ. ಅರೇ!! ಇಂತ ಸೂಪರ್ ಸಿನಿಮಾವನ್ನ  ನಾವೇಕೆ ಮಾಡಬಾರದು ಎಂದು ನಮ್ಮ ಅಕ್ಕ-ಪಕ್ಕದ  ಇಂಡಸ್ಟ್ರಿ ಅವರು ಈಗ 'ದಿಯಾ'ನ ರಿಮೀಕ್‌ ಮಾಡುತ್ತಿದ್ದಾರಂತೆ.

 'ದಿಯಾ' ಚಿತ್ರದ ಆದಿ ಅಲಿಯಾಸ್ ಪೃಥ್ವಿ ಪಾತ್ರ ನೋಡಿ ಇದ್ರೆ ಇಂಥ  ಹುಡುಗ ನಮ್ಮ ಲೈಫ್‌ ಪಾರ್ಟನರ್ ಆಗಿರಬೇಕಪ್ಪಾ ಅನ್ನೋ  ಹುಡುಗಿಯರೇ ಜಾಸ್ತಿ. ಸೈಲೆಂಟ್‌ ಆಗಿ ಸ್ಮೈಲ್ ಮಾಡುತ್ತಾ ಕಣ್ಣಲ್ಲೇ ಹುಡುಗರ ನಿದ್ದೆ ಗೆಡಿಸಿದ ಹುಡುಗಿ ಖುಷಿ ಈಗ ಚಂದನವನದ ಲೈಮ್‌ ಲೈಟ್‌ನಲ್ಲಿದ್ದಾರೆ.

ಪ್ರಶಂಸೆ ಮಾತ್ರ ಸಾಕಾಗಲ್ಲ, ಕಲೆಕ್ಷನ್‌ ಮುಖ್ಯ: ಅಶೋಕ್‌

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು OTT Platformನಲ್ಲಿ ತುಂಬಾನೇ ಹೆಸರು ಗಳಿಸುತ್ತಿವೆ . ಚಿತ್ರಮಂದಿರದಲ್ಲಿ  ಪಡೆದ ಮೆಚ್ಚುಗೆಗಿಂತಲೂ  ಅಮೇಜಾನ್‌ನಲ್ಲಿ ನೋಡಿ ಸಿನಿ ರಸಿಕರು ತಮ್ಮ ನೆಚ್ಚಿನ  ನಟ-ನಟಿಯರಿಗೆ ಮೆಸೇಜ್‌ ಅಥವಾ ಕಾಲ್‌ ಮಾಡಿ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಅಭಿಮಾನಿಗಳು ಮಾತ್ರ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ....

ಸ್ಟಾರ್ ನಟನಿಂದ  ಪೃಥ್ವಿಗೆ ಫೋನ್ ಕಾಲ್:

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಅಪ್ಪು  ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಚಿತ್ರಕಥೆ ಅಥವಾ ಪಾತ್ರಧಾರಿ ಇಷ್ಟವಾದರೆ ವೈಯಕ್ತಿಕವಾಗಿ ಕರೆ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.

'ದಿಯಾ' ಸೂಪ್‌ ಹೃದಯ ಕದ್ದ ಪೃಥ್ವಿ ಅಂಬಾರ್ 'ಜೊತೆ ಜೊತೆಯಲಿ'ಯ ನೀಲ್!

'ಇತ್ತೀಚಿಗೆ  ಪುನೀತ್‌ ಸರ್  ದಿಯಾ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಂತರ ನಿರ್ದೇಶಕರಿಗೆ ಕರೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ನನ್ನ ನಂಬರ್ ಪಡೆದುಕೊಂಡಿದ್ದಾರೆ. ನನ್ನ ನಟನೆ ಬಗ್ಗೆ ಮಾತನಾಡಿ ಮೆಚ್ಚಿಕೊಂಡಿದ್ದಾರೆ  ಅಷ್ಟೇ ಅಲ್ಲದೆ ಲಾಕ್‌ಡೌನ್‌ ಮುಗಿದ ಮೇಲೆ ಭೇಟಿಯಾಗೋಣ ನಾನು ಇನ್ನೊಮ್ಮೆ  ಕರೆ ಮಾಡ್ತಿನಿ ' ಹೀಗೆ ಪುನೀತ್‌ ಹೇಳಿದರು ಎಂದು ಪೃಥ್ವಿ ಆಂಬರ್ ಹೇಳಿಕೊಂಡಿದ್ದಾರೆ. 

ಪುನೀತ್‌ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಹೊಸಬರ ಸಿನಿಮಾಗಳಿಗೆ ಅವಕಾಶಗಳನ್ನು ನೀಡಲಾಗುತ್ತಿದ್ದು  ಪೃಥ್ವಿ ಅವರಿಗೂ ಮುಂಬರುವ  ದಿನಗಳಲ್ಲಿ ಸಿಹಿ ಸುದ್ದಿ ನೀಡುವ  ಸಾಧ್ಯತೆ ಇದೆ ಎನ್ನಲಾಗಿದೆ. 

ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

ದಿಯಾ ಚಿತ್ರದ ಸಾಲಿನಲ್ಲಿ ಲೈಮ್‌ ಲೈಟ್‌ಗೆ ಬಂದ ಇನ್ನೊಂದು ಸಿನಿಮಾವೇ 'ಲವ್‌ ಮಾಕ್ಟೇಲ್‌'. ಚಿತ್ರಮಂದಿರಕ್ಕಿಂತಲೂ  ಅಮೇಜಾನ್‌ನಲ್ಲಿ ವೀಕ್ಷಿಸಿ ಮೆಚ್ಚಿಕೊಂಡವರೇ ಹೆಚ್ಚು. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಲವ್‌ ಮಾಕ್ಟೇಲ್‌  ಎರಡನೇ ಭಾಗದ ಚಿತ್ರಕಥೆ ರೆಡಿ ಮಾಡುತ್ತಿದ್ದಾರಂತೆ.